ಪಾಕ್ ಆಕ್ರಮಿತ ಕಾಶ್ಮೀರ, ಭಾರತದ ಅವಿಭಾಜ್ಯ ಅಂಗ: ಸುಷ್ಮಾ ಸ್ವರಾಜ್

ನವದೆಹಲಿ, ಜುಲೈ 18: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಅವಿಭಾಜ್ಯ ಅಂಗ. ಅದನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.

ಪಾಕ್ ಆಕ್ರಮಿತ ಕಾಶ್ಮೀರದ ಒಸಾಮ ಅಲಿ(24) ಎಂಬುವವರು ನವದೆಹಲಿಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಹಿ ವೈದ್ಯಕೀಯ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮಾತನಾಡುತ್ತಿದ್ದ ಸುಷ್ಮಾ ಸ್ವರಾಜ್, ಒಸಾಮ ಅವರಿಗೆ ಯಾವುದೇ ಪತ್ರದ ಅಗತ್ಯವಿಲ್ಲದೆ, ಭಾರತ ವೀಸಾ ನೀಡಲಿದೆ.

POK is an integral part of India: Sushma Swaraj

ಏಕೆಂದರೆ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇಲ್ಲಿನ ಜನರಿಗೆ ವೀಸಾ ನೀಡಲು ಪಾಕಿಸ್ತಾನದ ಕಚೇರಿಯಿಂದ ಪತ್ರದ ಅಗತ್ಯವಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಟ್ಯೂಮರ್ ನಿಂದ ಬಳಲುತ್ತಿರುವ ಅಲಿ, ಈ ಮೊದಲೇ ದೆಹಲಿಗೆ ಬರಬೇಕಿತ್ತು. ಆದರೆ ಅವರು ಭಾರತದ ವೀಸಾ ಪಡೆಯುವ ಮೊದಲು ಪಾಕಿಸ್ತಾನದ ವಿದೇಶಾಂಗ ಕಚೇರಿಯಿಂದ ಭಾರತಕ್ಕೆ ಈ ಕುರಿತು ಪತ್ರ ಬರಬೇಕಿತ್ತು. ಆದರೆ ಇದುವರೆಗೂ ಅಲ್ಲಿಂದ ಯಾವುದೇ ಪತ್ರ ಬಾರದ ಕಾರಣ, ತುರ್ತು ಮೆಡಿಕಲ್ ವೀಸಾ ನೀಡಲು ಸುಷ್ಮಾ ಸ್ವರಾಜ್ ಒಪ್ಪಿಗೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+