• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಕಾಂಗ್ರೆಸ್‌ನ ಹಿಂದೂ ಸದಸ್ಯೆ ತುಳಸಿಗೆ ಆಹ್ವಾನ

By Kiran B Hegde
|

ನವದೆಹಲಿ, ಡಿ. 14: ಅಮೆರಿಕದ ಕಾಂಗ್ರೆಸ್‌ನ ಪ್ರಥಮ ಹಿಂದೂ ಸದಸ್ಯೆ ತುಳಸಿ ಗಬ್ಬಾರ್ಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಆಹ್ವಾನದ ಮೇರೆಗೆ ಡಿ. 15ರಿಂದ ಜ. 3ರ ವರೆಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಮೊದಲು ನವದೆಹಲಿಗೆ ತೆರಳಲಿರುವ ತುಳಸಿ ಗಬ್ಬಾರ್ಡ್, ನಂತರ ಗೋವಾ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಪ್ರವಾಸ ನಡೆಸಲಿದ್ದಾರೆ. ಭಾರತ ಹಾಗೂ ಅಮೆರಿಕ ನಡುವೆ ಆರ್ಥಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯ ಹೆಚ್ಚಿಸುವುದು ತುಳಸಿ ಅವರ ಪ್ರವಾಸದ ಉದ್ದೇಶ ಎಂದು ಕೇಂದ್ರ ಸರ್ಕಾರ ತಿಳಿಸಿದೆ. [ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ]

ತುಳಸಿ ಅವರು ಭಾರತದಲ್ಲಿ ಮೂರು ವಾರಗಳ ಕಾಲ ಸರ್ಕಾರದ ಅನೇಕ ಹಿರಿಯ ಅಧಿಕಾರಿಗಳು ಹಾಗೂ ಕೈಗಾರಿಕಾ ಪ್ರತಿನಿಧಿಗಳನ್ನು ಭೇಟಿ ಮಾಡುವರು. ಎರಡೂ ದೇಶಗಳ ಸಾಮಾನ್ಯ ಆಸಕ್ತಿ ಕ್ಷೇತ್ರಗಳಾದ ಭಯೋತ್ಪಾದನೆ ವಿರುದ್ಧ ಹೋರಾಟ ಮತ್ತು ಸೈನಿಕ ಸಹಕಾರ, ಎಚ್-1ಬಿ ವೀಸಾ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚಿಸಲಾಗುವುದು.

ಮೋದಿ ಎಲ್ಲ ಜನಪ್ರತಿನಿಧಿಗಳಿಗೆ ಮಾದರಿ : "ಅಮೆರಿಕ ಮತ್ತು ಭಾರತದ ಬಾಂಧವ್ಯ ಪ್ರಸ್ತುತ ಉಚ್ಛ್ರಾಯ ಸ್ಥಿತಿಯಲ್ಲಿದೆ. ನನ್ನ ಭಾರತ ಭೇಟಿಯಿಂದ ಈ ಸಂಬಂಧ ಇನ್ನಷ್ಟು ವೃದ್ಧಿಗೊಳ್ಳಬೇಕು. ನರೇಂದ್ರ ಮೋದಿ ಅವರು ನೀಡಿದ ಆಹ್ವಾನ ಒಪ್ಪಿಕೊಳ್ಳಲು ನನಗೆ ಆನಂದವಾಗುತ್ತಿದೆ. ಅವರು ಜನರಿಗಾಗಿ ತಮ್ಮನ್ನು ಅರ್ಪಿಸಿಕೊಂಡ ನಾಯಕರು. ಅವರು ಎಲ್ಲ ಜನಪ್ರತಿನಿಧಿಗಳಿಗೂ ಮಾದರಿ. ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳ ನಡುವೆ ಬಾಂಧವ್ಯ ವೃದ್ಧಿಸುವುದನ್ನು ನಾನು ನಿರೀಕ್ಷಿಸುತ್ತೇನೆ" ಎಂದು ತುಳಸಿ ಗಬ್ಬಾರ್ಡ್ ಹೇಳಿಕೊಂಡಿದ್ದಾರೆ. [ಒಬಾಮಾಗೆ ಮೋದಿ ಆಹ್ವಾನ]

