ಕೊರೊನಾ ಸಂಕಷ್ಟದಲ್ಲೂ ಸರ್ಕಾರ ಲಾಭ ಗಳಿಸುತ್ತಿದೆ: ರಾಹುಲ್ ಗಾಂಧಿ

ದೆಹಲಿ, ಜುಲೈ 25: ದೇಶದ ಜನರು ಕೊರೊನಾ ವೈರಸ್‌ನಿಂದ ಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಲಾಭ ಗಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

Recommended Video

      ಭಾರತದಲ್ಲಿ ಚೀನಾ ವ್ಯವಹಾರ ಇನ್ನು ಮುಂದೆ ಸುಲಭವಲ್ಲ | Oneindia Kannada

      ಲಾಕ್‌ಡೌನ್‌ನಿಂದ ಸಿಲುಕಿಕೊಂಡಿದ್ದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್ ರೈಲು ಸಂಚರಿಸುತ್ತಿದೆ. ಶ್ರಮಿಕ್ ರೈಲು ಸಂಚಾರ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ 428 ಕೋಟಿ ಆದಾಯ ಸಿಕ್ಕಿದೆ ಎಂದು ಸುದ್ದಿಪತ್ರಿಕೆಯೊಂದು ಸುದ್ದಿ ಪ್ರಕಟ ಮಾಡಿದೆ.

      ಈ ವರದಿಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ''ರೋಗದ ಕಾರ್ಮೋಡ ಕವಿದು ಜನರು ಕಷ್ಟಲ್ಲಿದ್ದಾರೆ. ಆದರೆ, ಅದರಲ್ಲಿಯೂ ಲಾಭ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಜನ ವಿರೋಧಿ ಸರ್ಕಾರ ವಿಪತ್ತನ್ನು ಲಾಭದಾಯಕವಾಗಿ ಪರಿವರ್ತಿಸಿ ಲಾಭ ಗಳಿಸುತ್ತಿದೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

      ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ಪತ್ರಿಕೆಯಲ್ಲಿ 'ಶ್ರಮಿಕ್ ರೈಲು' ಸಂಚಾರದ ಮೂಲಕ ಕೇಂದ್ರ ಸರ್ಕಾರ 428 ಕೋಟಿ ಆದಾಯ ಸಿಕ್ಕಿದೆ ಎಂದು ಪ್ರಸ್ತಾಪಿಸಲಾಗಿದೆ.

      Rahul Gandhi Accused Govt To Benefiting By Making Profits During Lockdown

      ರಾಹುಲ್ ಗಾಂಧಿ ಅವರು ಆ ಸುದ್ದಿಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ನೆಟ್ಟಿಗರು ವಿರೋಧಿಸಿದ್ದಾರೆ. ಇದುವರೆಗೂ ದೇಶದಲ್ಲಿ 63 ಲಕ್ಷ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದಾರೆ. ಅದಕ್ಕಾಗಿ ಸರ್ಕಾರ 2142 ಕೋಟಿ ವೆಚ್ಚ ಮಾಡಿದೆ. ಅದರಲ್ಲಿ 428 ಕೋಟಿ ಆದಾಯ ಬಂದಿದೆ. ಆದರೆ, 1714 ಕೋಟಿ ನಷ್ಟ ಆಗಿದೆ ಎಂದು ಹೇಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+