ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ನೀಡಲು ಯಾವ್ಯಾವ ಜಾಗಗಳನ್ನು ಆರಿಸಿಕೊಳ್ಳಲಾಗುತ್ತಿದೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಕೊರೊನಾ ಸೋಂಕಿಗೆ ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಸಾಮೂಹಿಕವಾಗಿ ಲಸಿಕೆಗಳನ್ನು ನೀಡಲು ಸಿದ್ಧತೆ ನಡೆಯುತ್ತಿದೆ. ಸಾಕಷ್ಟು ಮಂದಿಗೆ ಲಸಿಕೆ ನೀಡಲು ಸೂಕ್ತವಾದ ಜಾಗಗಳ ವಿಶ್ಲೇಷಣೆಯನ್ನೂ ನಡೆಸಲಾಗುತ್ತಿದೆ.

ಭಾರತದ ಆರೋಗ್ಯ ಇಲಾಖೆಯು ಕೊರೊನಾ ಲಸಿಕೆಯನ್ನು ನೀಡಬಲ್ಲ ಸೂಕ್ತ ಸ್ಥಳಗಳಿಗೆ ಹಲವು ಆಯ್ಕೆಗಳ ಪರಿಶೀಲನೆ ನಡೆಸುತ್ತಿದೆ. ದೇಶದೆಲ್ಲೆಡೆ 2021ರ ಮಧ್ಯದಲ್ಲಿ ಸುಮಾರು 300 ಮಿಲಿಯನ್ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದ್ದು, ಆ ಅವಶ್ಯಕತೆಗೆ ತಕ್ಕಂಥ ಜಾಗಗಳ ಆಯ್ಕೆಯ ಕುರಿತು ಚರ್ಚೆ ನಡೆಯುತ್ತಿದೆ. ಮತದಾನ ಕೇಂದ್ರಗಳಿಂದ ಹಿಡಿದು ಮದುವೆ ಮಂಟಪಗಳಲ್ಲೂ ಲಸಿಕೆ ನೀಡುವ ಯೋಜನೆಯಿದೆ. ಮುಂದೆ ಓದಿ...

 ನೂರು ಮಂದಿಗೆ ಲಸಿಕೆ ನೀಡುವಂಥ ಸೂಕ್ತ ಜಾಗ

ನೂರು ಮಂದಿಗೆ ಲಸಿಕೆ ನೀಡುವಂಥ ಸೂಕ್ತ ಜಾಗ

ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳನ್ನೂ ಲಸಿಕೆ ನೀಡುವ ಪ್ರಕ್ರಿಯೆಗೆ ಒಳಪಡಿಸುವ ಚಿಂತನೆ ಇದೆ. ಆದರೆ ಲಸಿಕೆಯ ವಿತರಣೆ ಹಾಗೂ ಶೇಖರಣೆಯ ಪ್ರಕ್ರಿಯೆ ಮೇಲೆ ಸರ್ಕಾರವು ಬಿಗಿ ನಿಯಂತ್ರಣವಿರಿಸಲಾಗುವುದು ಎಂದು ತಿಳಿದುಬಂದಿದೆ. ಪ್ರತಿ ಜಾಗದಲ್ಲಿ ಏಕಕಾಲಕ್ಕೆ ಸುಮಾರು 100 ಮಂದಿಗೆ ಲಸಿಕೆ ನೀಡಲು ಸೂಕ್ತವಾದ ಜಾಗದ ಅವಶ್ಯಕತೆಯಿದೆ.

ತಮಿಳುನಾಡಿಗೆ ಸಿಗಲಿದೆಯೇ ಅಧಿಕ ಕೊರೊನಾ ಲಸಿಕೆಗಳು?ತಮಿಳುನಾಡಿಗೆ ಸಿಗಲಿದೆಯೇ ಅಧಿಕ ಕೊರೊನಾ ಲಸಿಕೆಗಳು?

 ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೂ ಲಸಿಕೆ

ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೂ ಲಸಿಕೆ

ಲಸಿಕೆ ನೀಡಲು ಆರಿಸಿಕೊಂಡ ಜಾಗವು ವಿಶಾಲವಾಗಿದ್ದು, ಲಸಿಕೆ ಪಡೆಯುವವರಿಗೆ ಅನುಕೂಲವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಜನರಿಗೆ ಮನೆಯ ಅಥವಾ ಕಚೇರಿಯ ಸಮೀಪ ಲಸಿಕಾ ಕೇಂದ್ರಗಳು ಇರುವಂತೆ ರೂಪಿಸಲಾಗುತ್ತಿದೆ. ಎಲ್ಲಾ ಕಡೆಗಳಲ್ಲೂ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

 ಎರಡು ರೀತಿಯ ಜಾಗಗಳ ಆಯ್ಕೆ

ಎರಡು ರೀತಿಯ ಜಾಗಗಳ ಆಯ್ಕೆ

ಲಸಿಕೆಗೆ ಮುಖ್ಯವಾಗಿ ಎರಡು ರೀತಿಯ ಜಾಗಗಳನ್ನು ಆರಿಸಿಕೊಳ್ಳಲಾಗುತ್ತಿದೆ. ಒಂದು ಸ್ಥಿರ (ಆಸ್ಪತ್ರೆ, ನರ್ಸಿಂಗ್ ಹೋಂಗಳು) ಹಾಗೂ ವಿಶಾಲವಾದ ಜಾಗಗಳು. ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ಹಾಗೂ ಲಸಿಕೆ ವಿತರಣೆಗೆ ಅನುಕೂಲತೆಯ ಆಧಾರದ ಮೇಲೆ ಈ ಜಾಗಗಳನ್ನು ಗುರುತಿಸಲಾಗುತ್ತಿದೆ. ಆ ಜಾಗದಲ್ಲಿ ಕನಿಷ್ಠ ಮೂರು ವಿಭಾಗಗಳನ್ನು ರೂಪಿಸಲಾಗಿದ್ದು, ಮೊದಲು ಲಸಿಕೆ ಪಡೆಯುವವರ ಮಾಹಿತಿ ಸಂಗ್ರಹಕ್ಕೆ, ನಂತರ ಲಸಿಕೆ ಪಡೆಯಲು ಹಾಗೂ ಲಸಿಕೆ ಪಡೆದ ನಂತರ ನಿಗಾ ಕೊಠಡಿ ಎಂದು ನಿಗದಿ ಪಡಿಸಲಾಗುತ್ತಿದೆ.

ಭಾರತದಲ್ಲಿ ಸಿಗುವುದಿಲ್ಲ ಫೈಜರ್ ಲಸಿಕೆ: ಕಾರಣವೇನು?ಭಾರತದಲ್ಲಿ ಸಿಗುವುದಿಲ್ಲ ಫೈಜರ್ ಲಸಿಕೆ: ಕಾರಣವೇನು?

 ಮತದಾನ ಕೇಂದ್ರ, ಮದುವೆ ಮಂಟಪಗಳ ಬಳಕೆ

ಮತದಾನ ಕೇಂದ್ರ, ಮದುವೆ ಮಂಟಪಗಳ ಬಳಕೆ

ಸಾಮೂಹಿಕ ಲಸಿಕೆ ನೀಡಲೆಂದು ಮತದಾನದ ಕೇಂದ್ರಗಳು ಉತ್ತಮ ಆಯ್ಕೆ ಎನ್ನಲಾಗಿದೆ. ಇದರ ಹೊರತಾಗಿ, ಶಾಲಾ ಕಾಲೇಜುಗಳು, ಸಮುದಾಯ ಭವನಗಳಲ್ಲಿ ಲಸಿಕೆಗಳನ್ನು ನೀಡುವ ಚಿಂತನೆ ನಡೆಸಲಾಗುತ್ತಿದೆ. ಮುನಿಸಿಪಾಲ್ ಕಚೇರಿ, ಪಂಚಾಯತ್ ಭವನ, ಮದುವೆ ಮಂಟಪಗಳು, ಕಂಟೋನ್ಮೆಂಟ್ ಆಸ್ಪತ್ರೆ, ರೈಲ್ವೆ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಯೋಜನೆಗಳಿವೆ. ಭಾರತದಲ್ಲಿ ಚುನಾವಣೆಗಳಿಗೆಂದು ಸುಮಾರು 1.03 ಮಿಲಿಯನ್ ಮತದಾನ ಕೇಂದ್ರಗಳಿದ್ದು, ಲಸಿಕೆ ನೀಡಲು ಸಹಾಯಕ್ಕೆ ಬರಲಿವೆ.

English summary
India’s health administrators are evaluating several options for sites where the Covid vaccine can be administered
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X