• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸತ್‌ಗೆ ಅತಿಮಕ್ರಮ ಪ್ರವೇಶ: ಚಾಕು ಹೊಂದಿದ್ದ ವ್ಯಕ್ತಿ ವಶ

|

ನವದೆಹಲಿ, ಸೆ.02: ಸಂಸತ್ ಅತಿಕ್ರಮ ಪ್ರವೇಶಕ್ಕೆ ಯತ್ನಿಸಿದ ಚಾಕು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಸಂಸತ್ ಪೊಲೀಸರು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸಂಸತ್ತಿನ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಲಾಗಿದೆ.

ಬಂಧಿತ ವ್ಯಕ್ತಿಯ ಪ್ರಾಥಮಿಕ ವಿಚಾರಣೆಯ ಮುಗಿದಿದ್ದು, ಜೈಲುವಾಸಿಯಾಗಿರುವ ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ರಾಮ್ ರಹೀಂ ಅವರ ಭಕ್ತ ಎಂದು ತಿಳಿದು ಬಂದಿದೆ. ಸಂಸತ್ತಿನ ಗೇಟ್ ನಂ.1ರ ಬಳಿ ಬೈಕ್ ನಿಲ್ಲಿಸಿ, ಗೇಟ್ ಮೂಲಕ ಪ್ರವೇಶಿಸಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಹೆಸರು ಸಾಗರ್ ಇನ್ಸಾ ಎಂದು ತಿಳಿದು ಬಂದಿದ್ದು, ದೆಹಲಿಯ ಲಕ್ಷ್ಮಿ ನಗರದ ನಿವಾಸಿ ಎಂದು ತಿಳಿದು ಬಂದಿದೆ. ಸಂಸತ್ ಪ್ರವೇಶಿಸಲು ಯತ್ನಿಸಿದ್ದು ಏಕೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಇನ್ನೂ ತಿಳಿದಿಲ್ಲ, ವಿಚಾರಣೆ ಜಾರಿಯಲ್ಲಿದೆ.

English summary
Delhi: A person has been detained on Monday while he was trying to enter the Parliament allegedly with a knife. He has been taken to Parliament Police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X