ಫೆ. 15ರಿಂದ ಆನ್ ಲೈನ್ ನಲ್ಲಿ 6 ರೈಲ್ವೆ ಟಿಕೆಟ್ ಮಾತ್ರ ಬುಕ್ ಮಾಡ್ಬಹುದು!

Posted By:
Subscribe to Oneindia Kannada

ನವದೆಹಲಿ, ಜನವರಿ, 29: ಭಾರತೀಯ ರೈಲ್ವೆ ಇಲಾಖೆಯು ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಒಂದು ಹೊಸ ನಿಯಮ ಜಾರಿಗೆ ತಂದಿದ್ದು, ಇದು ಫೆಬ್ರವರಿ 15ರ ಬಳಿಕ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಒಬ್ಬ ಪ್ರಯಾಣಿಕ ತನ್ನ ಅಕೌಂಟ್ ನಿಂದ ತಿಂಗಳಲ್ಲಿ ಆರು ಬಾರಿ ಮಾತ್ರ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಇದಕ್ಕೆ ಐಆರ್ ಸಿಟಿಸಿ (Indian Railway Catering and tourism Corporation) ವೆಬ್ ಸೈಟ್ ನೆರವಾಗಲಿದೆ.[ಸದ್ಯದಲ್ಲೇ ದೇಶದ ನೂರು ರೈಲ್ವೆ ನಿಲ್ದಾಣದಲ್ಲಿ ಉಚಿತ ವೈಫೈ]

Indian Railways

ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳಿಂದ ಆಗುತ್ತಿರುವ ದುರುಪಯೋಗ ತಡೆಗಟ್ಟುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಈ ಹಿಂದೆ ಒಬ್ಬ ವ್ಯಕ್ತಿ ಆನ್ ಲೈನ್ ಮೂಲಕ 10 ಬಾರಿ ಟಿಕೆಟ್ ಬುಕ್ ಮಾಡುವ ಅವಕಾಶವಿತ್ತು. ಇದರಲ್ಲಿ ಕೊಂಚ ಸಡಿಲಿಕರಣ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.[ರೈಲ್ವೆ ತತ್ಕಾಲ್ ಟಿಕೆಟ್ ದರ ದಿಢೀರ್ ಏರಿಕೆ]

ಏನಿದು ನಿಯಮ?

* ಒಬ್ಬ ವ್ಯಕ್ತಿಯು ವೈಯಕ್ತಿಕವಾಗಿ ತನ್ನ ಗುರುತಿನ ಚೀಟಿ ಮೂಲಕ ಇಬ್ಬರು ವ್ಯಕ್ತಿಗಳಿಗೆ ಮಾತ್ರ ರಿಸರ್ವೇಶನ್ ಟಿಕೆಟ್ ಬುಕ್ ಮಾಡಬಹುದು. ರಿಸರ್ವೇಶನ್ ಟಿಕೆಟ್ ಬುಕ್ ಮಾಡಲು ಬೆಳಿಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಕಾಲಾವಕಾಶ ಇರುತ್ತದೆ.

* ತತ್ಕಾಲದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತಮ್ಮ ಐಡಿ ಮೂಲಕ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಟಿಕೆಟ್ ಬುಕ್ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Railway changes online ticketing rules, caps monthly e-ticket booking to 6. According to new rule effective February 15, an individual can book only a maximum of six railway tickets online per month.
Please Wait while comments are loading...