'UPSC ಫೇಲ್, ಮುಂದೇನು?': ಉದ್ಯೋಗ ತೊರೆದು ಪರೀಕ್ಷೆ ಬರೆದಿದ್ದ IIT ಪದವೀಧರನ ಅಳಲು

ಯುಪಿಎಸ್‌ಸಿ ಅಥವಾ ನಾಗರಿಕ ಸೇವಾ ಪರೀಕ್ಷೆಗಳೆಂಬುದು ಕೇವಲ ಒಂದು ಪರೀಕ್ಷೆಯಲ್ಲ, ಅದೊಂದು ಸುದೀರ್ಘ ಮತ್ತು ಕಠಿಣವಾದ ತಪಸ್ಸು. ಲಕ್ಷಾಂತರ ಯುವಜನರ ಕನಸಾಗಿರುವ ಈ ಐಎಎಸ್ ಮತ್ತು ಐಪಿಎಸ್ ಹುದ್ದೆಗಳ ಗುರಿ ತಲುಪುವುದು ಸುಲಭದ ಮಾತಲ್ಲ. ಛಲ, ತಾಳ್ಮೆ ಹಾಗೂ ಕಠಿಣ ಪರಿಶ್ರಮವಿದ್ದರೂ ಕೆಲವೊಮ್ಮೆ ಅನಿರೀಕ್ಷಿತ ಸೋಲು ಎದುರಾಗುವುದು ಸಹಜ. ಇಂತಹ ಸೋಲು ಮತ್ತು ಅನಿಶ್ಚಿತತೆಗಳ ನಡುವೆ ಸಿಲುಕಿದ ಐಐಟಿ ಪದವೀಧರನೊಬ್ಬ ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಯುಪಿಎಸ್‌ಸಿ ಪ್ರಿಲಿಮ್ಸ್ ವಿಫಲ: ರೆಡ್ಡಿಟ್‌ನಲ್ಲಿ ಯುವಕನ ಪ್ರಶ್ನೆ

ಕೈತುಂಬಾ ಸಂಬಳ ತರುವ ಐಐಟಿ ಪದವಿಯ ನಂತರದ ಉದ್ಯೋಗವನ್ನು ಕೇವಲ ಒಂಬತ್ತು ತಿಂಗಳಿಗೆ ತೊರೆದು, ಸಿವಿಲ್ ಸರ್ವೀಸಸ್ ಪರೀಕ್ಷೆಯ ಸಿದ್ಧತೆಗೆ ಇಳಿದ ಯುವಕನೊಬ್ಬ, ಎರಡನೇ ಬಾರಿಯೂ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ವಿಫಲನಾಗಿದ್ದಾನೆ. ತೀವ್ರ ನಿರಾಸೆಗೊಳಗಾದ ಈ ಯುವಕ, ತನ್ನ ಅಳಲನ್ನು ರೆಡ್ಡಿಟ್‌ನಲ್ಲಿ ತೋಡಿಕೊಂಡಿದ್ದಾನೆ. "ಎರಡನೇ ಪ್ರಯತ್ನ, ಪ್ರಿಲಿಮ್ಸ್ ಫೇಲ್... ಮುಂದೇನು?" ಎಂದು ಆತ ಭಾರವಾದ ಮನಸ್ಸಿನಿಂದ ಪ್ರಶ್ನಿಸಿದ್ದಾನೆ. ಇದೇ ಪ್ರಶ್ನೆಯನ್ನು ಪದೇ ಪದೇ ಕೇಳಿರುವ ಆತ, "ನಾನು ಈಗ ಏನು ಮಾಡಬೇಕು? ಯುಪಿಎಸ್‌ಸಿಗೆ ಮತ್ತೊಂದು ವರ್ಷ ಮೀಸಲಿಡಬೇಕೇ ಅಥವಾ ಮತ್ತೆ ಉದ್ಯೋಗಕ್ಕೆ ಸೇರಬೇಕೇ?" ಎಂದು ನೆಟ್ಟಿಗರ ಬಳಿ ಸಲಹೆ ಕೇಳಿದ್ದಾನೆ.

