ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನಕಲಿ ಎಕ್ಸಿಟ್ ಪೋಲ್: ಧೈರ್ಯವಾಗಿರಿ ಎಂದ ರಾಹುಲ್ ಗಾಂಧಿ!

|
Google Oneindia Kannada News

ನವದೆಹಲಿ, ಮೇ 22: "ಇದೊಂದು ನಕಲಿ ಎಕ್ಸಿಟ್ ಪೋಲ್. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಧೈರ್ಯಗುಂದುವ ಅಗತ್ಯ ಇಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಬಾಕಿ ಉಳಿದಿರುವಾಗ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.

ಮತದಾನೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿದ ಪ್ರಿಯಾಂಕಾ ಗಾಂಧಿಮತದಾನೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿದ ಪ್ರಿಯಾಂಕಾ ಗಾಂಧಿ

"ಮುಂದಿನ 24 ಗಂಟೆ ಬಹಳ ಮಹತ್ವದ್ದು. ಎಲ್ಲರೂ ಎಚ್ಚರಿಕೆಯಿಂದಿರಿ. ಹೆದರಬೇಡಿ, ಧೈರ್ಯ ಕಳೆದುಕೊಳ್ಳಬೇಡಿ. ನೀವು ಸತ್ಯಕ್ಕಾಗಿ ಹೋರಾಡುತ್ತಿದ್ದೀರಿ. ನಕಲಿ ಚುನಾವಣಾ ಸಮೀಕ್ಷೆಯಿಂದ ಎದೆಗುಂದಬೇಡಿ. ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ. ಜೊತೆಗೆ ಕಾಂಗ್ರೆಸ್ ಮೇಲೆ ನಿಮಗೆ ನಂಬಿಕೆ ಇರಲಿ. ನಿಮ್ಮ ಕಠಿಣ ಪರಿಶ್ರಮ ವ್ಯರ್ಥವಾಗುವುದಕ್ಕೆ ನಾವು ಬಿಡುವುದಿಲ್ಲ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Rahul Gandhi asks party workers, not to disheartened by fake exit polls

ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಸುಳ್ಳು. ಅದನ್ನು ನಂಬಬೇಡಿ. ಭರವಸೆ ಕಳೆದುಕೊಳ್ಳಬೇಡಿ ಎಂದು ಮಂಗಳವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮನವಿ ಮಾಡಿದ್ದರು.

ಮೇ 19 ರಂದು ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದಲ್ಲಿ ಬಹುಪಾಲು ಚಾನೆಲ್ ಗಳು ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದಬವು. ಬಿಜೆಪಿ ಬಹುಮತ ಪಡೆಯಬಹುದು, ಅಕಸ್ಮಾತ್ ಸಾಧ್ಯವಾಗದಿದ್ದರೆ ಅದು ಎನ್ ಡಿಎ ಮೈತ್ರಿಕೂಟದೊಂದಿಗೆ ಸೇರಿ ಆಡಳಿತ ನಡೆಸಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು.

ಎಕ್ಸಿಟ್ ಪೋಲ್ ಉಲ್ಟಾ ಆದ್ರೆ ಇವರೇ ಕಿಂಗ್ ಮೇಕರ್ಸ್ ಆಗಲಿದ್ದಾರೆಎಕ್ಸಿಟ್ ಪೋಲ್ ಉಲ್ಟಾ ಆದ್ರೆ ಇವರೇ ಕಿಂಗ್ ಮೇಕರ್ಸ್ ಆಗಲಿದ್ದಾರೆ

ಈ ಸಮೀಕ್ಷೆಯ ನಂತರ ವಿಪಕ್ಷಗಳೆಲ್ಲವೂ ಒಂದಾಗಿ ಮಹಾ ಘಟಬಂಧನದ ತಯಾರಿ ನಡೆಸಿವೆ.

English summary
Congress president Rahul Gandhi on Wednesday asked party's workers not be disheartened by fake exit poll results and urged them to stay alert and vigilant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X