ಅಮೆರಿಕದ ವಿದೇಶಾಂಗ ವ್ಯವಹಾರಗಳ ಹೌಸ್ ಕಮಿಟಿ ಸದಸ್ಯೆಯಾಗಿರುವ ತುಳಸಿ, ಜಗತ್ತಿನ ಎಲ್ಲ ದೇಶಗಳೊಂದಿಗೆ ಅಮೆರಿಕದ ಬಾಂಧವ್ಯ ವೃದ್ಧಿಸಬೇಕೆಂದು ಬಯಸುತ್ತಿದ್ದಾರೆ. ಅಲ್ಲದೆ, ಭಾರತ ಮತ್ತು ಭಾರತೀಯ ಅಮೆರಿಕನ್ನರ ಜೊತೆ ಸಂಬಂಧ ವೃದ್ಧಿಗಾಗಿ 1994ರಲ್ಲಿ ಆರಂಭಿಸಿರುವ ಸ್ಥಳೀಯ ಸಂಸದೀಯ ಸಮಿತಿ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಹಿಂದೂ ಧರ್ಮವನ್ನು ಪಾಲಿಸುತ್ತಿರುವ ತುಳಸಿ ಗಬ್ಬಾರ್ಡ್ ಅವರ ಭೇಟಿಯಿಂದ ಜಗತ್ತಿಗೆ ಭಾರತದ ಧಾರ್ಮಿಕ ಕೊಡುಗೆಯನ್ನು ತಿಳಿಸಲು ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಉದ್ದೇಶಿತ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ವ್ಯವಹಾರಗಳ ಅಮೆರಿಕ ಉಸ್ತುವಾರಿಯಾಗಿರುವ ಕ್ಯಾಥಲೀನ್ ಸ್ಟಿಫನ್ಸ್, "ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ಸಂಬಂಧ ಬಲಪಡಿಸಲು ತುಳಸಿ ಗಬ್ಬಾರ್ಡ್ ಅವರ ಭೇಟಿಯು ಸಹಕಾರಿಯಾಗಲಿದೆ" ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಮೋದಿಗೆ ಅಮೆರಿಕದಲ್ಲಿ ಅದ್ದೂರಿ ಸ್ವಾಗತ]

ಈಗಾಗಲೇ ನರೇಂದ್ರ ಮೋದಿ ಅವರು ಅಮೆರಿಕದ ಆಹ್ವಾನದ ಮೇರೆಗೆ ತೆರಳಿದ್ದರು. ಈಗ ತುಳಸಿ ಗಬ್ಬಾರ್ಡ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 2015ರ ಜನವರಿ ತಿಂಗಳ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಒಪ್ಪಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಭಾರತ-ಅಮೆರಿಕ ಬಾಂಧವ್ಯ ವೃದ್ಧಿಗೊಳ್ಳುತ್ತಿರುವುದರ ಸಂಕೇತ ಎನ್ನಬಹುದು.

ತುಳಸಿ ಜೊತೆ ಬೆಂಗಳೂರಿನಲ್ಲಿ ಸಂವಾದ : ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾಗಿರುವ ಮೊಟ್ಟ ಮೊದಲ ಹಿಂದೂ ಸದಸ್ಯೆಯಾದ ತುಳಸಿ ಗಬ್ಬಾರ್ಡ್ ಜೊತೆಗೆ ಬೆಂಗಳೂರಿನ ಮಂಥನ ಮತ್ತು ಮಿಥಿಕ್ ಸೊಸೈಟಿಯು ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. [ಅಮೆರಿಕದಲ್ಲಿ ಮೋದಿಯ ಆ ದಿನಗಳು]

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ದಿ ಮಿಥಿಕ್ ಸೊಸೈಟಿ ಕಚೇರಿಯಲ್ಲಿ ಡಿ. 21ರಂದು ಮಧ್ಯಾಹ್ನ 4.30ಕ್ಕೆ ಸಂವಾದ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9731264009, 9448003909 ಅಥವಾ 9591994643 ಸಂಪರ್ಕಿಸಬಹುದು ಎಂದು ಮಂಥನ ಮತ್ತು ಮಿಥಿಕ್ ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
United States Congresswoman Tulsi Gabbard will travel to India from December 15 to January 3, 2015, following an official invite from the Prime Minister Narendra Modi. The official trip will take her to New Delhi, Goa, Bengaluru, Mumbai, and Ahmadabad to promote economic and cultural ties between the two nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more