ಸಂಸತ್ತಿಗೆ ಗೈರು: ಸಚಿವರಿಗೆ ಕಾದಿದೆ ಆಘಾತ!
ನವದೆಹಲಿ, ಜುಲೈ 16: ಮಂತ್ರಿ ಸ್ಥಾನ ಪಡೆದು ವಿನಾಕಾರಣ ಸಂಸತ್ತಿಗೆ ಗೈರಾಗುವ ಸಂಸದರಿಗೆ ಆಘಾತ ಕಾದಿದೆ. ಸಂಸತ್ತಿಗೆ ಬಾರದೆ ಇರುವ ಸಚಿವರ ಪಟ್ಟಿಯನ್ನು ತಯಾರಿಸಿ, ಪ್ರತಿದಿನ ಸಂಜೆ ಅಂದು ಸಂಸತ್ತಿನಲ್ಲಿ ಯಾರೆಲ್ಲ ಗೈರಾಗಿದ್ದರು ಎಂಬ ವರದಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೂಚನೆ ನೀಡಿದ್ದಾರೆ.
"ಪ್ರತಿಯೊಬ್ಬ ಸಚಿವರೂ ರಾಜಕೀಯವನ್ನು ಮೀರಿ ಕೆಲಸ ಮಾಡಬೇಕು" ಎಂದು ಕರೆ ನೀಡಿರುವ ಮೋದಿ, ಎಲ್ಲ ಸಂಸದರೂ ತಮ್ಮ ಕ್ಷೇತ್ರದಲ್ಲಿ ವಿಭಿನ್ನವಾದ ಮತ್ತು ಗುರುತಿಸುಂಥ ಕೆಲಸ ಮಾಡಬೇಕು ಎಂದರು.
ಇಂದು ನೀರಿನ ಸಮಸ್ಯೆ ಎಂಬುದು ಅಪಾಯಕಾರಿ ಸಮಸ್ಯೆಯಾಗಿ ರೂಪುಗೊಳ್ಳುತ್ತಿರುವುದರಿಂದ ಅದಕ್ಕೆ ಪರಿಹಾರವೇನು ಎಂಬುದನ್ನು ಎಲ್ಲ ಸಚಿವರು ಕೂತು ಚರ್ಚಿಸಿ ನಿರ್ಧರಿಸಬೇಕು ಎಂದು ಮೋದಿ ಹೇಳಿದರು.

"ನಿಮ್ಮ ಕೆಲಸವನ್ನು ವ್ರತ ಎಂಬಂತೆ ಸ್ವೀಕರಿಸಿ ಮಾಡಿ, ಕ್ಷಯ ಮತ್ತು ಕುಷ್ಠ ರೋಗದಂಥ ಅಪಾಯಕಾರಿ ರೋಗಗಳನ್ನು ನಿಯಂತ್ರಿಸಲು ಹೋರಾಡಿ ಎಂದು ಅವರು ಹೇಳಿದರು.












Click it and Unblock the Notifications