ಚಿತ್ರಗಳಲ್ಲಿ : ಸಿಎಂ ಆದ ಅರವಿಂದ್ ಕೇಜ್ರಿವಾಲ್

ನವದೆಹಲಿ, ಫೆ. 14 : ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲೆಫ್ಟಿನಂಟ್‌ ಗವರ್ನರ್‌ ನಜೀಬ್ ಜಂಗ್ ಕೇಜ್ರಿವಾಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಸಾಧಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎರಡನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. 12 ಗಂಟೆಗೆ ನಡೆದ ಸಮಾರಂಭದಲ್ಲಿ ದೇವರ ಹೆಸರಿನಲ್ಲಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು.

2014ರ ಫೆ.14ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೇಜ್ರಿವಾಲ್ 2015ರ ಫೆ.14ರಂದು ಪುನಃ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ನವದೆಹಲಿಯ ಐತಿಹಾಸಿಕ ರಾಮ್‌ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು.[ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭ Live]

ಅರವಿಂದ್ ಕೇಜ್ರಿವಾಲ್ ಅವರ ಜೊತೆಗೆ ಮನೀಷ್ ಸಿಸೋಡಿಯಾ, ಜೀತೆಂದರ್ ಸಿಂಗ್, ಗೋಪಾಲ್ ರಾಯ್, ಸತ್ಯೇಂದ್ರ ಜೈನ್, ಸಂದೀಪ್ ಕುಮಾರ್, ಹಸೀಂ ಅಹಮದ್ ಖಾನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸಮಾರಂಭದ ಚಿತ್ರಗಳು ಇಲ್ಲಿವೆ. [ಪಿಟಿಐ ಚಿತ್ರಗಳು]

ದೆಹಲಿಯಲ್ಲಿ ಆಮ್ ಆದ್ಮಿ ದರ್ಬಾರ್ ಆರಂಭ

ದೆಹಲಿಯಲ್ಲಿ ಆಮ್ ಆದ್ಮಿ ದರ್ಬಾರ್ ಆರಂಭ

ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲೆಫ್ಟಿನಂಟ್‌ ಗವರ್ನರ್‌ ನಜೀಬ್ ಜಂಗ್ ಕೇಜ್ರಿವಾಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ದರ್ಬಾರ್ ಆರಂಭವಾಗಿದೆ.

ರಾಮ್‌ಲೀಲಾ ಮೈದಾನದಲ್ಲಿ ಕಾರ್ಯಕ್ರಮ

ರಾಮ್‌ಲೀಲಾ ಮೈದಾನದಲ್ಲಿ ಕಾರ್ಯಕ್ರಮ

ನವದೆಹಲಿಯ ಐತಿಹಾಸಿಕ ರಾಮ್‌ಲೀಲಾ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಸಮಾರಂಭ ನಡೆಯಿತು. ದೇವರ ಹೆಸರಿನಲ್ಲಿ ಕೇಜ್ರಿವಾಲ್ ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಮ್ಮನಿಂದ ಮಗನಿಗೆ ಆರತಿ

ಅಮ್ಮನಿಂದ ಮಗನಿಗೆ ಆರತಿ

ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಹೊರಟ ಅರವಿಂದ್ ಕೇಜ್ರಿವಾಲ್ ಅವರಿಗೆ ತಾಯಿ ಗೀತಾ ದೇವಿ ಆರತಿ ಬೆಳಗಿ ಕಳುಹಿಸಿಕೊಟ್ಟರು.

ಅಮ್ಮನ ಆಶೀರ್ವಾದ ಪಡೆದ ಕೇಜ್ರಿವಾಲ್

ಅಮ್ಮನ ಆಶೀರ್ವಾದ ಪಡೆದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಹೊರಟ ಅರವಿಂದ್ ಕೇಜ್ರಿವಾಲ್ ತಾಯಿ ಗೀತಾ ದೇವಿ ಅವರ ಆಶೀರ್ವಾದ ಪಡೆದರು. ಸಿಹಿ ತಿನ್ನಿಸಿ ಮಗನಿಗೆ ಒಳ್ಳೆಯದಾಗಲಿ ಎಂದು ಗೀತಾ ದೇವಿ ಅವರು ಆಶೀರ್ವದಿಸಿದರು.

ಪಾಂಚ್‌ ಸಾಲ್ ಕೇಜ್ರಿವಾಲ್ ಘೋಷಣೆ

ಪಾಂಚ್‌ ಸಾಲ್ ಕೇಜ್ರಿವಾಲ್ ಘೋಷಣೆ

ರಾಮ್‌ಲೀಲಾ ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಾಂಚ್‌ ಸಾಲ್ ಕೇಜ್ರಿವಾಲ್ ಎಂಬ ಘೋಷಣೆ ಕೂಗಿದರು ಮತ್ತು ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದರು.

ಪಕ್ಷದ ನಾಯಕರೊಂದಿಗೆ ಸಮಾಲೋಚನೆ

ಪಕ್ಷದ ನಾಯಕರೊಂದಿಗೆ ಸಮಾಲೋಚನೆ

ಪ್ರಮಾಣ ವಚನ ಸಮಾರಂಕ್ಕೂ ಮೊದಲು ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸದಲ್ಲಿ ಆಪ್ ನಾಯಕರ ಸಭೆ ನಡೆಸಿದರು.