IIT Graduate Fails

ಉದ್ಯೋಗ ಅಥವಾ ಯುಪಿಎಸ್‌ಸಿ: ನೆಟ್ಟಿಗರ ಪ್ರತಿಕ್ರಿಯೆಗಳು

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದಿ ಯುಪಿಎಸ್‌ಸಿ ಕನಸು ಕಾಣುತ್ತಿರುವ ಅನೇಕರು, ಈ ಯುವಕನ ಗೊಂದಲಕ್ಕೆ ಸ್ಪಂದಿಸಿದ್ದಾರೆ. ಒಂದು ವರ್ಷದ ಗ್ಯಾಪ್ ತೆಗೆದುಕೊಳ್ಳುವುದೋ ಅಥವಾ ಕಾರ್ಪೊರೇಟ್ ಜಗತ್ತಿಗೆ ಮರಳುವುದೋ ಎಂಬ ಕಠಿಣ ಆಯ್ಕೆಯ ಬಗ್ಗೆ ಹಲವರು ಸಲಹೆಗಳನ್ನು ನೀಡಿದ್ದಾರೆ.

ಒಂದು ಕೆಲಸ ಸಿಕ್ಕರೆ ಸಾಕಪ್ಪ ಅಂತಾರೆ, ಆದ್ರೆ 23 ವರ್ಷದ ಈಕೆ ಪಡೆದಿದ್ದು 19 ಸರಕಾರಿ ನೌಕರಿ ಆಫರ್ಸ್‌
ಒಂದು ಕೆಲಸ ಸಿಕ್ಕರೆ ಸಾಕಪ್ಪ ಅಂತಾರೆ, ಆದ್ರೆ 23 ವರ್ಷದ ಈಕೆ ಪಡೆದಿದ್ದು 19 ಸರಕಾರಿ ನೌಕರಿ ಆಫರ್ಸ್‌

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ: "ಸಹೋದರ, ನಿನ್ನ ಮೇಲೆ ನಿನಗೆ ನಂಬಿಕೆ ಇದ್ದರೆ ಮತ್ತೊಂದು ಪ್ರಯತ್ನ ಮಾಡು. ನಾನೂ ಕೂಡ ಐಐಟಿ ಪದವೀಧರ. ಕೆಲಸ ಬಿಟ್ಟು ಒಂದು ವರ್ಷ ತಯಾರಿ ನಡೆಸಿದ್ದೆ. ಆದರೆ ಗೆಳೆಯರೆಲ್ಲಾ ಜೀವನದಲ್ಲಿ ಮುಂದೆ ಹೋಗುತ್ತಿದ್ದಾರೆ ಎಂಬ ಭಯ ಮತ್ತು ಆತಂಕದಿಂದ ನಾನು ಶೇಕಡಾ ನೂರರಷ್ಟು ಶ್ರಮ ಹಾಕಲಾಗಲಿಲ್ಲ. ಹೀಗಾಗಿ ಪ್ರಿಲಿಮ್ಸ್ ಫೇಲ್ ಆಯಿತು. ಪಠ್ಯಕ್ರಮ ಮುಗಿದಿರುವುದರಿಂದ ಕೆಲಸದ ಜೊತೆಯಲ್ಲೇ ಓದಬಹುದು ಎಂದುಕೊಂಡು ನಂತರ ಕೆಲಸಕ್ಕೆ ಸೇರಿಕೊಂಡೆ. ಆದರೆ ಹೊಸ ಕೆಲಸ, ಹೊಸ ಊರು, ಹೊಸ ಜನರ ನಡುವೆ ಓದಲು ಸಾಧ್ಯವಾಗಲಿಲ್ಲ. ನನ್ನ ಮೇಲಿನ ನಂಬಿಕೆಯಿಂದ ನಾನು ಮತ್ತೊಂದು ವರ್ಷ ಪ್ರಯತ್ನಿಸಬೇಕಿತ್ತು ಎಂದು ಈಗ ಅನ್ನಿಸುತ್ತಿದೆ. ನಿನ್ನಲ್ಲಿ ಆ ನಂಬಿಕೆ ಇದ್ದರೆ ಮಾತ್ರ ಮುಂದುವರಿ, ಇಲ್ಲದಿದ್ದರೆ ಸೋಲಿನ ಭಯ ನಿನ್ನನ್ನು ಓದಲು ಬಿಡುವುದಿಲ್ಲ."

