Get Updates
Get notified of breaking news, exclusive insights, and must-see stories!

ವೈರಲ್ ವಿಡಿಯೋ : ರಾಖಿ ಸಾವಂತ್ ಇನಿಯನಿಗೆ ಬಿತ್ತು ಭರ್ತಿ ಒದೆ

ನವದೆಹಲಿ, ಜನವರಿ 18 : ಕಳೆದ ವರ್ಷ ಕಾಶ್ಮೀರದಲ್ಲಿ ಯುವಕರ ತಂಡದಿಂದ ಹೊಡೆತ ತಿಂದಿದ್ದೆ ಎಂದು ನಟನೆ ಮಾಡಿದ್ದ ಕುಖ್ಯಾತ ವ್ಯಕ್ತಿಯೊಬ್ಬನನ್ನು ವ್ಯಕ್ತಿಯೊಬ್ಬ ನಿಜವಾಗಿಯೂ ಹಿಡಿದು ಬಾರಿಸಿರುವ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ನೇರವಾಗಿ ಪ್ರಸಾರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆ ಕುಖ್ಯಾತ ವ್ಯಕ್ತಿ ಮತ್ತಾರೂ ಅಲ್ಲ, ನಾಟಕೀಯತೆಗೆ, ಢೋಂಗಿತನಕ್ಕೆ ಹೆಸರುವಾಸಿಯಾಗಿರುವ ವಿವಾದಪ್ರಿಯೆ, ಪ್ರಚಾರಪ್ರಿಯೆ, 40 ವರ್ಷದ 'ತರುಣಿ' ರಾಖಿ ಸಾವಂತ್ ಅವರನ್ನು ವರಿಸಲಿರುವ 46 ವರ್ಷದ 'ತರುಣ' ಚೆಲುವಾಂತ ಚೆನ್ನಿಗ ದೀಪಕ್ ಕಲಾಲ್.

ಅಭಿರುಚಿಹೀನ, ಅಸಹ್ಯಕರ, ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದೇ ದೀಪಕ್ ಕಲಾಲ್ ನನ್ನು ನಡುರಸ್ತೆಯಲ್ಲಿ ಬಡಿಯಲು ಕಾರಣ. 'ದಯವಿಟ್ಟು ಕ್ಷಮಿಸಿ, ಇನ್ನು ಅಂಥ ತಪ್ಪು ಮಾಡಲ್ಲ' ಎಂದು ಕಲಾಲ್ ಪರಿಪರಿಯಾಗಿ ಬೇಡಿಕೊಳ್ಳುತ್ತ, ಕಾಲಿಗೆ ಬೀಳುತ್ತಿದ್ದರೂ ಆತನನ್ನು ನಿರ್ದಯವಾಗಿ ಹೊಡೆಯಲಾಗಿದೆ.

Rakhi Sawants boy friend beaten up in New Delhi

ರ‍್ಯಾಪರ್ ಫಜಿಲ್‌ಪುರಿಯಾನ ಮ್ಯಾನೇಜರ್ ಎರಡು ದಿನಗಳ ಹಿಂದೆಯೇ ದೆಹಲಿಯಲ್ಲಿ ಕಾಮಿಡಿಯನ್ ದೀಪಕ್ ಕಲಾಲ್ ನನ್ನು ಹಿಡಿದು ಬಡಿದಿದ್ದಾರೆ. ಇನ್ನೊಮ್ಮೆ ಅಂಥ ಅಸಹ್ಯಕರ ವಿಡಿಯೋಗಳನ್ನು ಹಾಕಬೇಡ ಎಂದು ಹೇಳಿದ್ದಲ್ಲದೆ, ದೀಪಕ್ ಕಣ್ಣೀರುಗರೆಯುತ್ತಿದ್ದರೂ ಬಿಡದೆ ಹೊಡೆದಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ದೀಪಕ್ ಕಲಾಲ್ ಮನದನ್ನೆ ರಾಖಿ ಸಾವಂತ್ ಅವರು, ಇದು ನಿಜಕ್ಕೂ ಖೇದಕರ ಸಂಗತಿ. ದೀಪಕ್ ಮಾಡಿರುವುದು ನಿಮಗೆ ಸರಿಯಿಲ್ಲ ಅನ್ನಿಸಿದ್ದರೆ ಕಾನೂನನ್ನು ಏಕೆ ಕೈಗೆ ತೆಗೆದುಕೊಳ್ಳುತ್ತೀರಿ? ಪೊಲೀಸರಿಗೆ ದೂರು ನೀಡಿ. ಹಿಂದೂಸ್ತಾನದಲ್ಲಿ ಕಾನೂನು ಸುವ್ಯವಸ್ಥೆಯೆಂಬುದು ಇಲ್ಲವೇ ಇಲ್ಲ ಎಂದು ರಾಖಿ ಕೆಂಡ ಕಾರಿದ್ದಾರೆ.

Rakhi Sawants boy friend beaten up in New Delhi

ರಾಖಿ ಸಾವಂತ್ ಜೊತೆ ಮದುವೆಯಾದ ಮೇಲೆ ಪ್ರಥಮ ರಾತ್ರಿಯನ್ನು ಲೈವ್ ಆಗಿ ಆಚರಿಸುತ್ತೇನೆ... ಆಕೆಯನ್ನು ಈಗಾಗಲೆ ಗರ್ಭಿಣಿಯನ್ನಾಗಿ ಮಾಡಿದ್ದೇನೆ... ಮಗನೇ ನೀನು ಗಂಡಸು, ನಿನ್ನ ಗಂಡಸ್ತನ ಏನೆನ್ನುವುದನ್ನು ಇಡೀ ಜಗತ್ತಿಗೇ ತೋರಿಸು ಎಂದು ನನ್ನ ತಾಯಿಯೇ ಹೇಳಿದ್ದಾಳೆ.... ಹೀಗೆ ಬೊಗಳುತ್ತಲೇ ಇರುತ್ತಾನೆ ದೀಪಕ್ ಕಲಾಲ್ ತನ್ನ ಯುಟ್ಯೂಬ್ ಚಾನಲ್ ನಲ್ಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+