Get Updates
Get notified of breaking news, exclusive insights, and must-see stories!

ರೈಲ್ವೆ ಇಲಾಖೆಯ ಕ್ರೀಡಾಪಟುಗಳಿಗೆ ಬಡ್ತಿಯಲ್ಲಿ ಆದ್ಯತೆಗೆ ಹೊಸ ನಿಯಮ

ನವದೆಹಲಿ, ಆಗಸ್ಟ್ 3: ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಗಳಾಗಿರುವ ಕ್ರೀಡಾಪಟುಗಳು ಮತ್ತು ಕೋಚ್‌ಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. ಕ್ರೀಡಾಪಟುಗಳು ಮತ್ತು ಕೋಚ್‌ಗಳಿಗೆ ಇನ್ನು ಅಧಿಕಾರಿ ಮಟ್ಟದ ಬಡ್ತಿ ಪಡೆಯಲು ಅವಕಾಶವಿದೆ.

ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿರುವ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೋಚ್‌ಗಳಿಗೂ ಬಡ್ತಿ ದೊರೆಯಲಿದೆ. ಪದ್ಮಶ್ರೀ ಪ್ರಶಸ್ತಿ ಮತ್ತು ರಾಷ್ಟ್ರೀಯ ಪುರಸ್ಕಾರವನ್ನು ಪಡೆಯುವ ಕ್ರೀಡಾಪಟುಗಳನ್ನೂ ಕೂಡ ಗುರುತಿಸಲಾಗುತ್ತದೆ.

ಹೊಸ ನಿಯಮದಂತೆ, 2 ಒಲಿಂಪಿಕ್ಸ್ ಗಳಲ್ಲಿ ಸ್ಪರ್ಧಿಸುವ ಮತ್ತು ಏಷ್ಯನ್ ಗೇಮ್ಸ್‌ನ ಅಥವಾ ಕಾಮನ್‌ವೆಲ್ತ್‌ ಗೇಮ್ಸ್‌ ಅಥವಾ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 2 ಪದಕ ಜಯಿಸುವ ಕ್ರೀಡಾಪಟುಗಳಿಗೆ ಅಧಿಕಾರಿ ದರ್ಜೆಯ ಬಡ್ತಿ ಸಿಗಲಿದೆ. ಅರ್ಜುನ ಅಥವಾ ಖೇಲ್​ರತ್ನ ಪ್ರಶಸ್ತಿ ಪಡೆಯುವ ಕ್ರೀಡಾಪಟುಗಳಿಗೂ ಬಡ್ತಿ ಸಿಗಲಿದೆ.

Railways sportsmen will get more promotion with new policy

2016ರ ರಿಯೋ ಒಲಿಂಪಿಕ್ಸ್ ವರೆಗೆ ಕ್ರೀಡಾಪಟುಗಳಿಗೆ ಬಡ್ತಿ ನೀಡುವ ಯಾವುದೇ ನಿಯಮವನ್ನು ರೈಲ್ವೆ ಇಲಾಖೆಯು ಹೊಂದಿರಲಿಲ್ಲ. ರಿಯೋ ಗೇಮ್ಸ್‌ನ ಬಳಿಕ, ಪದಕ ವಿಜೇತ ಮತ್ತು ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಪಡೆಯುವ ಕ್ರೀಡಾಪಟುಗಳಿಗಷ್ಟೇ ಬಡ್ತಿ ನೀಡುವ ನಿಯಮ ಜಾರಿಗೆ ತರಲಾಗಿತ್ತು. ರೈಲ್ವೆ ಇಲಾಖೆಯಲ್ಲಿ ಸ್ಯಕ್ಕೆ 3 ಸಾವಿರ ಹಾಲಿ ಕ್ರೀಡಾಪಟಗಳು ಉದ್ಯೋಗಿಗಳಾಗಿದ್ದಾರೆ ಎಂದು ಪಿಯುಷ್‌ ಗೋಯಲ್‌ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+