• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'20 ದಿನದ ಹಿಂದೆ ರಾಹುಲ್ ಗಾಂಧಿ ಹೇಳಿದ ಭವಿಷ್ಯ ನಿಜ ಆಯ್ತು'

|
Google Oneindia Kannada News

ದೆಹಲಿ, ಆಗಸ್ಟ್ 7: ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ಅಮೆರಿಕ ಮತ್ತು ಬ್ರೆಜಿಲ್ ದೇಶಕ್ಕಿಂತ ಭಾರತದಲ್ಲಿ ಹೆಚ್ಚು ಹೊಸ ಸೋಂಕು ಪತ್ತೆಯಾಗುತ್ತಿದೆ.

ಶುಕ್ರವಾರದ ವರದಿಯಂತೆ ಭಾರತದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ. ಈ ಮೂಲಕ ವಿಶ್ವದಲ್ಲಿ ಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಕೊರೊನಾ ಕುರಿತು ಮೋದಿ ಸರ್ಕಾರಕ್ಕೆ ಬಲವಾದ ಎಚ್ಚರಿಕೆ ನೀಡಿದ ರಾಹುಲ್ಕೊರೊನಾ ಕುರಿತು ಮೋದಿ ಸರ್ಕಾರಕ್ಕೆ ಬಲವಾದ ಎಚ್ಚರಿಕೆ ನೀಡಿದ ರಾಹುಲ್

ಕೊರೊನಾ ವೈರಸ್ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಅವರು ನೀಡಿದ ಎಚ್ಚರಿಕೆಗಳು ಬಹುತೇಕ ನಿಜವೂ ಆಗಿದೆ. ಇದೀಗ, 20 ದಿನಗಳ ಹಿಂದೆ ಸಹ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅದು ಸಹ ಈಗ ಸಾಬೀತಾಗಿದೆ. ಏನದು? ಮುಂದೆ ಓದಿ....

ಶುಕ್ರವಾರ 60 ಸಾವಿರ ಸೋಂಕು ಸಾಧ್ಯತೆ!

ಶುಕ್ರವಾರ 60 ಸಾವಿರ ಸೋಂಕು ಸಾಧ್ಯತೆ!

ಆಗಸ್ಟ್ 6ರ ಬೆಳಗ್ಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 19,64,537 ಇತ್ತು. ಶುಕ್ರವಾರ ಒಂದೇ ದಿನ ಸುಮಾರು 60 ಸಾವಿರ ಕೇಸ್ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಆಗಸ್ಟ್ 7ರ ವರದಿ ಬಳಿಕ ಅಧಿಕೃತವಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷ ದಾಟಲಿದೆ.

20 ದಿನ ಹಿಂದೆ ರಾಹುಲ್ ಗಾಂಧಿ ಎಚ್ಚರಿಕೆ!

20 ದಿನ ಹಿಂದೆ ರಾಹುಲ್ ಗಾಂಧಿ ಎಚ್ಚರಿಕೆ!

ಆಗಸ್ಟ್ 10ರೊಳಗೆ ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 20 ಲಕ್ಷ ದಾಟಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 20 ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. 'ಈ ವಾರಾಂತ್ಯಕ್ಕೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಲಿದೆ. ಅದೇ ರೀತಿ ಆಗಸ್ಟ್ 10ರೊಳಗೆ ಅದರ ಸಂಖ್ಯೆ 20 ಲಕ್ಷಕ್ಕೆ ಏರಿಕೆಯಾಗಲಿದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು' ಎಂದು ಜುಲೈ 17ರಂದು ಹೇಳಿದ್ದರು.

ಕಹಿಸುದ್ದಿ: ಭಾರತದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೊನಾವೈರಸ್!ಕಹಿಸುದ್ದಿ: ಭಾರತದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೊನಾವೈರಸ್!

ಮೋದಿ ಸರ್ಕಾರ ಕಾಣೆಯಾಗಿದೆ

ಮೋದಿ ಸರ್ಕಾರ ಕಾಣೆಯಾಗಿದೆ

ಆಗಸ್ಟ್ 10 ರೊಳಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಲಿದೆ ಎಂಬ ವಿಚಾರವನ್ನು ಮತ್ತೆ ಸ್ಮರಿಸಿಕೊಂಡಿರುವ ರಾಹುಲ್ ಗಾಂಧಿ, ತಮ್ಮ ಹಳೆ ಟ್ವೀಟ್‌ನ್ನು ರೀ-ಟ್ವೀಟ್ ಮಾಡಿ ''ಭಾರತದಲ್ಲಿ 2 ಮಿಲಿಯನ್ ದಾಟಿದೆ. ಮೋದಿ ಸರ್ಕಾರ ಕಾಣೆಯಾಗಿದೆ'' ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಆರ್ಥಿಕತೆ ಕುಸಿಯಲಿದೆ ಎಂದಿದ್ದ ರಾಹುಲ್

ಆರ್ಥಿಕತೆ ಕುಸಿಯಲಿದೆ ಎಂದಿದ್ದ ರಾಹುಲ್

ಭಾರತದಲ್ಲಿ ಕೊರೊನಾ ಪ್ರಕರಣಗಳು ಆರಂಭವಾದ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಸುವ ಪ್ರಯತ್ನ ಮಾಡಿದ್ದರು. ಕೊವಿಡ್ ನಿಯಂತ್ರಿಸದೆ ಹೋದರೆ ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿಯಲಿದೆ, ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದ್ದರು. ಆದರೆ, ರಾಹುಲ್ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ಇದು ಸಾಬೀತಾಗಿತ್ತು.

English summary
Congress leader Rahul gandhi re-tweet his old tweets about covid 19. he was warn that, by august 10 india will reports 20 million coronavirus case. now, its happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X