Winter Session Day 16 Roundup:ಕಲಾಪದ ಪ್ರಮುಖಾಂಶಗಳು

ನವದೆಹಲಿ, ಡಿಸೆಂಬರ್ 20: ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಪದೇ ಪದೇ ಮುಂದೂಡಲ್ಪಟ್ಟವು. ಹಲವು ವಿಷಯಗಳ ಕುರಿತು ವಿರೋಧಗಳು ವ್ಯಕ್ತವಾದವು.

ಇಡೀ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು 12 ಮಂದಿ ರಾಜ್ಯಸಭಾ ಸಂಸದರ ಅಮಾನತಿನ ವಿರುದ್ಧ ಪ್ರತಿಭಟನೆ ನಡೆಸಿದರು. ಲಖಿಂಪುರ್ ಖೇರಿ ವಿಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಗದ್ದಲ ಸೃಷ್ಟಿಯಾಗಿತ್ತು.

ಸರ್ಕಾರವು ನಾಲ್ಕು ಪಕ್ಷಗಳ ಜತೆ ಮಾತುಕತೆ ನಡೆಸಿದೆ, ವಿರೋಧ ಪಕ್ಷವು ಕೇವಲ ನಾಲ್ಕು ಪಕ್ಷಗಳ ಜತೆ ಸಭೆ ನಡೆಸಿರುವುದನ್ನು ಪ್ರಶ್ನಿಸಿದೆ. ಈ ಗದ್ದಲಗಳ ನಡುವೆಯೇ ಸರ್ಕಾರವು ಚುನಾವಣಾ ಸುಧಾರಣೆಗಳ ಮಸೂದೆಯನ್ನು ಮಂಡಿಸಿದೆ.

Parliament Winter Session 2021, Day 16 Roundup: Key Questions, Bills, Decisions, News and Highlights in Kannada

ಮತದಾರರ ಪಟ್ಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡುವ ಚುನಾವಣಾ ಸುಧಾರಣೆಗಳ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾಗಿದೆ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರ ಹೆಸರಿನ ದೃಢೀಕರಣಕ್ಕಾಗಿ ಹಾಗೂ ಹೆಸರಿನ ದೃಢೀಕರಣಕ್ಕಾಗಿ ಮತ್ತು ಹೆಚ್ಚಿನ ಮತ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತದಾರರನ್ನು ಗುರುತಿಸಲೂ ಚುನಾವಣಾ ನೋಂದಣಿ ಅಧಿಕಾರಿಗಳು ಆಧಾರ್ ಸಂಖ್ಯೆ ಪಡೆಯಲಾಗುತ್ತದೆ.

ರಾಜ್ಯಸಭೆಯಲ್ಲಿ ರಿಜಿಜು ಮಧ್ಯಂತರ ಮಸೂದೆಯನ್ನು ಮಂಡಿಸಲಿದ್ದಾರೆ, ಹಾಗೆಯೇ ನಿರ್ಮಲಾ ಸೀತಾರಾಮನ್ ಎನ್‌ಡಿಪಿಎಸ್ ಮಸೂದೆಯನ್ನು ಮಂಡಿಸಲಿದ್ದಾರೆ.

ಚುನಾವಣೆ ಪ್ರಕ್ರಿಯೆ ಸಮರ್ಪಕ ಅನುಷ್ಠಾನ, ಮತದಾನ ಹೆಚ್ಚಿಸಲು ಕ್ರಮ, ಚುನಾವಣೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಹಾಗೂ ನಕಲಿ ಮತದಾನ ತಡೆಯುವ ದಿಸೆಯಲ್ಲಿ ಕೇಂದ್ರ ಸರಕಾರ ವಿಧೇಯಕ ಮಂಡಿಸಲಿದೆ.

ಆಧಾರ್‌ ಸಂಖ್ಯೆ-ಪ್ಯಾನ್‌ ಸಂಖ್ಯೆ ಜೋಡಿಸಿದಂತೆ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದು ಹೊಸ ಸುಧಾರಣೆಯಾಗಿದೆ. ಇದರಿಂದ ನಕಲಿ ಮತದಾನ ಹಾಗೂ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದುವುದು ತಪ್ಪುತ್ತದೆ.

ಈವರೆಗೆ ಪ್ರತಿ ವರ್ಷದ ಜನವರಿ 1ಕ್ಕೂ ಮೊದಲು 18 ವರ್ಷ ತುಂಬಿದವರು ವರ್ಷದಲ್ಲಿ ಒಮ್ಮೆ ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಿತ್ತು. ಆದರೆ, ಇನ್ನು ಮುಂದೆ ನಾಲ್ಕು ಬಾರಿ ನೋಂದಣಿಗೆ ಅವಕಾಶ ನೀಡಲಾಗಿದೆ. ಜನವರಿ 1, ಏಪ್ರಿಲ್‌ 1, ಜುಲೈ 1 ಹಾಗೂ ಅಕ್ಟೋಬರ್‌ 1 ಎಂಬ ನಾಲ್ಕು ಕಟ್‌ಆಫ್‌ ದಿನಾಂಕ ನೀಡಿದೆ.

ಹಾಗೆಯೇ, ಚುನಾವಣೆ ನಡೆಸಲು ಶಾಲೆ ಸೇರಿ ಹಲವು ಪ್ರಮುಖ ಸಂಸ್ಥೆಗಳಿಂದ ಕಟ್ಟಡ ನೀಡಲು ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಚುನಾವಣೆ ಆಯೋಗಕ್ಕೆ ಚುನಾವಣೆ ನಡೆಸಲು ಯಾವುದೇ ಕಟ್ಟಡ ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ.

ನಾಗರಿಕ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ವಿರೋಧ: ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು. ಮಸೂದೆಯನ್ನು ವಿರೋಧಿಸಿದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಮಸೂದೆಯನ್ನು ಪರಿಶೀಲನೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಈ ಮಸೂದೆಯು ಜನರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಿದೆ ಎಂದು ಅವರು ಹೇಳಿದ್ದಾರೆ.

ಜೈವಿಕ ವೈವಿಧ್ಯ ಮಸೂದೆ:ಲೋಕಸಭೆಯು ಸೋಮವಾರ ಜೈವಿಕ ವೈವಿಧ್ಯ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಗೆ ಉಲ್ಲೇಖಿಸಿದೆ. ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಲೋಕಸಭೆಯ 21 ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರಿರುವ ಜಂಟಿ ಸಮಿತಿಗೆ ಮಸೂದೆಯನ್ನು ಉಲ್ಲೇಖಿಸುವ ಪ್ರಸ್ತಾಪವನ್ನು ಮಂಡಿಸಿದರು.

ಮಧ್ಯಂತರ ಮಸೂದೆ:ಮಧ್ಯಂತರ ಮಸೂದೆ, 2021 ಅನ್ನು ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು, ಸ್ಥಾಯಿ ಸಮಿತಿಗೆ ಪರಿಗಣನೆಗೆ ಕಳುಹಿಸಲಾಗಿದೆ ಕೇಂದ್ರವು ಮಧ್ಯಂತರ ಕಾಯ್ದೆಯನ್ನು ಉತ್ತೇಜಿಸಲು ಮತ್ತು ಸುಗಮಗೊಳಿಸಲು ರಾಜ್ಯಸಭೆಯಲ್ಲಿ 'ಮಧ್ಯಂತರ ಮಸೂದೆ, 2021' ಅನ್ನು ಪರಿಚಯಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+