ಜೈಲಿನಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸಬಹುದು : ಸುಪ್ರೀಂ

ಪೊಲೀಸ್ ವಶದಲ್ಲಿರುವ ಅಥವ ಜೈಲಿನಲ್ಲರುವ ಆರೋಪಿಗಳು ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಜನಪ್ರತಿನಿಧಿಗಳ ಕಾಯ್ದೆ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ. ಇದರ ಮೂಲಕ ಪೊಲೀಸ್ ವಶದಲ್ಲಿರುವ ಹಾಗೂ ಕ್ರಿಮಿನಲ್ ಆರೋಪದ ಮೇಲೆ ಜೈಲು ಪಾಲಾಗಿರುವ ಹಲವು ನಾಯಕರು ನ್ಯಾಯಾಲಯದಿಂದ ಆರೋಪ ಸಾಬೀತಾಗುವವರೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆಯುತ್ತದೆ.
ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂಗೆ ಮನವಿ ಮಾಡಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಕಾಯ್ದೆ ತಿದ್ದುಪಡಿಗೆ ಸಮ್ಮತಿ ಸೂಚಿಸಿದ್ದು, ಜೈಲಿನಲಿರುವವರು, ಪೊಲೀಸ್ ವಶದಲ್ಲಿರುವ ರಾಜಕಾರಣಿಗಳು ವಿಧಾನಸಭೆ ಅಥವ ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದೆ.
2013ರ ಜುಲೈ 10ರಂದು ಸುಪ್ರೀಂ ಕೋರ್ಟ್ 2 ಅಥವಾ 2ಕ್ಕಿಂತ ಹೆಚ್ಚು ವರ್ಷ ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾದ ಸಂಸದರು, ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ತಿರ್ಪು ನೀಡಿತ್ತು. (ಜೈಲಲ್ಲಿರುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ)
ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದ ಕೇಂದ್ರ ಸರ್ಕಾರ, ನ್ಯಾಯಾಲಯದ ತೀರ್ಪು ಜಾರಿಯಾಗದಂತೆ ಕಳಂಕಿತ ರಾಜಕಾರಣಿಗಳನ್ನು ರಕ್ಷಿಸಲು ಸೆ.24ರಂದು ಸುಗ್ರೀವಾಜ್ಞೆ ಜಾರಿಮಾಡಲು ಹೋಗಿತ್ತು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ಕೋರಿತ್ತು. (ಇವರ ಆರೋಪ ಸಾಬೀತಾದರೆ ಕಾಂಗ್ರೆಸ್ ಖಲಾಸ್)
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಪೊಲೀಸ್ ವಶದಲ್ಲಿರುವ ಅಥವ ಜೈಲಿನಲ್ಲಿರು ರಾಜಕಾರಣಿಗಳು ಆರೋಪ ಸಾಬೀತಾಗುವ ತನಕ ವಿಧಾನಸಭೆ ಅಥವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ. (ಕ್ರಿಮಿನಲ್ ರಕ್ಷಣೆಗೆ ಸುಗ್ರೀವಾಜ್ಞೆ ರಾಹುಲ್ ಗರಂ)












Click it and Unblock the Notifications