ಐನೂರಕ್ಕೆ ಚಿಲ್ಲರೆಯಿಲ್ಲ, ತಿರಸ್ಕರಿಸಿದರೆ ಬಂಕ್ ಲೈಸನ್ಸ್ ಇಲ್ಲ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 9: ಐನೂರು ಸಾವಿರ ರು ಗಳ ಹರಿದಾಟ ಎಲ್ಲೆಡೆ ಶುರುವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ನೋಟುಗಳನ್ನು ತಿರಸ್ಕರಿಸಿದರೆ ಬಂಕ್ ಗಳ ಪರವಾನಗಿ ರದ್ದು ಮಾಡಲಾಗುತ್ತದೆ ಎಂಬ ಸರ್ಕಾರದ ಆದೇಶ ಬಂಕ್ ಗಳ ಪರದಾಟಕ್ಕೆ ಕಾರಣವಾಗಿದೆ.

ಸರ್ಕಾರದ ಆದೇಶದಂತೆ ನವೆಂಬರ್ 11ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಿತ 500 ಮತ್ತು 1000 ರೂ. ನೋಟುಗಳನ್ನು ತಿರಸ್ಕರಿಸಿದರೆ ಅಂತಹ ಪೆಟ್ರೋಲ್ ಬಂಕ್‍ಗಳ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಖಡಕ್ಕಾಗಿ ಎಚ್ಚರಿಸಿದ್ದಾರೆ.[ಬೆಂಗಳೂರಿನಲ್ಲಿ ಐನೂರು ಸಾವಿರದ ಪರದಾಟದ ದನಿಗಳು]

petrol bunks can refuse RS 500-1000 notes license will be ban

ಕೆಲವು ಪೆಟ್ರೋಲ್ ಬಂಕ್ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದ ಪ್ಲಾಜಾ, ಟೋಲ್ ಗಳಲ್ಲಿ ಈ ನೋಟುಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಒಂದು ವೇಳೆ ನಿಜವಾದರೆ ಅಂತಹ ಬಂಕ್ ಗಳ ಲೈಸನ್ಸ್ ಅನ್ನು ಮುಲಾಜಿಲ್ಲದೆ ರದ್ದು ಮಾಡಲಾಗುತ್ತದೆ ಎಂದು ಪ್ರಧಾನ್ ತಿಳಿಸಿದ್ದಾರೆ.[ನ.11 ಮಧ್ಯರಾತ್ರಿಯವರೆಗೆ ಟೋಲ್ ಶುಲ್ಕ ಪಾವತಿ ಇಲ್ಲ]

ಪ್ರಧಾನಿಯವರ ಹೇಳಿಕೆ ನಂತರ ಮಧ್ಯರಾತ್ರಿಯಿಂದಲೇ 500-1000 ನೋಟುಗಳ ಚಲಾವಣೆಯನ್ನು ಸ್ಥಗಿತ ಗೊಳಿಸಿರುವ ಹಿನ್ನೆಲೆ ಜನರು ಎಟಿಎಂ, ಪೆಟ್ರೋಲ್ ಬಂಕ್ ಗಳಿಗೆ ಜನರು ಮುಗಿಬಿದ್ದಿದ್ದರು. ಹೀಗಾಗಿ ಚಿಲ್ಲರೆ ಇತ್ಯಾದಿ ವಿಷಯವಾಗಿ ನೋಟುಗಳನ್ನು ನಿರಾಕರಿಸಿದ್ದವು. ಜನರ ನೆರವಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
petrol bunks can refuse RS 500-1000 notes license will be ban, centrel menister dharmendra pradhan Warn.
Please Wait while comments are loading...