ಕಪ್ಪುಹಣ ಘೋಷಿಸಿದಲ್ಲಿ ಶೇ50ರಷ್ಟು ಇಲ್ಲದಿದ್ದರೆ ಶೇ85ರಷ್ಟು ತೆರಿಗೆ

Posted By:
Subscribe to Oneindia Kannada

ನವೆದೆಹಲಿ, ನವೆಂಬರ್,28: ಕಪ್ಪು ಹಣ ಹೊಂದಿರುವವರಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು, ಕಾಳಧನಿಕರು ಶೇ.50ರಷ್ಟು ತೆರಿಗೆ ಪಾವತಿಸಿ ಸಕ್ರಮ ಮಾಡಿಕೊಳ್ಳಲು ಹೊಸ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತಿಸಿದೆ.

ಈ ಅವಕಾಶವನ್ನು ನಿರ್ಲಕ್ಷಿಸಿದರೆ, ಸರ್ಕಾರವೇ ಕಪ್ಪು ಹಣ ಪತ್ತೆ ಮಾಡಿದಾಗ ಶೇ.85ರಷ್ಟು ತೆರಿಗೆ ಹಾಗು ದಂಡ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಪ್ರಧಾನಿ ಮೋದಿ ಅವರು ಆದೇಶ ಹೊರಡಿಸಿದ ಮೂರು ವಾರಗಳ ನಂತರ ಆರ್ಥಿಕ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ ನಲ್ಲಿ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.

Pay 50% tax on unaccounted deposits, or 85% if caught

ನೋಟು ನಿಷೇಧ ಮಾಡಿದ ನಂತರ ಹಣ ಜಮಾವಣೆ ಮಾಡುವ ಅಕ್ರಮ ಹಣದ ಮೇಲೆ ವಿಧಿಸಲಾಗುವ ಶೇ.50ರಷ್ಟು ಪ್ರಮಾಣದ ಒಟ್ಟು ತೆರಿಗೆ, ದಂಡ ಮತ್ತು ಸರ್ಚಾರ್ಜ್ ಪ್ರಮಾಣವನ್ನು ಅವರು ಸದನಲ್ಲಿ ಪ್ರಸ್ತಾಪಿಸಿದರು.

ಕಾಳಧನಿಕರು ಘೋಷಿಸುವ ಹಣದ ಶೇ.25ರಷ್ಟನ್ನು ಬಡತನ ನಿರ್ಮೂಲನೆ ಕಾಯ್ದೆಯಡಿ ಬಡ್ಡಿಯಿಲ್ಲದೆ ಮತ್ತು ನಾಲ್ಕು ವರ್ಷ ಅವಧಿಯ ಬೀಗಮುದ್ರೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

2016ರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಕಪ್ಪು ಹಣ ಘೋಷಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಪ್ಪು ಹಣ ಘೋಷಿಸುವ ಕಾಳ ಧನಿಕರು ಶೇ.30ರಷ್ಟು ತೆರಿಗೆ, ಹೆಚ್ಚುವರಿಯಾಗಿ ಶೇ.10ರಷ್ಟು ದಂಡ ಮತ್ತು ಸರ್ಚ್ ಚಾರ್ಜ್ ರೂಪದಲ್ಲಿ ಶೇ.33ರಷ್ಟು ಪಿಎಂಜಿಕೆ ಸೆಸ್ ಪಾವತಿಸಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಕಪ್ಪು ಹಣ ಘೋಷಿಸಿದ ನಂತರ ಕಾಳಧನಿಕರು ಭಾರತೀಯ ರಿಸರ್ವ್ ಬ್ಯಾಂಕ್ ಜತೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರ ಅಧಿಸೂಚಿಸುವ ಯೋಜನೆಗಳಲ್ಲಿ ತಮ್ಮ ಲೆಕ್ಕವಿಲ್ಲದ ಹಣದ ಶೇ.25ರಷ್ಟು ಮೊತ್ತವನ್ನು ಹೂಡಬೇಕು ಎಂದು ಸರ್ಕಾರ ಮಸೂದೆಯಲ್ಲಿ ಉಲ್ಲೇಖಿಸಿದೆ.

ಈ ಹಣವನ್ನು ನಿರಾವರಿ, ವಸತಿ, ಶೌಚಾಲಯ ನಿರ್ಮಾಣ, ಮೂಲ ಸೌಲಭ್ಯಗಳು, ಪ್ರಾಥಮಿಕ ಶಿಕ್ಷಣ, ಪ್ರಥಾಮಿಕ ಆರೋಗ್ಯ, ಮತ್ತಿತರ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ನೀಡಿದ ಅವಕಾಶ ಬಳಸಿಕೊಳ್ಳದೆ ಕಾಳಧನವನ್ನು ಘೋಷಿಸಿಕೊಳ್ಳದಿದ್ದಲ್ಲಿ ಕಾಳಧನಿಕರು ಶೇ.60ರಷ್ಟು ತೆರಿಗೆ ಮತ್ತು ಶೇ.25ರಷ್ಟು ಸರ್ಚಾರ್ಜ್ ಪಾವತಿಸಬೇಕಾಗುತ್ತದೆ. ಇದರ ಜತೆಗೆ ಅಧಿಕಾರಿಯು ಕಪ್ಪುಕುಳದವರಿಗೆ ಶೇ.10ರಷ್ಟು ಹೆಚ್ಚುವರಿ ದಂಡ ವಿಧಿಸಬಹುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಇದಷ್ಟೇ ಅಲ್ಲದೆ ಹೆಚ್ಚುವರಿಯಾಗಿ 75ರಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಸಿದೆ.

ಪ್ರಸ್ತುತ ಇರುವ ಕಾಯ್ದೆ ಪ್ರಕಾರ ಕಪ್ಪು ಹಣ ಹೊಂದಿರುವವರು ಆದಾಯ ಘೋಷಿಸಿ ಸರಿಯಾದ ಮಾಹಿತಿ ಸಲ್ಲಿಸಿದರೆ ಶೇ.50ರಷ್ಟು ತೆರಿಗೆ ಮತ್ತು ಇಲ್ಲದಿದ್ದಲ್ಲಿ ಶೇ.200ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Providing a window to black money holders, the government on Monday proposed to levy a total tax, penalty and surcharge of 50 per cent on the amount deposited post demonetisation while higher taxes and stiffer penalty of up to 85 per cent await those who don't disclose but are caught.
Please Wait while comments are loading...