ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊತ್ತಾ? ಪ್ರಧಾನಿ ಮೋದಿ ರಾಹುಲ್ ಗಾಂಧಿಗೆ ಮೇಷ್ಟ್ರಂತೆ!

|
Google Oneindia Kannada News

Recommended Video

ನರೇಂದ್ರ ಮೋದಿ ನನಗೆ ಪಾಠ ಕಳಿಸಿದ್ದಾರೆ ಎಂದ ರಾಹುಲ್ ಗಾಂಧಿ | Oneindia Kannada

ನವದೆಹಲಿ, ಡಿಸೆಂಬರ್ 12: "ನಿಜ ಹೇಳಬೇಕೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ನನಗೆ ಪಾಠ ಕಲಿಸಿದ್ದಾರೆ, 'ಏನನ್ನು ಮಾಡಬಾರದು ಎಂಬ ಪಾಠವನ್ನು ಮೋದಿ ನನಗೆ ಕಲಿಸಿಕೊಟ್ಟಿದ್ದಾರೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ ಆಡಳಿತವಿದ್ದ ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಅಮೋಘ ಜಯ ಸಾಧಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ತಮ್ಮ ಸಂತಸವನ್ನು ಹಂಚಿಕೊಂಡರು.

'2014 ರ ನಂತರದ ಪ್ರಯಾಣ ನಿಜಕ್ಕೂ ಅತ್ಯುತ್ತಮವಾಗಿತ್ತು. ಹಲವು ತೊಡಕುಗಳಿದ್ದವು, ಕಹಿ ಇತ್ತು. ಆದರೂ ಉತ್ತಮ ಪ್ರಯಾಣ' ಎಂದು ಅವರು ಹೇಳಿದರು.

ಈ ಗೆಲುವು ನರೇಂದ್ರ ಮೋದಿಗೆ ಸ್ಪಷ್ಟ ಎಚ್ಚರಿಕೆ: ರಾಹುಲ್ ಗಾಂಧಿ ಈ ಗೆಲುವು ನರೇಂದ್ರ ಮೋದಿಗೆ ಸ್ಪಷ್ಟ ಎಚ್ಚರಿಕೆ: ರಾಹುಲ್ ಗಾಂಧಿ

ತೆಲಂಗಾಣ, ಮಿಜೋರಾಂ, ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿ.11 ರಂದು ಹೊರಬಿದ್ದಿದೆ.

ಏನನ್ನು ಮಾಡಬಾರದು ಎಂಬುದನ್ನು ಕಲಿಸಿದ್ದಾರೆ!

ಏನನ್ನು ಮಾಡಬಾರದು ಎಂಬುದನ್ನು ಕಲಿಸಿದ್ದಾರೆ!

"ನರೇಂದ್ರ ಮೋದಿ ಅವರು ನನಗೆ ಮೇಷ್ಟ್ರು. ಅವರು ನನಗೆ ಪಾಠ ಕಲಿಸಿದ್ದಾರೆ. ಏನನ್ನು ಮಾಡಬೇಕು ಎಂಬುದನ್ನಲ್ಲ, ಬದಲಾಗಿ ಏನನ್ನು ಮಾಡಬಾರದು ಎಂಬುದನ್ನು ಕಲಿಸಿದ್ದಾರೆ. ನರೇಂದ್ರ ಮೋದಿ ಅವರಿಗೆ 2014 ರಲ್ಲಿ ಬಹುದೊಡ್ಡ ಅವಕಾಶ ನೀಡಲಾಗಿತ್ತು. ಆದರೆ ಅವರು ಈ ದೇಶದ ಜನರ ಹೃದಯ ಬಡಿತ ಆಲಿಸುವಲ್ಲಿ ವಿಫಲರಾದರು. ಅವರಲ್ಲಿ ದುರಹಂಕಾರವಿತ್ತು" - ರಾಹುಲ್ ಗಾಂಧಿ

ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಆಘಾತ?! ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಆಘಾತ?!

2014 ರ ಚುನಾವಣೆ ನನಗೆ ಮಹತ್ವದ್ದು

2014 ರ ಚುನಾವಣೆ ನನಗೆ ಮಹತ್ವದ್ದು

"ನಾನು ಯಾವತ್ತಿಗೂ ನನ್ನ ತಾಯಿಯ ಬಳಿ ಹೇಳುತ್ತಿದ್ದೆ. 2014 ರ ಚುನಾವಣೆ ನನಗೆ ಅತ್ಯಂತ ಮಹತ್ವದ್ದು ಎಂದು. ಈ ಚುನಾವಣೆಯಿಂದ ನಾನು ಸಾಕಷ್ಟು ಕಲಿತೆ. ಮನುಷ್ಯನಿಗೆ ಅತ್ಯಗತ್ಯವಾದ ಗುಣ ನಮ್ರತೆ ಎಂಬುದನ್ನು ನಾನು ಕಲಿತೆ" - ರಾಹುಲ್ ಗಾಂಧಿ

ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?

ಜನರು ಮೋದಿಯನ್ನು ಆರಿಸಿದ್ದು ಏಕೆ?

ಜನರು ಮೋದಿಯನ್ನು ಆರಿಸಿದ್ದು ಏಕೆ?

"ಪ್ರಧಾನಿ ನರೇಂದ್ರ ಮೋದಿಯವರನ್ನು ಜನರು ಆರಿಸಿದ್ದು ನಿರುದ್ಯೋಗ, ಭ್ರಷ್ಟಚಾರವನ್ನು ಹೋಗಲಾಡಿಸುತ್ತಾರೆ ಎಂಬ ಅವರ ಮಾತನ್ನು ನಂಬಿ. ಆದರೆ ಇದೀಗ ಪ್ರಧಾನಿಯೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ತಿಳಿದು ಅವರಿಗೆ ಭ್ರಮನಿರಸನವಾಗಿದೆ. ಈ ವೈಫಲ್ಯ ಅದರದೇ ಈ ಫಲಿತಾಂಶ"- ರಾಹುಲ್ ಗಾಂಧಿ

ಕಾರ್ಯಕರ್ತರಿಗೆ ನಮನ

ಕಾರ್ಯಕರ್ತರಿಗೆ ನಮನ

"ಈ ಗೆಲುವಿಗೆ ಕಾರಣ ಕಾಂಗ್ರೆಸ್ ಕಾರ್ಯಕರ್ತರು. ಅವರಿಗೆ ನನ್ನ ಕೃತಜ್ಞತೆಗಳು. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಗೊಂದಲ ಏಳಬಹುದು, ಭಿನ್ನಾಭಿಪ್ರಾಯ ಮೂಡಬಹುದು ಎಂಬುದು ಸುಳ್ಳು. ಅದೊಂದು ದೊಡ್ಡ ಸಮಸ್ಯೆಯಾಗಲಾರದು ಎಂದುಕೊಂಡಿದ್ದೇನೆ"- ರಾಹುಲ ಗಾಂಧಿ

English summary
Congress president Rahul Gandhi after party's victory in 3 states said, 'PM Narendra Modi taught me the lesson-what not to do'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X