ಸಚಿವ ಸಂಪುಟ ಸೇರಿದ ಆರು ಜನರು

ಸಚಿವ ಸಂಪುಟ ಸೇರಿದ ಆರು ಜನರು

ಅರವಿಂದ್ ಕೇಜ್ರಿವಾಲ್ ಅವರ ಜೊತೆಗೆ ಮನೀಷ್ ಸಿಸೋಡಿಯಾ, ಜೀತೆಂದರ್ ಸಿಂಗ್, ಗೋಪಾಲ್ ರಾಯ್, ಸತ್ಯೇಂದ್ರ ಜೈನ್, ಸಂದೀಪ್ ಕುಮಾರ್, ಹಸೀಂ ಅಹಮದ್ ಖಾನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ದೆಹಲಿ ಜನರಿಗೆ ಧನ್ಯವಾದ ಅರ್ಪಿಸಿ ಸಿಎಂ

ದೆಹಲಿ ಜನರಿಗೆ ಧನ್ಯವಾದ ಅರ್ಪಿಸಿ ಸಿಎಂ

ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅರವಿಂದ್ ಕೇಜ್ರಿವಾಲ್ ಅಭಿಮಾನಿಗಳತ್ತ ಕೈಬೀಸಿದರು. ಪೂರ್ಣ ಬಹುಮತ ನೀಡಿದ ದೆಹಲಿ ಜನರಿಗೆ ಧನ್ಯವಾದ ಅರ್ಪಿಸಿದರು.

ದೆಹಲಿ ವ್ಯಾಪಾರಿಗಳೇ ತೆರಿಗೆ ಕಟ್ಟಿ

ದೆಹಲಿ ವ್ಯಾಪಾರಿಗಳೇ ತೆರಿಗೆ ಕಟ್ಟಿ

ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ದೆಹಲಿಯ ವ್ಯಾಪಾರಿಗಳು ತೆರಿಗೆ ಕಟ್ಟಿ 1 ರೂ. ತೆರಿಗೆಯೂ ಪೋಲಾಗದಂತೆ ನಾನು ಎಚ್ಚರ ವಹಿಸುತ್ತೇನೆ, ತೆರಿಗೆ ಹಣದಿಂದ ದೆಹಲಿಯನ್ನು ಅಭಿವೃದ್ಧಿ ಪಡಿಸುವೆ ಎಂದು ಭರವಸೆ ನೀಡಿದರು.

ಜನ ಲೋಕಪಾಲ್ ಬಗ್ಗೆ ಮಾತು

ಜನ ಲೋಕಪಾಲ್ ಬಗ್ಗೆ ಮಾತು

ಭ್ರಷ್ಟಚಾರ ನಿರ್ಮೂಲನೆಯಾಗಬೇಕು, ಲೋಕಪಾಲ್ ಮಸೂದೆ ಜಾರಿಗೆ ಬರಬೇಕು ಎಂದು ಹೇಳಿದ ಕೇಜ್ರಿವಾಲ್ ಅವರು ಮುಂದಿನ ಐದು ವರ್ಷ ದೆಹಲಿ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಜನರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ ಸಿಎಂ

ಜನರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ ಸಿಎಂ

ಈ ಬಾರಿ ಸಂಪೂರ್ಣ ಬಹುಮತದ ಮೂಲಕ ಸರ್ಕಾರ ರಚನೆ ಮಾಡಿದ್ದೇವೆ. ಈ ಪ್ರಮಾಣದ ಜನಬೆಂಬಲವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಎಲ್ಲಾ ವರ್ಗದವರು ಆಪ್ ಪಕ್ಷಕ್ಕೆ ಬೆಂಬಲ ನೀಡಿದ್ದೀರಿ ಎಂದು ಹೇಳಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ ನೀಡಿದ ಜನರಿಗೆ ಧನ್ಯವಾದ ಹೇಳಿದರು.

ಭಾಗವಹಿಸಿದ್ದ ನಾಯಕರು

ಭಾಗವಹಿಸಿದ್ದ ನಾಯಕರು

ಅರವಿಂದ್ ಕೇಜ್ರಿವಾಲ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಆಪ್ ನಾಯಕಿ ಗುಲ್ ಪನಾಗ್ ಮತ್ತು ಪಕ್ಷದ ನಾಯಕ ರಾಹುಲ್ ಮೆಹರಾ ಪಾಲ್ಗೊಂಡಿದ್ದರು.

ಇದು ನಮ್ಮ ತಂಡ

ಇದು ನಮ್ಮ ತಂಡ

ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಕಂಡಿದ್ದು ಹೀಗೆ.

ಆಮ್ ಆದ್ಮಿ ಅಭಿಮಾನಿಗಳ ಸಂಗಮ

ಆಮ್ ಆದ್ಮಿ ಅಭಿಮಾನಿಗಳ ಸಂಗಮ

ಪ್ರಮಾಣ ವಚನ ಸಮಾರಂಭ ನಡೆದ ನವದೆಹಲಿಯ ಐತಿಹಾಸಿಕ ರಾಮ್‌ಲೀಲಾ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+