"ನಿಮ್ಮದು ಇದು ಎರಡನೇ ಗಂಭೀರ ಪ್ರಯತ್ನವಾಗಿದ್ದು, ಶ್ರಮ ಹಾಕಿದರೂ ವಿಫಲನಾಗಿದ್ದೇನೆ ಎನಿಸಿದರೆ, ದಯವಿಟ್ಟು ಕೆಲಸಕ್ಕೆ ಸೇರುವ ಬಗ್ಗೆ ಯೋಚಿಸಿ. ನನ್ನ ಅನುಭವದ ಆಧಾರದ ಮೇಲೆ ಈ ಮಾತು ಹೇಳುತ್ತಿದ್ದೇನೆ" ಎಂದು ಆತ ಮತ್ತಷ್ಟು ಕಿವಿಮಾತು ಹೇಳಿದ್ದಾನೆ. ಮತ್ತೊಬ್ಬ ನೆಟ್ಟಿಗ ಕಮೆಂಟ್ ಮಾಡಿ, "ಮೊದಲು ಒಂದು ಕೆಲಸಕ್ಕೆ ಸೇರಿಕೊಳ್ಳಿ, ಆಮೇಲೆ ಪರೀಕ್ಷೆ ಬರೆಯಿರಿ" ಎಂದು ಸಲಹೆ ನೀಡಿದ್ದಾರೆ.

9 ಶಾಲೆ ಕಟ್ಟಿಸಿ ಇಡೀ ಹಳ್ಳಿಯ ಚಿತ್ರಣವನ್ನೇ ಬದಲಾಯಿಸಿದ ರಿಕ್ಷಾ ಚಾಲಕ : ಅಕ್ಷರ ಸಂತ ಹಾಜಬ್ಬರನ್ನು ನೆನಪಿಸುವ ಅಪರೂಪದ ಕಥೆ
9 ಶಾಲೆ ಕಟ್ಟಿಸಿ ಇಡೀ ಹಳ್ಳಿಯ ಚಿತ್ರಣವನ್ನೇ ಬದಲಾಯಿಸಿದ ರಿಕ್ಷಾ ಚಾಲಕ : ಅಕ್ಷರ ಸಂತ ಹಾಜಬ್ಬರನ್ನು ನೆನಪಿಸುವ ಅಪರೂಪದ ಕಥೆ

ಇನ್ನೊಬ್ಬ ಐಐಟಿ ಪದವೀಧರ ತನ್ನ ಕಥೆ ಹಂಚಿಕೊಳ್ಳುತ್ತಾ, "ನನ್ನ ಪರಿಸ್ಥಿತಿಯೂ ನಿಮ್ಮಂತೆಯೇ ಇದೆ. ಐಐಟಿ ಮುಗಿದ ನಂತರದ ಮೊದಲ ಪ್ರಯತ್ನದಲ್ಲೇ ವಿಫಲನಾದೆ. 50-50 ಆಯ್ಕೆಗಳಿದ್ದ 17 ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದೆ. ನನ್ನ ಇತಿಹಾಸ ವಿಷಯ ಬಹಳ ದುರ್ಬಲವಾಗಿತ್ತು. ಈ ಬಾರಿಯ ಸಿವಿಲ್ ಸರ್ವೀಸಸ್ ಸಿದ್ಧತೆ ಮತ್ತು ಪ್ರಿಲಿಮ್ಸ್‌ನ ಅನಿಶ್ಚಿತತೆಯನ್ನು ನೋಡಿದರೆ, ಕೈಯಲ್ಲಿ ಒಂದು ಉದ್ಯೋಗ ಇರುವುದು ಉತ್ತಮ ಅನಿಸುತ್ತಿದೆ. ಉತ್ತಮ ಸಲಹೆಯ ನಿರೀಕ್ಷೆಯಲ್ಲಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಯುಪಿಎಸ್‌ಸಿ ಪರೀಕ್ಷೆಯ ಕಠಿಣ ಹಾದಿಯಲ್ಲಿ ಸಿಲುಕಿರುವ ಯುವಕನೊಬ್ಬನ ಈ ಪೋಸ್ಟ್, ಈಗ ಸಾವಿರಾರು ಆಕಾಂಕ್ಷಿಗಳಿಗೆ ಕನ್ನಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+