ಅಮೃತಸರ ದುರಂತ: ರೈಲ್ವೆ ಹಳಿ ಬದಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ
ನವದೆಹಲಿ, ನವೆಂಬರ್ 20: ರೈಲು ಅಪಘಾತಗಳನ್ನು ತಡೆಯಲು ಅಪಾಯಕಾರಿ ಸ್ಥಳಗಳಲ್ಲಿ ರೈಲು ಹಳಿಗಳ ಬದಿ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಪಂಜಾಬ್‌ನ ಅಮೃತಸರದಲ್ಲಿ ದಸರಾ ವೇಳೆ ರಾವಣ ದಹನ ವೀಕ್ಷಿಸುತ್ತಿದ್ದ 60 ಮಂದಿಯ ಮೇಲೆ ರೈಲು ಹರಿದ ಘಟನೆಯ ಹಿನ್ನೆಲೆಯಲ್ಲೇ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ರೈಲ್ವೆ ಇಲಾಖೆ ಈ ನಿರ್ಣಯ ಕೈಗೊಂಡಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಕಿ.ಮೀ ಉದ್ದದ ಗೋಡೆ ನಿರ್ಮಾಣ ಮಾಡುವ ಆಲೋಚನೆ ಇದ್ದು ಇದಕ್ಕೆ 2500 ಕೋಟಿ ರೂ ವೆಚ್ಚವಾಗಲಿದೆ.

ಅಮೃತಸರ ದುರ್ಘಟನೆ ಬಳಿಕ ಗೋಡೆ ನಿರ್ಮಾಣ ನಿರ್ಧಾರವನ್ನು ರೈಲ್ವೆ ಸಚಿವ ಪೀಯುಷ್ ಗೋಯೆಲ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಗೋಡೆ ನಿರ್ಮಾಣದಿಂದ ಜನರು ರೈಲ್ವೆ ಹಳಿಗಳತ್ತ ಬರುವುದು ತಪ್ಪುತ್ತದೆ ಹಾಗೆಯೇ ಪ್ರಾಣಿಗಳು ರೈಲಿಗೆ ಸಿಲುಕುವ ಪ್ರಮಾಣವೂ ಕಡಿಮೆಯಾಗುತ್ತದೆ.












Click it and Unblock the Notifications