ಮೋದಿ ರೈತರನ್ನೂ ಅಪ್ಪಿಕೊಳ್ಳಲಿ: ರಾಹುಲ್ ಗಾಂಧಿ

ನವ ದೆಹಲಿ, ಜನವರಿ 23: ಪ್ರಧಾನಿ ಮೋದಿ ಅವರ ಅಪ್ಪುಗೆ ರಾಜಕಾರಣ (ಹಗ್‌ಪ್ಲೋಮಸಿ)ಯನ್ನು ಟೀಕಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, 'ವಿಶ್ವ ನಾಯಕರನ್ನು ಅಪ್ಪಿಕೊಳ್ಳುವ ಮೋದಿ, ದೇಶದ ರೈತರನ್ನು, ಸೈನಿಕರನ್ನೂ ಅಪ್ಪಿಕೊಳ್ಳಲಿ' ಎಂದಿದ್ದಾರೆ.

ಟ್ವಿಟ್ಟರ್‌ನಲ್ಲಿ ಹಿಂದಿಯಲ್ಲಿ ಚುಟುಕು ಕವಿತೆ ಮೂಲಕ ಮೋದಿ ಅವರ ಅಪ್ಪುಗೆ ರಾಜಕಾರಣದ ಕಾಲೆಳೆದಿರುವ ರಾಹುಲ್ ಅವರು 'ನಿಮ್ಮನ್ನು ನೀವು 'ಸಾಮಾನ್ಯ' ಎಂದು ಕರೆದುಕೊಳ್ಳುತ್ತೀರಿ, ಆದರೆ ಪ್ರಮುಖ ವ್ಯಕ್ತಿಗಳನ್ನು ಮಾತ್ರ ಅಪ್ಪಿಕೊಳ್ಳುತ್ತೀರಿ, ಈ ಭೇದ ಏಕೆ? ರೈತ, ಕಾರ್ಮಿಕ, ಸೈಕರನ್ನೂ ಅಪ್ಪಿಕೊಳ್ಳಿ' ಎಂಬರ್ಥದ ಕವಿತೆ ಪ್ರಕಟಿಸಿದ್ದಾರೆ.

ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇಶಕ್ಕೆ ಬಂದಾಗ ಪ್ರಧಾನಿ ಮೋದಿ ಅವರು ಶಿಷ್ಟಾಚಾರ ಮುರಿದು ಅವರನ್ನು ಅಪ್ಪಿಕೊಂಡು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಈ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದಿತ್ತು.

Rahul Gandhi asks PM Modi to hug Farmers and soldiers

ಮೋದಿ ಅವರ ಅಪ್ಪುಗೆಯಿಂದ ಇತರೆ ನಾಯಕರು ಮುಜುಗರಕ್ಕೆ ಒಳಗಾಗಿರುವ ಕೆಲವು ಚಿತ್ರಗಳನ್ನು ಹೆಕ್ಕಿದ ಕಾಂಗ್ರೆಸ್‌ ಅವನ್ನೆಲ್ಲಾ ಸೇರಿಸಿ ವಿಡಿಯೋ ಮಾಡಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+