ನಗದು ರಹಿತ ವ್ಯವಸ್ಥೆಗೆ 'ಭೀಮ್' ಆ್ಯಪ್ ಬಿಡುಗಡೆಗೊಳಿಸಿದ ಮೋದಿ

Posted By:
Subscribe to Oneindia Kannada

ನವದೆಹಲಿ,ಡಿಸೆಂಬರ್ 31: ಅಪನಗದೀಕರಣವಾದ 50ದಿನದ ನಂತರ ಏನೇನಾಗುತ್ತದೆ ಎಂಬುದಕ್ಕೆ ಮೊದಲ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಡಾ. ಅಂಬೇಡ್ಕರ್ ಅವರ ಹೆಸರಿನಲ್ಲಿ 'ಭೀಮ್'( ಭಾರತ್ ಇಂಟರ್ ಫೇಸ್ ಫಾರ್ ಮನಿ) ಎಂಬ ಡಿಜಿಟಲ್ ಅಪ್ಲಿಕೇಶನ್(ಆ್ಯಪ್) ಅನ್ನು ಶುಕ್ರವಾರ ಬಿಡುಗಡೆಗೊಳಿಸಿದರು.

ದೆಹಲಿಯಲ್ಲಿ ನಡೆದ ಡಿಜಿ ಧನ ಮೇಳದಲ್ಲಿ ಮೋದಿ 'ಭೀಮ್'ಗೆ ಚಾಲನೆ ನೀಡಿ, 'ಇನ್ನು ಎರಡು ವಾರಗಳಲ್ಲಿ ಈ ಅಪ್ಲಿಕೇಶನ್ ಅನ್ನು ಮೇಲ್ದರ್ಜೆಗೆ ಏರಿಸುತ್ತೇವೆ. ಇದಕ್ಕೆ ಹೆಬ್ಬೆಟ್ಟಿನ ಗುರುತು ಸಾಕು, ಸ್ಮಾರ್ಟ್ ಫೋನ್ ಅಲ್ಲದೆ ಸಾಮಾನ್ಯ ಪೋನ್ ಗಳಲ್ಲೂ ಸುಲಭವಾಗಿ ವಹಿವಾಟು ನಡೆಸಲು ಅನುಕೂಲವಾಗಲಿದೆ ಇದು ದೇಶದ ಜನರಿಗೆ ನೀಡುತ್ತಿರುವ ಹೊಸ ವರ್ಷದ ಕೊಡುಗೆ ಎಂದು ಪ್ರಧಾನಿ ತಿಳಿಸಿದರು.

Narendra Modi

ಖಾದಿ ಗ್ರಾಮೋದ್ಯೋಗದಿಂದ ಖರೀದಿಸಿದ ವಸ್ತುವಿಗೆ ಭೀಮ್ ಅಪ್ಲಿಕೇಶನ್ ಮೂಲಕ ಹಣ ಪಾವತಿಸಿ, ಮುಂದಿನ ದಿನದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟು ನಡೆಸಲು ಭೀಮ್ ನಲ್ಲಿ ಹೆಬ್ಬೆಟ್ಟು ಗುರುತು ಸಾಕು. ಈ ಗುರುತು ಬ್ಯಾಂಕ್ ವ್ಯವಹಾರವಾಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದರು.


ದೇಶದಲ್ಲಿ ಇದುವರೆಗೆ ನೂರು ಕೋಟಿ ಜನ ಆಧಾರ್ ಸಂಖ್ಯೆ ಹೊಂದಿದ್ದಾರೆ. ಅವರ ಬಳಿ ನೂರು ಕೋಟಿಗೂ ಹೆಚ್ಚು ಮೊಬೈಲ್ ಗಳಿವೆ, ಇದು ಆಧಾರ್ ಆಧಾರಿತವಾಗಿದ್ದು, ಮುಂದಿನ ಎರಡು ವಾರದಲ್ಲಿ ಹೆಬ್ಬೆಟ್ಟಿನ ಮೂಲಕ ಭೀಮ್ ಬಳಕೆಯಾದರೆ ಕ್ರಾಂತಿಯೇ ಆಗಲಿದೆ ಎಂದು ಪ್ರತಿಪಾದಿಸಿದರು.

BHIM


ಬಳಕೆ ಹೇಗೆ?:
ಬಳಕೆದಾರ, ಭೀಮ್ ಅಪ್ಲಿಕೇಶನ್ ಮೂಲಕ ಬ್ಯಾಂಕ್‌ ಖಾತೆ ನೋಂದಣಿ ಮಾಡಿಕೊಂಡು ಯುಪಿಐ ಪಿನ್‌ ಪಡೆಯಬೇಕು. ಆ ನಂತರ 'ಭೀಮ್' ಬಳಸಿ ಬ್ಯಾಂಕಿನ ಹಣ ವರ್ಗಾವಣೆ, ಜಮೆ, ಖಾತೆ ಪರಿಶೀಲನೆ ಮಾಡಬಹುದು. ಭೀಮ್ ನಲ್ಲಿ ಕ್ಯೂಆರ್ ಕೋಡ್ ಬಳಸಿ ಸ್ಕ್ಯಾನ್ ಮಾಡಿ ಕೊಂಡ ವಸ್ತುವಿಗೆ ಹಣ ಪಾವತಿಸಬಹುದು. ನೇಟ್ ಬ್ಯಾಂಕಿಂಗ್ ನಂತೆ ಐಎಫ್ ಪಿಸಿ ಕೋಡ್ ಬಳಸಿ ಹಣ ಪಾವತಿಸಬಹುದು.

ಸದ್ಯಕ್ಕೆ ಇದನ್ನು ಆಂಡ್ರಾಯ್ಡ್ ಫೋನಿನಲ್ಲಿ ಮಾತ್ರ ಬಳಕೆಯಾಗುತ್ತಿದ್ದು, ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿ ಪಡಿಸಿರುವ ಅಪ್ಲಿಕೇಶನ್ ಆಗಿದೆ. ಒಮ್ಮಲೆ 10ಸಾವಿರದ ವರೆಗೂ ವಹಿವಾಡು ನಡೆಸಬಹುದು, ಒಂದು ದಿನದಲ್ಲಿ 20ಸಾವಿರದ ವರೆಗೆ ವಹಿವಾಟು ಸಾಧ್ಯ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್ ಸಿ, ಐಸಿಐಸಿಐ ಸೇರಿದಂತೆ ಸದ್ಯಕ್ಕೆ 32 ಬ್ಯಾಂಕುಗಳು ಇದರ ಪಟ್ಟಿಯಲ್ಲಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಇದರ ಬಳಕೆಯಿದ್ದು ಎಲ್ಲ ಭಾಷೆ ಇದಕ್ಕೆ ಸೇರ್ಪಡೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Urging people to make digital payments a "habit" to make the country a cashless economy, Prime Minister Narendra Modi on Friday launched a mobile app for the Unified Payment Interface (UPI). The application, which will be common across all banks and financial institutions, is called BHIM
Please Wait while comments are loading...