ಸಿಬಿಐನಲ್ಲಿ ಭಾರಿ ಬದಲಾವಣೆ: 11 ಅಧಿಕಾರಿಗಳ ವರ್ಗಾವಣೆ, ತಕ್ಷಣದಿಂದ ಜಾರಿ
ನವದೆಹಲಿ, ಅಕ್ಟೋಬರ್ 24: ಸಿಬಿಐ ವಿಶೇಷ ತನಿಖಾ ದಳದ ನೇತೃತ್ವ ವಹಿಸಿದ್ದ ರಾಕೇಶ್ ಅಸ್ಥಾನ ವಿರುದ್ಧದ ಲಂಚ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಸೇರಿದಂತೆ ಒಟ್ಟು 11 ವಿವಿಧ ಹುದ್ದೆಯ ಅಧಿಕಾರಿಗಳನ್ನು ಸಿಬಿಐ ವರ್ಗಾವಣೆ ಮಾಡಿದೆ.
ಸಿಬಿಐ ವಿವಾದ ಭುಗಿಲೆದ್ದ ಬೆನ್ನಲ್ಲೇ ಸರ್ಕಾರ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್ ರಾವ್ ಅವರನ್ನು ನೇಮಿಸಿದ್ದು, ಈಗ ಸಂಸ್ಥೆಗೆ ಚಿಕಿತ್ಸೆ ನೀಡುವ ಸಲುವಾಗಿ ಭಾರಿ ಬದಲಾವಣೆ ಮಾಡಲಾಗಿದೆ.
ಅಧಿಕಾರಿಗಳ ವರ್ಗಾವಣೆಯ ಆದೇಶವನ್ನು ನಿರ್ದೇಶಕರ ಅನುಮೋದನೆಯಂತೆ ಮಾಡುತ್ತಿರುವುದಾಗಿ ಸಿಬಿಐ ಜಂಟಿ ನಿರ್ದೇಶಕ ಎನ್.ಎಂ. ಸಿಂಗ್ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
CBI DIG MAnish Kumar Sinha, DIG Taurn Gauba, DIG Jasbir Singh, DIG Anish Prasad, DIG KR Chaurasia, HoB Ram Gopal and SP Satish Dagar have been transferred. They were probing the case against CBI's Rakesh Asthana. pic.twitter.com/jOEkOMld9m
— ANI (@ANI) 24 October 2018
ಯಾರು, ಎಲ್ಲಿಗೆ ವರ್ಗ?
* ನವದೆಹಲಿಯ ಎಸಿ III ಮತ್ತು ಬಿಎಸ್&ಎಫ್‌ಸಿಯ ಎಚ್‌ಓಬಿ/ಡಿಐಜಿ ಮನೀಶ್ ಕುಮಾರ್ ಸಿನ್ಹಾ ಅವರನ್ನು ನಾಗಪುರದ ಎಸಿಬಿಯ ಡಿಐಜಿ/ಎಚ್‌ಓಬಿಯನ್ನಾಗಿ ವರ್ಗಾಯಿಸಲಾಗಿದೆ.

* ತರು ಗೌಬಾ, ವಲಯ ಡಿಐಜಿ/ಎಚ್‌ಓಬಿ, ಚಂಡೀಗಡ. ನವದೆಹಲಿಯ ಡಿಐಜಿ/ಎಚ್‌ಓಬಿಯ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
* ಎಸ್‌ಸಿ-Iರ ಡಿಐಜಿ/ಎಚ್‌ಓಬಿ ಜಸ್ಬೀರ್ ಸಿಂಗ್ ಅವರಿಗೆ ದೆಹಲಿಯ ಬಿಎಸ್&ಎಫ್‌ಸಿಯ ಹೆಚ್ಚುವರಿ ಎಚ್‌ಓಬಿ ಹೊಣೆಗಾರಿಕೆ ನೀಡಲಾಗಿದೆ.
* ಡಿಡಿಯ ಡಿಐಜಿ/ಎಸ್‌ಯು-I ಆಗಿರುವ ಅನೀಶ್ ಪ್ರಸಾದ್ ಅವರನ್ನು ಎಸ್‌ಯು-I ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
* ಇಓ-Iರ ಡಿಐಜಿ.ಎಚ್‌ಓಬಿ ಕೆ.ಆರ್. ಚೌರಾಸಿಯಾ ಅವರಿಗೆ ಡಿಐಜಿ/ಎಸ್‌ಯು-I ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
* ಚಂಡಿಗಡದ ಇಓ-IIIಯ ಎಚ್‌ಓಬಿ/ಎಸ್‌ಸಿಬಿ ಅಧಿಕಾರಿ ರಾಮ್ ಗೋಪಾಲ್ ಅವರಿಗೆ ಚಂಡಿಗಡದ ಎಚ್‌ಓಬಿ/ಎಸಿಬಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
* ನವದೆಹಲಿಯ ಇಓ-IIIರ ಎಸ್‌ಪಿ ಸತೀಶ್ ಡಾಗರ್ ಅವರನ್ನು ನವದೆಹಲಿಯ ಎಸಿ-IIIರ ಎಸ್‌ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
CBI's JD (P)Arun Kumar Sharma, A Sai Manohar, HoZ V Murugesan and DIG Amit Kumar have been transferred/posted. They were a part of the team probing the case against CBI's Rakesh Asthana. pic.twitter.com/VWgI8KgkWU
— ANI (@ANI) 24 October 2018
* ನವದೆಹಲಿಯ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾ ಅವರನ್ನು ನವದೆಹಲಿಯ ಎಂಡಿಎಂಎಯ ಎಚ್‌ಓಜೆಡ್/ಜೆಡಿ ಹುದ್ದೆಗೆ ವರ್ಗಾಯಿಸಲಾಗಿದೆ.
* ನವದೆಹಲಿಯ ಚಂಡಿಗಡ ಕೇಂದ್ರ ಕಚೇರಿಯ ಎಚ್‌ಓಜೆಡ್/ಜೆಡಿ ಎ.ಸಾಯಿ ಮನೋಹರ್ ಅವರಿಗೆ ನವದೆಹಲಿಯ ಎಸ್‌ಐಟಿ ಮತ್ತು ಟಿಎಫ್‌ಸಿ ವಲಯದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
* ಎಚ್‌ಓಜೆಡ್/ಜೆಡಿ ವಿ. ಮುರುಗೇಶನ್ ಅವರಿಗೆ ನವದೆಹಲಿಯ ಎಸಿ-I (ಕೇಂದ್ರ ಕಚೇರಿ) ಎಚ್‌ಓಜೆಡ್/ಜೆಡಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
* ನವದೆಹಲಿಯ ಇಓ-IIIರ ಡಿಐಜಿ/ಎಚ್‌ಓಬಿ ಅಮಿತ್ ಕುಮಾರ್ ಅವರನ್ನು ಜೆಡಿ (ಪಿ) ಕಚೇರಿಯ ಹೆಚ್ಚುವರಿ ಹೊಣೆಗಾರಿಕೆಗೆ ನಿಯೋಜಿಸಲಾಗಿದೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications