ಕಾಂಗ್ರೆಸ್ಸಿಗೆ ಮುಖಭಂಗ ಉಂಟುಮಾಡಿದ ಪ್ರಣಬ್ ಮುಖರ್ಜಿ ನಡೆ

Recommended Video

      Exit Poll 2019: ಕಾಂಗ್ರೆಸ್ಸಿಗರಿಗೆ ಮುಜಗರಕ್ಕೀಡುಮಾಡಿದ ಪ್ರಣಬ್ ಮುಖರ್ಜಿ | Oneindia Kannada

      ನವದೆಹಲಿ, ಮೇ 21: ಒಂದು ಕಡೆ ಕಾಂಗ್ರೆಸ್ ಇವಿಎಂ ದೋಷ, ತಾರತಮ್ಯದ ನಿರ್ಧಾರ ಎಂದು ಚುನಾವಣಾ ಆಯೋಗವನ್ನು ತೆಗಳುತ್ತಿದ್ದರೆ, ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚುನಾವಣಾ ಆಯೋಗವನ್ನು ಹೊಗಳುವ ಮೂಲಕ ಕಾಂಗ್ರೆಸ್ಸಿಗೆ ಮುಜುಗರವನ್ನುಂಟು ಮಾಡಿದ್ದಾರೆ.

      "ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಯನ್ನು ಪರಿಪೂರ್ಣವಾಗಿ ನಡೆಸಿದೆ" ಎಂದು ಮುಖರ್ಜಿ ಹೇಳಿದ್ದಾರೆ.

      "ನಾವು ಯಾವುದೇ ಸಾಂವಿಧಾನಿಕ ಸಂಸ್ಥೆಯನ್ನು ಬಲಾಡ್ಯಗೊಳಿಸಬೇಕಾದರೆ ಅದರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ಇಂದು ಭಾರತದಲ್ಲಿ ಚುನಾವಣೆಗಳು ಯಶಸ್ವಿಯಾಗುತ್ತಿವೆ ಎಂದರೆ ಅದಕ್ಕೆ ಕಾರಣ ಚುನಾವಣಾ ಆಯುಕ್ತರು. ಸುಕುಮಾರ್ ಸೇನ್ ಅವರಿಂದ ಹಿಡಿದು ಪ್ರಸ್ತುತ ಚುನಾವಣಾ ಆಯುಕ್ತರವರೆಗೂ ಎಲ್ಲರೂ ತಮ್ಮ ಕೆಲಸನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ಅವರನ್ನು ಟೀಕಿಸುವುದು ಸರಿಯಲ್ಲ. ಈ ಚುನಾವಣೆಯೂ ಪರಿಪೂರ್ಣವಾಗಿದೆ" ಎಂದು ಅವರು ಹೇಳಿದರು.

      Pranab Mukherjee praises election commission

      ಇತ್ತ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಮುಖಂಡರು ಮಂಗಳವಾರ ದೆಹಲಿಯಲ್ಲಿ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಇವಿಎಂ ದೋಷ ಮತ್ತು ವಿವಿಪ್ಯಾಟ್ ಎಣಿಕೆ ಕುರಿತು ದೂರು ನೀಡುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+