'ಹೋಳಿ ಹಬ್ಬವನ್ನು ಪರಸ್ಪರ ಪ್ರೀತಿ ಮತ್ತು ಸಹೋದರತೆಯಿಂದ ಆಚರಿಸಿ': ಪ್ರಧಾನಿ ಮೋದಿ

ನವದೆಹಲಿ ಮಾರ್ಚ್ 18: ಇಂದು ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. "ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ ಮತ್ತು ಸಹೋದರತ್ವದ ಸಂಕೇತವಾಗಿರುವ ಈ ಬಣ್ಣಗಳ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷದ ತರಲಿ" ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ದೇಶವಾಸಿಗಳಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಬಣ್ಣಗಳ ಹಬ್ಬವಾದ ಹೋಳಿಯು ಕೋಮು ಸೌಹಾರ್ದತೆ ಕಾಪಾಡಲು ಜೀವಂತ ಉದಾಹರಣೆಯಾಗಿದೆ ಎಂದು ಹೇಳಿದರು. ಇದು ವಸಂತ ಆಗಮನದ ಒಳ್ಳೆಯ ಸುದ್ದಿಯನ್ನು ತರುತ್ತದೆ. ಈ ಹಬ್ಬವು ಎಲ್ಲಾ ದೇಶವಾಸಿಗಳ ಜೀವನದಲ್ಲಿ ಸಂತೋಷ, ಉತ್ಸಾಹ ಮತ್ತು ಹೊಸ ಶಕ್ತಿಯನ್ನು ತುಂಬಲಿ ಎಂದು ನಾನು ಬಯಸುತ್ತೇನೆ.

ಇನ್ನುಳಿದ ನಾಯಕರು ಕೂಡ ಈ ರೀತಿ ಹೋಳಿ ಶುಭಾಶಯ ಕೋರಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡ ದೇಶವಾಸಿಗಳಿಗೆ ಹೋಳಿ ಶುಭಾಶಯ ಕೋರಿದ್ದಾರೆ. ಸಂತೋಷದ ಈ ಬಣ್ಣದ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ, ಅದೃಷ್ಟ ಮತ್ತು ಹೊಸ ಶಕ್ತಿಯನ್ನು ತುಂಬಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

PM Modi Wished the Countrymen on Holi

ಸಂತೋಷ, ಸಾಮಾಜಿಕ ಸೌಹಾರ್ದತೆ, ಹೊಸ-ಯೋಜನೆಗಳ ಪವಿತ್ರ ಹಬ್ಬವಾದ ಹೋಳಿ ಹಬ್ಬದಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಹಬ್ಬವು ಪ್ರತಿಯೊಬ್ಬರ ಬಾಳಿನಲ್ಲಿ ಸಂತಸದ ಬಣ್ಣಗಳನ್ನು ಸುರಿಸಿ, ಸುಖ-ಸಮೃದ್ಧಿಯನ್ನು ತರಲಿ, ಹಬ್ಬದ ಸದ್ಭಾವನೆಯ ನೀರೆರೆಯಲಿ ಎಂಬುದೇ ನನ್ನ ಹಾರೈಕೆ ಎಂದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದೇಶದ ಜನರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿ ವಿಡಿಯೋ ಸಂದೇಶವನ್ನು ನೀಡಿದ್ದಾರೆ. ಹೋಳಿ ಹಬ್ಬದ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ಅವರು ಹೇಳಿದ್ದಾರೆ. ಶ್ರೀಕೃಷ್ಣನು ಎಲ್ಲರನ್ನೂ ಸನ್ಮಾರ್ಗದಲ್ಲಿ ಮುನ್ನಡೆಸಲಿ ಮತ್ತು ನಮ್ಮ ಜೀವನದಲ್ಲಿ ಸಂತೋಷದ ಬಣ್ಣಗಳನ್ನು ತುಂಬಲಿ ಎಂದಿದ್ದಾರೆ.

ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಹೋಳಿ ಹಬ್ಬದಂದು ನಿಮಗೆಲ್ಲರಿಗೂ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ. ಸಂತೋಷ ಮತ್ತು ಸಾಮರಸ್ಯವನ್ನು ಸಂಕೇತಿಸುವ ಈ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹವನ್ನು ತುಂಬಲಿ ಎಂದು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+