• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಪ್ರಥಮ ಚಾಲಕ ರಹಿತ ರೈಲು ಸಂಚಾರಕ್ಕೆ ಹಸಿರು ನಿಶಾನೆ

|

ನವದೆಹಲಿ, ಡಿ. 28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಭಾರತದ ಪ್ರಪ್ರಥಮ ಚಾಲಕ ರಹಿತ ರೈಲು ಸಂಚಾರಕ್ಕೆ ಸೋಮವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಸಿರು ನಿಶಾನೆ ತೋರಿದ್ದಾರೆ.

ಈ ಸಂಪೂರ್ಣ ಕಾರ್ಯಾಚರಣೆಯ ರಾಷ್ಟ್ರೀಯ ಸಮಾನ ಚಲನಶೀಲತೆ ಕಾರ್ಡ್ ಸೇವೆಯೊಂದಿಗೆ ದೆಹಲಿ ಮೆಟ್ರೋದ ನೇರಳೆ ಮಾರ್ಗದಲ್ಲಿ (ಜನಕ್'ಪುರಿ ಪಶ್ಚಿಮ - ಸಸ್ಯೋದ್ಯಾನ -ಬಟಾನಿಕಲ್ ಗಾರ್ಡನ್) ನಡುವೆ ಇರಲಿದೆ.

ಈ ಆವಿಷ್ಕಾರಗಳು ಪ್ರಯಾಣ ಸೌಕರ್ಯ ಮತ್ತು ವರ್ಧಿತ ಚಲನಶೀಲತೆಯ ಹೊಸ ಯುಗದ ಹರಿಕಾರ ಆಗಲಿವೆ. ಚಾಲಕ ರಹಿತ ರೈಲುಗಳು ಸಂಪೂರ್ಣ ಸ್ವಯಂಚಾಲಿತವಾಗಿರಲಿದ್ದು, ಇದು ಮಾನವರಿಂದಾಗುವ ಲೋಪದ ಸಾಧ್ಯತೆಯನ್ನು ನಿವಾರಿಸುತ್ತವೆ. ನೇರಳೆ ಮಾರ್ಗದಲ್ಲಿ ಚಾಲಕರಹಿತ ಸೇವೆಗಳು ಪ್ರಾರಂಭವಾದ ನಂತರ, ದೆಹಲಿ ಮೆಟ್ರೋದ ನೇರಳೆ ಮಾರ್ಗ(ಮಜಿಲಿಸ್ ಪಾರ್ಕ್ -ಶಿವ ವಿಹಾರ್) 2021ರ ಮಧ್ಯಭಾಗದ ಹೊತ್ತಿಗೆ ಚಾಲಕರಹಿತ ಕಾರ್ಯಾಚರಣೆಯನ್ನು ನಡೆಸುವ ನಿರೀಕ್ಷೆಯಿದೆ.

ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯಾಚರಣೆಗೆ ಬರುವ ರಾಷ್ಟ್ರೀಯ ಸಮಾನ ಚಲನಶೀಲತೆ ಕಾರ್ಡ್ ಸೇವೆಯು ದೇಶದ ಯಾವುದೇ ಭಾಗದಲ್ಲಿ ನೀಡಲಾಗಿರುವ ರೂಪೇ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಆ ಕಾರ್ಡ್ ಬಳಸಿ ಸಂಚರಿಸಲು ಅವಕಾಶ ಕಲ್ಪಿಸುತ್ತದೆ. ಈ ಸೇವೆ ಇಡೀ ದೆಹಲಿ ಮೆಟ್ರೋ ಜಾಲದಲ್ಲಿ 2022ರ ಹೊತ್ತಿಗೆ ಲಭ್ಯವಾಗಲಿದೆ.

25 ನಗರಕ್ಕೆ ಮೇಟ್ರೋ ರೈಲು

2014ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ಮೊದಲ ಮೆಟ್ರೋ ರೈಲು ಸೇವೆಯ ಮೂಲಕ ನಮ್ಮ ಸರ್ಕಾರ ನನಸಾಗಿಸಿತು. ಅಂದು 5 ನಗರಗಳಲ್ಲಿ ಆರಂಭವಾದ ಮೆಟ್ರೋ ಸೇವೆ ಇಂದು 18 ನಗರಗಳಿಗೆ ವಿಸ್ತರಿಸಿದೆ. 2025ರ ವೇಳೆಗೆ 25 ನಗರಗಳಿಗೆ ವಿಸ್ತರಿಸಲಿದೆ ಎಂದು ಮೋದಿ ಹೇಳಿದರು.

English summary
Prime Minister Narendra Modi on Monday flagged off India's first-ever driverless train operations on Delhi Metro's Magenta Line, along with the fully operational National Common Mobility Card service on the Airport Express Line
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X