ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಯ್ಡಾದಲ್ಲಿ ನಿಷೇಧಾಜ್ಞೆ: ಏಪ್ರಿಲ್ 30ರವರೆಗೂ ಈ ನಿಯಮ ಪಾಲನೆ ಕಡ್ಡಾಯ

|
Google Oneindia Kannada News

ನೋಯ್ಡಾ, ಮಾರ್ಚ್ 18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಸಾಲು ಸಾಲು ಹಬ್ಬ-ಹರಿದಿನಗಳ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಗೌತಮ್ ಬುದ್ಧ ನಗರ ಠಾಣೆ ಪೊಲೀಸರು ಏಪ್ರಿಲ್ 30ರವರೆಗೂ ಸಿಆರ್ ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಯಾವುದೇ ರೀತಿ ಅಪ್ಪಣೆ ಇಲ್ಲದ ಪ್ರತಿಭಟನೆ, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಗೊಳ್ಳದೇ ಕೊವಿಡ್-19 ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಎಣ್ಣೆ ಅಂಗಡಿಗಳೆಲ್ಲ ಬಂದ್: ಈ ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್! ಎಣ್ಣೆ ಅಂಗಡಿಗಳೆಲ್ಲ ಬಂದ್: ಈ ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್!

ಉತ್ತರ ಪ್ರದೇಶದಲ್ಲಿ ಹೋಳಿ, ಸಬ್-ಇ ಬರಾತ್, ಗುಡ್ ಫ್ರೈಡೇ, ನವರಾತ್ರಿ, ಅಂಬೇಡ್ಕರ್ ಜಯಂತಿ, ರಾಮ ನವಮಿ, ಮಹಾವೀರ ಜಯಂತಿ, ಹನುಮಾನ್ ಜಯಂತಿ ಸೇರಿದಂತೆ ಸಾಲು ಸಾಲು ಹಬ್ಬಗಳಲ್ಲಿ ಕೊವಿಡ್-19 ಶಿಷ್ಟಾಚಾರ ಪಾಲಿಸುವುದು ಕಡ್ಡಾಯವಾಗಿದೆ. ಉತ್ತರ ಪ್ರದೇಶ ಪೊಲೀಸರು ಕೊರೊನಾವೈರಸ್ ನಿಯಂತ್ರಿಸುವ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ಹೇರಿದ್ದಾರೆ.

Police Imposed Section 144 In Noida Till April 30: Read Here’s List of Restrictions

ನೋಯ್ಡಾದಲ್ಲಿ ನಿಷೇಧಾಜ್ಞೆ ಮತ್ತು ನಿರ್ಬಂಧಿತ ಅಂಶಗಳು:

- ಸಮಾಜ ವಿರೋಧಿ ಅಂಶಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸಲು ಪ್ರಯತ್ನಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಈ ಅವಧಿಯಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ COVID-19 ಶಿಷ್ಟಾಚಾರಗಳನ್ನು ಅನುಸರಿಸಬೇಕಾಗುತ್ತದೆ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಶುತೋಷ್ ದ್ವಿವೇದಿ ಎಂದು ಹೇಳಿದ್ದಾರೆ.

- ಅಂಗವಿಕಲರು, ದೃಷ್ಟಹೀನರ ಹೊರತಾಗಿ ಯಾರೂ ಕೂಡಾ ಬಡಿಗೆ, ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕವಾಗಿ ಓಡಾಡುವಂತಿಲ್ಲ.

- ಪೂರ್ವಾನುಮತಿ ಇಲ್ಲದೇ ಯಾರೊಬ್ಬರೂ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ನಡೆಸುವಂತಿಲ್ಲ.

- ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿಯೊಳಗೆ ಯಾವುದೇ ಬಂದೂಕುಗಳನ್ನು ಅನುಮತಿಸಲಾಗುವುದಿಲ್ಲ. ಸರ್ಕಾರವು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಒದಗಿಸಿರುವ ಜನರು ಕೂಡಾ ತಮ್ಮ ಬಂದೂಕುಧಾರಿಯನ್ನು ಕಚೇರಿಗಳಿಂದ ಹೊರಗಿಡಬೇಕು.

- ವಿವಾಹ ಸಮಾರಂಭ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮುಂತಾದ ಘಟನೆಗಳಲ್ಲಿ ಸಂಭ್ರಮಾಚರಣೆ ವೇಳೆಯಲ್ಲಿ ಗುಂಡು ಹಾರಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

- ಸಿಆರ್ ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಯಾವುದೇ ನಿರ್ಬಂಧಿತ ಆದೇಶಗಳ ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

English summary
Police Imposed Section 144 In Noida Till April 30: Read Here’s List of Restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X