ಈದ್ ಹಬ್ಬ ಶಾಂತಿಯ ಚೈತನ್ಯ ಹೆಚ್ಚಿಸಲಿದೆ: ಮೋದಿ ವಿಶ್ವಾಸ

ನವದೆಹಲಿ, ಆಗಸ್ಟ್ 12: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ಮುಸ್ಲಿಮರಿಗೆ ಈದ್ ಹಬ್ಬರ ಶುಭಾಶಯಗಳನ್ನು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಮುಸ್ಲಿಮರು ಈದ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಗಳನ್ನು ಆರಂಭಿಸಿದ ವೇಳೆಯೇ ಟ್ವೀಟ್ ಮಾಡಿರುವ ಮೋದಿ ಅವರು, 'ಈದ್ ಮುಬಾರಕ್' ತಿಳಿಸಿದ್ದಾರೆ.

ಈದ್ ಹಬ್ಬವು ಶಾಂತಿಯ ಕುರಿತಾದ ನಮ್ಮ ಚೈತನ್ಯವನ್ನು ಹಾಗೂ ಸಮಾಜದ ಸಂತಸವನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ.

'ಈದ್ ಅಲ್-ಅದಾ ಸಂದರ್ಭದಲ್ಲಿ ಶುಭಾಶಯಗಳು. ಇದು ಶಾಂತಿಯ ಉತ್ಸಾಹವನ್ನು ಮತ್ತು ನಮ್ಮ ಸಮಾಜದಲ್ಲಿನ ಆನಂದವನ್ನು ಹೆಚ್ಚಿಸಲಿದೆ ಎಂಬ ಆಶಯ ಹೊಂದಿದ್ದೇನೆ. ಈದ್ ಮುಬಾರಕ್' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

PM Narendra Modi Eid Al Adha Festival Wishes

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಟ್ವಿಟ್ಟರ್‌ನಲ್ಲಿ ಶುಭ ಹಾರೈಸಿದ್ದಾರೆ. 'ಎಲ್ಲ ನಾಗರಿಕರಿಗೂ, ಮುಖ್ಯವಾಗಿ ಭಾರತದಲ್ಲಿರುವ ಹಾಗೂ ವಿದೇಶದಲ್ಲಿರುವ ನಮ್ಮ ಮುಸ್ಲಿಂ ಸಹೋದರರು ಮತ್ತು ಸಹೋದರಿಯರಿಗೆ ಈದ್ ಶುಭಾಶಯಗಳು. ಈದ್‌ ಉಲ್ ಜುಹಾ ಪ್ರೀತಿ, ಬ್ರಾತೃತ್ವ ಮತ್ತು ಮಾನವೀಯತೆಯ ಸೇವೆಯನ್ನು ಸಂಕೇತಿಸುತ್ತದೆ. ನಮ್ಮ ಸಂಯೋಜಿತ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗೋಣ' ಎಂದು ಕೋವಿಂದ್ ಅವರು ಹಾರೈಸಿದ್ದಾರೆ.

'ನಮ್ಮ ದೇಶದ ಜನರಿಗೆ 'ಈದ್ ಉಲ್ ಜುವಾ'ದ ಶುಭ ಸಂದರ್ಭದಲ್ಲಿ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇದು ಭಕ್ತಿ, ನಂಬಿಕೆ ಮತ್ತು ತ್ಯಾಗದ ಗುಣಗಳನ್ನು ಬಿಂಬಿಸುವ ಹಾಗೂ ಬ್ರಾತೃತ್ವ, ಸಹಾನುಭೂತಿ ಮತ್ತು ಏಕತೆಯ ಭಾವಗಳನ್ನು ಉತ್ತೇಜಿಸುವ ಹಬ್ಬ' ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+