ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಕ್ಕೆ ಹೆದರಿದ ಪ್ರಧಾನಿ ಮೋದಿ; ನಿರ್ಧಾರ ಏನು?

|
Google Oneindia Kannada News

ನವದೆಹಲಿ, ಮಾರ್ಚ್ 4: ಭಾರತದಲ್ಲೂ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್‌ ಈ ಸಾರಿಯ ಹೋಳಿ ಸಂಭ್ರಮಾಚರಣೆ ಮೇಲೆ ಕರಿನೆರಳು ಬೀರಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾರಿಯ ಹೋಳಿ ಸಂಭ್ರಮದಲ್ಲಿ ಭಾಗಿಯಾಗುತ್ತಿಲ್ಲ.

Recommended Video

Modi cancelled this major event due to Corona virus | Modi | Corona Virus | Oneindia Kannada

ಮುಂದಿನ ವಾರ ಹೋಳಿ ಸಂಭ್ರಮಾಚರಣೆ ಇಡೀ ದೇಶಾದ್ಯಂತ ನಡೆಯಲಿದ್ದು, ಕೊರೊನಾ ವೈರಸ್ ಆತಂಕ ಹೋಳಿ ಮೇಲೆ ಬಿದ್ದಿರುವುದರಿಂದ ಹೋಳಿ ಸಂಭ್ರಮಾಚರಣೆಗೆ ಅಡ್ಡಿಯಾಗಬಹುದು ಎನ್ನಲಾಗಿದೆ. ಕೊರೊನಾ ಸೋಂಕು ತಗುಲುವ ಸಾಧ್ಯತೆಯ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಮೋದಿ ಹೋಳಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

ಡೆಡ್ಲಿ ಕೊರೊನಾಕ್ಕೆ ಬೆದರಿ 54 ಸಾವಿರ ಕೈದಿಗಳ ಬಿಡುಗಡೆ..!ಡೆಡ್ಲಿ ಕೊರೊನಾಕ್ಕೆ ಬೆದರಿ 54 ಸಾವಿರ ಕೈದಿಗಳ ಬಿಡುಗಡೆ..!

ಈ ಕುರಿತು ಟ್ವೀಟ್ ಮಾಡಿರುವ ಮೋದಿ ಅವರು, ತಜ್ಞರ ಸಲಹೆ ಮೇರೆಗೆ ಹೋಳಿ ಆಚರಣೆ ವೇಳೆ ಜನಸಮೂಹದಲ್ಲಿ ಪಾಲ್ಗೊಂಡು ಹೋಳಿ ಆಚರಿಸದಿರಲು ನಿರ್ಧರಿಸಿದ್ದೇನೆ. ಈ ವರ್ಷ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Prime Minister Narendra Modi Not Participating This Year Holi Milan Ahead Of Coronavirus

ಕೊರೊನಾ ಸೋಂಕು ಪೀಡಿತರನ್ನು ಕೈ ಕುಲುಕುವುದರಿಂದ, ಅಪ್ಪಿಕೊಳ್ಳುವುದರಿಂದ ಹಾಗೂ ಸನಿಹ ಬೆರೆಯುವುದರಿಂದ ವೈರಸ್ ತಗಲುತ್ತದೆ. ದೆಹಲಿಯಲ್ಲೂ ಮೂರು ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

English summary
Prime Minister Narendra Modi Not Participating This Year Holi Milan Ahead Of Coronavirus. Modi twitted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X