ಪಾಕಿಸ್ತಾನದಲ್ಲಿ ದುರಂತ: ಬೇಸರ ವ್ಯಕ್ತಪಡಿಸಿದ ಮೋದಿ

ನವ ದೆಹಲಿ, ಮೇ 22: ಪಾಕಿಸ್ತಾನದ ಕರಾಚಿ ಬಳಿ ನಡೆದ ವಿಮಾನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ಮೋದಿ ಟ್ವೀಟ್ ಮಾಡಿದ್ದಾರೆ.

''ಪಾಕಿಸ್ತಾನದ ವಿಮಾನ ಅಪಘಾತದಿಂದಾಗಿ ಆದ ಪ್ರಾಣಹಾನಿಯಿಂದ ತೀವ್ರವಾಗಿ ದುಃಖಿತವಾಗಿದೆ. ಮೃತರ ಕುಟುಂಬಗಳಿಗೆ ನಮ್ಮ ಸಂತಾಪ ಮತ್ತು ಗಾಯಗೊಂಡವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ'' ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನದ PIAನ PK-8303 ಅಪಘಾತಗೀಡಾಗಿರುವ ವಿಮಾನವಾಗಿದೆ. ಇದರಲ್ಲಿ 91 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಇದ್ದರು. ಲಾಹೋರ್‌ನಿಂದ ಕರಾಚಿಗೆ ಈ ಬರುತ್ತಿತ್ತು. ಆದರೆ, ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ ನಡೆದಿದೆ.

PM Narendra Modi Tweets About Pakistan Plane Crash

ಈ ಬಗ್ಗೆ ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಟ್ವೀಟ್ ಮಾಡಿದ್ದು ''ಪಿಐಎ ಅಪಘಾತದಿಂದ ಆಘಾತ ಮತ್ತು ದುಃಖಿತನಾಗಿದ್ದೇನೆ. ಕರಾಚಿಗೆ ತೆರಳಿರುವ ಪಿಐಎ ಸಿಇಒ ಅರ್ಷದ್ ಮಲಿಕ್ ತಂಡಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ತಕ್ಷಣದ ವಿಚಾರಣೆ ಆರಂಭಿಸಲಾಗುತ್ತದೆ. ಸತ್ತವರ ಕುಟುಂಬಗಳಿಗೆ ಪ್ರಾರ್ಥನೆಗಳು ಮತ್ತು ಸಂತಾಪಗಳು'' ಎಂದಿದ್ದಾರೆ.

ಜಿನ್ನಾ ಗಾರ್ಡ್‌ನ್ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತವಾದ ಸ್ಥಳವಾಗಿದೆ. ಇದು ಕರಾಚಿ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+