ಹಬ್ಬಕ್ಕೆ ಮುಂಚೆ ಈ ಬಾರಿ ಪೆಟ್ರೋಲ್ ಬೆಲೆ ಕಡಿಮೆ?

Petrol price may be cut down ahead of festive season in October,
ನವದೆಹಲಿ, ಸೆ.27: ಇನ್ನೇನು ನಾಡ ಹಬ್ಬ ಆರಂಭವಾಗಲಿದೆ. ಆಯುಧ ಪೂಜೆ ಸಂದರ್ಭದಲ್ಲಿ ಜನ ಸಮಾಧಾನಚಿತ್ತರಾಗಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸಲೆಂದು ಈ ಬಾರಿ ಆ ಹಬ್ಬಕ್ಕೆ ಮುಂಚೆ ಪೆಟ್ರೋಲ್ ಬೆಲೆ ಕಡಿಮೆ ಮಾಡುವ ಲಕ್ಷಣಗಳಿವೆ.

ಹೌದು ಅಂತಾರಾಷ್ಟ್ರೀಯ ಆರ್ಥಿಕ ವಿದ್ಯಮಾನಗಳನ್ನು ಗಮನಿಸಿದರೆ/ ಗಣನೆಗೆ ತೆಗೆದುಕೊಂಡರೆ ಈ ಬಾರಿ ಪೆಟ್ರೋಲ್ ಬೆಲೆ ನಿರ್ಧಾರಣೆ ಮಾಡುವಾಗ ಕನಿಷ್ಠ 3 ರೂಪಾಯಿಯಾದರೂ ಬೆಲೆ ತಗ್ಗಿಸುವ ಆಲೋಚನೆ ನಡೆದಿದೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಹ ಇದನ್ನು ಹೇಳಿದ್ದಾರೆ.

6 ತಿಂಗಳಲ್ಲಿ ಶೇ.11ರಷ್ಟು ಪೆಟ್ರೋಲ್ ಬೆಲೆ ಏರಿಕೆ: ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ತುಸು ಕಡಿಮೆಯಾಗಿರುವುದು ಮತ್ತು ರೂಪಾಯಿ ಮೌಲ್ಯ ತುಸು ಚೇತರಿಕೆ ಕಂಡಿರುವುದು ಪೆಟ್ರೋಲ್ ಬೆಲೆಯನ್ನು ನಿರ್ಧರಿಸಲಿದೆ.

ಒಂದು ವೇಳೆ ಈ ಬಾರಿ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಿದರೆ ಕಳೆದ 6 ತಿಂಗಳಲ್ಲಿ ಮೊದಲ ಬಾರಿಗೆ ಬೆಲೆ ಇಳಿಕೆಯಾದಂತಾಗುತ್ತದೆ. ಮೇ 1ರಂದು ಪೆಟ್ರೋಲ್ ಬೆಲೆ ಮೂರು ರೂಪಾಯಿ ತಗ್ಗಿತ್ತು. ಈ ಮಧ್ಯೆ ಶೇ. 11ರಷ್ಟು ಪೆಟ್ರೋಲ್ ಬೆಲೆ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+