ಮೇ 22 ರಿಂದ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಆರಂಭ
ನವದೆಹಲಿ, ಮೇ 21: ಮೇ 22 ರಿಂದ ರೈಲು ಟಿಕೆಟ್ ಬುಕಿಂಗ್ ಕೌಂಟರ್ ಸೌಲಭ್ಯ ದೇಶಾದ್ಯಂತ ಪ್ರಾರಂಭವಾಗಲಿದೆ. ಈ ವಿಷಯವನ್ನು ಟ್ವೀಟ್ ಮಾಡುವ ಮೂಲಕ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಅಂಚೆ ಕಚೇರಿ, ಸುವಿಧಾ ಕೇಂದ್ರ, ಐಆರ್‌ಸಿಟಿಸಿ ಅಧಿಕೃತ ಏಜೆಂಟ್, ಪಿಆರ್‌ಎಸ್ ಕೇಂದ್ರಗಳಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಹಾಗೂ ಟಿಕೆಟ್ ರದ್ದು ಮಾಡುವುದುನ್ನು ಮಾಡಬಹುದು ಎಂದು ಗೋಯಲ್ ತಿಳಿಸಿದ್ದಾರೆ.
ಜೂನ್ 1 ರಿಂದ ಎಸಿ ರೈಲುಗಳು ಹೊರತುಪಡಿಸಿ ಸಾಮಾನ್ಯ ರೈಲುಗಳು ಸಂಚಾರ ಪ್ರಾರಂಭವಾಗುತ್ತಿರುವುದರಿಂದ ರೈಲ್ವೆ ಸಚಿವಾಲಯ ಪ್ರಯಾಣಿಕರ ಅನುಕೂಲಕ್ಕೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಅದಾಗ್ಯೂ ಕೊರೊನಾ ಲಾಕ್‌ಡೌನ್ ಇರುವುದರಿಂದ ಆಯಾ ರೈಲ್ವೆ ವಲಯಗಳು ಟಿಕೆಟ್ ಕೌಂಟರ್ ಆರಂಭ, ರದ್ದುಗೊಳಿಸುವ ಅಧಿಕಾರವನ್ನು ಹೊಂದಿರುತ್ತವೆ ಎಂದು ಗೋಯಲ್ ತಿಳಿಸಿದ್ದಾರೆ.












Click it and Unblock the Notifications