• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಡಾಖ್‌ನಲ್ಲಿ ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆಯೇ: ರಾಹುಲ್ ಪ್ರಶ್ನೆ

|
Google Oneindia Kannada News

ನವದೆಹಲಿ, ಜೂನ್ 9: ಲಡಾಖ್‌ನಲ್ಲಿ ಭಾರತಕ್ಕೆ ಸೇರಿದ್ದ ಭೂಪ್ರದೇಶದವನ್ನು ಚೀನಾ ಆಕ್ರಮಿಸಿಕೊಂಡಿದೆಯೇ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ಗೆ ಪ್ರಶ್ನೆ ಮಾಡಿದ್ದಾರೆ.

ರಾಜನಾಥ್ ಸಿಂಗ್ ಅವರು ಸೋಮವಾರ ಮಾಡಿದ್ದ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್, ಮಂಗಳವಾರದ ಟ್ವೀಟ್‌ನಲ್ಲಿ, ಕಾಂಗ್ರೆಸ್ ಪಕ್ಷದ ಚಿಹ್ನೆಯ ಕುರಿತು ಕಮೆಂಟ್ ಮಾಡಿರುವ ರಕ್ಷಣಾ ಸಚಿವರು ಚೀನಾದವರು ಭಾರತೀಯ ಭೂಪ್ರದೇಶವನ್ನು ಲಡಾಖ್‌ನಲ್ಲಿ ಆಕ್ರಮಿಸಿಕೊಂಡಿದ್ದಾರೆಯೇ? ಉತ್ತರಿಸಿ ಎಂದು ಹೇಳಿದ್ದಾರೆ.

'ಕೈ' ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ನ ಚಿಹ್ನೆಯಾಗಿರುವ ಕಾರಣ ರಾಜನಾಥ್ ಸಿಂಗ್ ಟ್ವೀಟ್ ಗೆ ರಾಹುಲ್ ಗಾಂಧಿ ಕೆರಳಿದ್ದಾರೆ.

ಚೀನಾ-ಭಾರತ ವಿವಾದ: 'ಮಾತುಕತೆ ಸಕಾರಾತ್ಮಕ' ಎಂದ ರಾಜನಾಥ್ ಸಿಂಗ್ಚೀನಾ-ಭಾರತ ವಿವಾದ: 'ಮಾತುಕತೆ ಸಕಾರಾತ್ಮಕ' ಎಂದ ರಾಜನಾಥ್ ಸಿಂಗ್

ರಾಜನಾಥ್ ಟ್ವೀಟ್ ಮಾಡಿರುವ ಕೈ ನೋವಿನ ಬಗೆಗಿನ ಸಾಲುಗಳನ್ನು 20 ನೇ ಶತಮಾನದ ಕವಿ ಮಂಜಾರ್ ಬರೆದಿದ್ದಾರೆ. ರಾಜನಾಥ್ ಸಿಂಗ್ ಅವರು 'ಹೃದಯ' ಎಂದಿರುವ ಕಡೆ ' ಕೈ' ಎಂದು ಬದಲಾಯಿಸಿದ್ದಾರೆ.

ಭಾರತ ಮತ್ತು ಚೀನಾ ಸೈನಿಕರ ನಡುವೆ ಮಾತಿನ ಚಕಮಕಿ

ಭಾರತ ಮತ್ತು ಚೀನಾ ಸೈನಿಕರ ನಡುವೆ ಮಾತಿನ ಚಕಮಕಿ

ಪೂರ್ವ ಲಡಾಖ್‌ನಲ್ಲಿ ಚೀನಾ ಜೊತೆಗಿನ ಜಟಾಪಟಿಗೆ ಸಂಬಂಧಿಸಿ ರಾಹುಲ್ ನಿಯಮಿತವಾಗಿ ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದಾರೆ. ಮೇ 5 ಮತ್ತು ಮೇ 6 ರಂದು ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಿದ್ದಾರೆ.

ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಗಡಿ ವಿಚಾರದಲ್ಲಿ ಅಮಿತ್ ಶಾ ಅವರ ವಿರುದ್ಧ ರಾಹುಲ್ ನಡೆಸಿದ ವಾಗ್ದಾಳಿಗೆ ಕಾವ್ಯಾತ್ಮಕ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್ ಕೈಯಲ್ಲಿ ನೋವು ಇದ್ದಾಗ ಚಿಕಿತ್ಸೆ ಪಡೆಯಬಹುದು. ಆದರೆ ಕೈಗೆ ನೋವು ಬಂದಾಗ ಏನು ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಚಿಹ್ನೆ ಟೀಕಿಸಬೇಡಿ

ಕಾಂಗ್ರೆಸ್ ಪಕ್ಷದ ಚಿಹ್ನೆ ಟೀಕಿಸಬೇಡಿ

ಲಡಾಖ್‌ನಲ್ಲಿ ಚೀನಾ ಜೊತೆಗಿನ ಗಡಿರೇಖೆ ಬಿಕ್ಕಟ್ಟಿನ ಕುರಿತು ಎನ್‌ಡಿಎ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಟೀಕಿಸುವ ಬದಲು ರಕ್ಷಣಾ ಸಚಿವರು ರಾಹುಲ್ ಗಾಂಧಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಬೇಕು ಎಂದು ಎಐಸಿಸಿ ಮಾಧ್ಯಮ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ರಾಜನಾಥ್‌ ಸಿಂಗ್ ಟ್ವೀಟ್ ವಿರುದ್ಧ ರಾಹುಲ್ ಗರಂ

ರಾಜನಾಥ್‌ ಸಿಂಗ್ ಟ್ವೀಟ್ ವಿರುದ್ಧ ರಾಹುಲ್ ಗರಂ

'ಕೈ' ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ನ ಚಿಹ್ನೆಯಾಗಿರುವ ಕಾರಣ ರಾಜನಾಥ್ ಸಿಂಗ್ ಟ್ವೀಟ್ ಗೆ ರಾಹುಲ್ ಗಾಂಧಿ ಕೆರಳಿದ್ದಾರೆ.

ರಾಜನಾಥ್ ಟ್ವೀಟ್ ಮಾಡಿರುವ ಕೈ ನೋವಿನ ಬಗೆಗಿನ ಸಾಲುಗಳನ್ನು 20 ನೇ ಶತಮಾನದ ಕವಿ ಮಂಜಾರ್ ಬರೆದಿದ್ದಾರೆ. ರಾಜನಾಥ್ ಸಿಂಗ್ ಅವರು 'ಹೃದಯ' ಎಂದಿರುವ ಕಡೆ ' ಕೈ' ಎಂದು ಬದಲಾಯಿಸಿದ್ದಾರೆ.
English summary
A day after Union Defence Minister Rajnath Singh responded to former Congress chief Rahul Gandhi's jibe at Amit Shah, the Wayanad MP on Tuesday again questioned the government on Chinese intrusion in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X