ಆಪ್ ಬಿಟ್ಟ ಮೇಲೆ ದೆಹಲಿಯಲ್ಲಿ ಏನೆಲ್ಲಾ ನಡೆಯುತ್ತಿದೆ?

ನವದೆಹಲಿ, ಏ.3- ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಅರ್ಧ ದಾರಿಯಲ್ಲೇ ಗದ್ದುಗೆ ಬಿಟ್ಟು ಹೊರನಡೆದ ಮೇಲೆ ದಿಲ್ಲಿಯಲ್ಲಿ ಏನೆಲ್ಲಾ ನಡೆಯುತ್ತಿದೆ? ಎಂಬ ಕುತೂಹಲ ಮೂಡಿದೆ. ಮೊದಲೇ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷ ತನ್ನ ನೆಲೆಯನ್ನು ಮತ್ತಷ್ಟು ಕಳೆದುಕೊಳ್ಳುತ್ತಿದೆ. ಇನ್ನು ದಿಲ್ಲಿ ಮೇಲೆ ಆಮ್ ಆದ್ಮಿ ಪಕ್ಷಕ್ಕೆ ಅನಾಯಾಸವಾಗಿ ಪ್ರಾಪ್ತಿಯಾಗಿದ್ದ ಹಿಡಿತವನ್ನು ಸಡಿಲವಾಗುತ್ತಿದೆ.

ರಾಜಧಾನಿ ದೆಹಲಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ದೆಹಲಿಯಲ್ಲಿರುವ 7 ಸ್ಥಾನಗಳ ಪೈಕಿ ಬಿಜೆಪಿ ಕನಿಷ್ಠ 5 ಸೀಟುಗಳನ್ನಾದರೂ ಗೆಲ್ಲಲಿದೆ ಎಂದು ಇಂಡಿಯಾ ಟುಡೇ ಮತ್ತು ಸಿಸೆರೋ ಜಂಟಿ ಸಮೀಕ್ಷೆ ಭವಿಷ್ಯ ಹೇಳಿದೆ. ಇದನ್ನು ಸಾಧ್ಯವಾಗಿಸಿರುವುದು ದಿಲ್ಲಿಯ ಮುಖ್ಯಮಂತ್ರಿ ಅಭ್ಯರ್ಥಿ, ಪ್ರಸ್ತುತ ಎಂಪಿ ಚುನಾವಣೆಗೆ ನಿಂತಿರುವ ಡಾ. ಹರ್ಷವರ್ಧನ ಅವರು. ಅಂದಹಾಗೆ ಸಮೀಕ್ಷೆಯ ಪ್ರಕಾರ ಹರ್ಷವರ್ಧನ ಅವರು ಕಾಂಗ್ರೆಸ್ಸಿನ ಕಪಿಲ್ ಸಿಬಲ್ ಮತ್ತು ಎಎಪಿಯ ಅಶುತೋಷ್ ಅವರಿಗೆ ಮಣ್ಣುಮುಕ್ಕಿಸಲಿದ್ದಾರಂತೆ.

India Today Group-Cicero opinion poll: BJP may completely rout Congress in Delhi

ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ಪಕ್ಷ ಹೀನಾಯ ಸೋಲನುಭವಿಸಲಿದೆ. ಇದಕ್ಕೆ ಇಂಬು ಕೊಡುವಂತೆ ಚುನಾವಣೆಗೆ ಇನ್ನು 7 ದಿನ ಬಾಕಿಯಿರುವಾಗ (April 10) ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತವಾಗಿದ್ದು, ಖುದ್ದು ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದಿದ್ದಾರೆ. ಗೌತಮ ಬುದ್ಧ ನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪರ ಕಣಕ್ಕಿಳಿದಿದ್ದ ರಮೇಶ್ ಚಂದ್ ತೊಮಾರ್ ಇಂದು ಬಿಜೆಪಿ ಸಮಾವೇಶದಲ್ಲಿ ಮೋದಿ ಅವರನ್ನು ಅಪ್ಪಿಕೊಂಡಿದ್ದಾರೆ (ಚಿತ್ರಗಳಲ್ಲಿ ಕಾಣಬಹುದು).

Congress candidate from Gautam Buddh Nagar Ramesh Chand Tomar joined BJP
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಳ್ಳೆಯ ಸಾಧನೆ ಮಾಡಿದ್ದ ಆಮ್ ಆದ್ಮಿ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸೀಟು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬುದು ಸಮೀಕ್ಷೆಯ ಅಭಿಮತವಾಗಿದೆ. 2009ರ ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ 7 ಸೀಟುಗಳನ್ನು ಬಾಚಿಕೊಂಡಿತ್ತು.

India Today Group-Cicero ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಮತ್ತೊಂದು ಸಂಗತಿಯೆಂದರೆ ಮುಸ್ಲಿಮರ ಶೇ. 17ರಷ್ಟು ಮತಗಳನ್ನೂ ಬಿಜೆಪಿ ಗಿಟ್ಟಿಸುವ ಅಂದಾಜಿದೆ. ಸಾಕಷ್ಟು ಮುಸ್ಲಿಮರು ಈ ಬಾರಿ ಬಿಜೆಪಿಗೆ ಮತ ಹಾಕುವ ಮನಸು ಮಾಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+