ಸಂತಸ ಅರಳುವ ಸಮಯ, ಕೇಜ್ರಿವಾಲ್ ಕಾಲಿಗೆರಗಿದ ಭಗವಂತ ಸಿಂಗ್

ನವದೆಹಲಿ, ಮಾರ್ಚ್ 11: ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ 48 ವರ್ಷದ ಭಗವಂತ ಸಿಂಗ್ ಮಾನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಾರೆ.
ಪಂಚನದಿಗಳ ನಾಡು ಪಂಜಾಬ್ ರಾಜ್ಯದಲ್ಲಿ ಎಎಪಿ ತನ್ನ ಮೊದಲ ಪ್ರಯತ್ನದಲ್ಲೇ ಬಂಪರ್ ಹೊಡೆದಿದೆ. ಬಹುತೇಕ ಮಾರ್ಚ್ 16ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ, ಇಂದು ದೆಹಲಿಗೆ ತೆರಳಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರನ್ನು ಭಗವಂತ್ ಭೇಟಿ ಮಾಡಿದರು.

2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಯನ್ನು ಎದುರಿಸಿತ್ತು. ಆದರೆ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿದೆ. ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಸಂಗ್ರೂರು ಸಂಸದರನ್ನು ಆಮ್‌ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಜನರ ಸಮೀಕ್ಷೆಯಿಂದ ಆಯ್ಕೆ ಮಾಡಿದ ಸಿಎಂ ಅಭ್ಯರ್ಥಿ ಎನಿಸಿಕೊಂಡಿದ್ದರು.

ಭಗವಂತ್‌ ಮನ್‌ ತಮ್ಮದೇ ಆದ ಚಾರಿಟಬಲ್ ಫೌಂಡೇಶನ್ ಅನ್ನು ಹೊಂದಿದ್ದಾರೆ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಹಾಯ ಮಾಡುವ ಲೋಕ್ ಲೆಹರ್ ಫೌಂಡೇಶನ್ ಅದಾಗಿದೆ. ಈ ಹಿಂದೆ ಇರಾಕ್‌ನಿಂದ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ಭಗವಂತ್ ಮಾನ್‌ ಕಾರ್ಯ ನಿರ್ವಹಿಸಿದ್ದರು.

ಕಾಮಿಡಿಯನ್-ನಟ-ರಾಜಕಾರಣಿಯಾಗಿ ಪರಿವರ್ತನೆಗೊಂಡ ಭಗವಂತ್ ಮಾನ್‌ ಹೆಚ್ಚಾಗಿ ವಿವಾದದ ವಿಚಾರಗಳಲ್ಲಿ ಸುದ್ದಿಯಾಗಿದ್ದಾರೆ. ಭಗವಂತ್‌ ಮಾನ್‌ ಒಂದು ದಶಕದ ಹಿಂದೆ 2011 ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಮೂಲಕ ರಾಜಕೀಯ ಪ್ರವೇಶಿಸಿದರು. ಮೊದಲು 2012 ರಲ್ಲಿ ಪಂಜಾಬ್‌ನ ಲೆಹ್ರಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಪರಾಭವವಗೊಂಡಿದ್ದರು.

Punjab CM Candidate for Punjab Bhagwant Mann Meets Party Convener Arvind Kejriwal

ಬಳಿಕ 2014 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹಾಸ್ಯನಟ-ರಾಜಕಾರಣಿಯನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಭಗವಂತ್‌ ಮನ್‌ 2014 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು. 2019 ರಲ್ಲಿ ಅದೇ ಸ್ಥಾನದಿಂದ ಮತ್ತೆ ಗೆಲುವು ಸಾಧಿಸಿದರು.

ಕೇಜ್ರಿ-ಭಗವಂತ್ ಸಮಾಗಮ
ಪಂಜಾಬ್ ರಾಜ್ಯ ಗೆಲುವು ಸಾಧಿಸಿದ ಬಳಿಕ ದೆಹಲಿಗೆ ತೆರಳಿ ಕೇಜ್ರಿವಾಲ್ ಅವರನ್ನು ಕಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಕೇಜ್ರಿವಾಲ್ ಜೊತೆಗಿದ್ದ ಮನೀಶ್ ಸಿಸೋಡಿಯಾ ಕೂಡಾ ಭಗವಂತ್ ಅವರನ್ನು ಸ್ವಾಗತಿ, ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಕೇಜ್ರಿವಾಲ್ -ಮಾನ್ ಆಪ್ಪುಗೆ ವಿಡಿಯೋವೊಂದನ್ನು ಎಎನ್ಐ ಟ್ವೀಟ್ ಮಾಡಿದ್ದು, ವೈರಲ್ ಆಗುತ್ತಿದೆ. ಆದರೆ, ಬಹುತೇಕ ಗೇಲಿ ಮಾಡುವ ಕಾಮೆಂಟ್ ಗಳೇ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+