ಮತ ಚಲಾಯಿಸಿದರೆ ಪೆಟ್ರೋಲ್ ದರದಲ್ಲಿ ಡಿಸ್ಕೌಂಟ್

ನವದೆಹಲಿ, ಏ 9: ನೀವು ಯಾವ ಪಕ್ಷಕ್ಕಾದರೂ ಮತಹಾಕಿ, ಮತಚಲಾಯಿಸಿ ಬೆರಳಿನಲ್ಲಿನ ಶಾಯಿ ತೋರಿಸಿದರೆ ಪೆಟ್ರೋಲ್ ಬಂಕ್ ನಲ್ಲಿ ರಿಯಾಯತಿ ದರದಲ್ಲಿ ಪೆಟ್ರೋಲ್ ಲಭಿಸಲಿದೆ.

ಅಂದ ಹಾಗೆ ಈ ಸ್ಕೀಂ ದೇಶದೆಲ್ಲಡೆ ಮತ್ತು ಎಲ್ಲಾ ದಿನ ಲಭ್ಯವಿಲ್ಲ. ಇದು ರಾಷ್ಟ್ರದ ರಾಜಧಾನಿ ದೆಹಲಿ ಮತ್ತು NCR (National Capital Region) ನಗರಗಳಾದ ನೋಯ್ಡಾ, ಗುರಗಾಂ, ಫರಿದಾಬಾದ್, ರೋಹ್ಟಕ್ ನಗರಗಳಲ್ಲಿ ಗುರುವಾರ (ಏ 10) ಸಂಜೆ 5ಗಂಟೆಯವರೆಗೆ ಮಾತ್ರ.

16ನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯ ಮೂರನೇ ಹಂತದ ಮತದಾನದ ದಿನವಾದ ಗುರುವಾರ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ.

Petrol pums to officer fifty paise discount to voters in New Delhi

ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು 'ಅಖಿಲ ಭಾರತ ಪೆಟ್ರೋಲಿಯಂ ವಾಣಿಜ್ಯದಾರರ ಒಕ್ಕೂಟ' 67 ಪೆಟ್ರೋಲ್ ಬಂಕುಗಳಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದರೆ ಲೀಟರೊಂದಕ್ಕೆ ಐವತ್ತು ಪೈಸೆ ರಿಯಾಯತಿ ದರದಲ್ಲಿ ಗುರುವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಪೆಟ್ರೋಲ್ ನೀಡಲಿದೆ.

ಈಗಾಗಲೇ ಈ ಸಂಬಂಧ ಜಾಹೀರಾತುಗಳನ್ನು ನೀಡಲಾಗಿದ್ದು, ಆಟೋಮೊಬೈಲ್ ಮಾಲೀಕರು ಮತ್ತು ಚಾಲಕರಿಗೆ ಜಾಗ್ರುತಿ ಮೂಡಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಜಯ್ ಬನ್ಸಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮತಚಲಾಯಿಸಿ ಬಂದು ಕಾರು ಮತ್ತು ದ್ವಿಚಕ್ರ ವಾಹನ ಚಾಲಕರು ಬೆರಳಿನ ಶಾಹಿ ತೋರಿಸಿದರೆ ಆಯ್ದ 67 ಪೆಟ್ರೋಲ್ ಬಂಕುಗಳಲ್ಲಿ ರಿಯಾಯತಿ ದರದಲ್ಲಿ ಪೆಟ್ರೋಲ್ ಲಭಿಸಲಿದೆ. ಡೀಸೆಲ್ ದರದಲ್ಲಿ ಯಾವುದೇ ರಿಯಾಯತಿ ಇಲ್ಲ ಎಂದು ಒಕ್ಕೂಟ ಸ್ಪಷ್ಟ ಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+