ಭಾರತದ ವಿರುದ್ಧ ಪಾಕಿಸ್ತಾನ ಎಫ್‌-16 ಯುದ್ಧ ವಿಮಾನ ಬಳಸಿದ್ದು ಸತ್ಯ?

ನವದೆಹಲಿ, ಮಾರ್ಚ್‌ 27: ಬಾಲಾಕೋಟ್ ದಾಳಿಯ ಬಳಿಕ ಪಾಕಿಸ್ತಾನವು ಭಾರತದ ಗಡಿಯ ಮೇಲೆ ವಾಯುದಾಳಿಗೆ ಎಫ್‌-16 ಅನ್ನು ಬಳಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪಾಕಿಸ್ತಾನದ ಎಫ್-16 ಪೈಲೆಟ್ ಒಬ್ಬರಿಗೆ ಪಾಕ್ ಮಿಲಿಟರಿ ಉನ್ನತಾಧಿಕಾರಿಯೊಬ್ಬರು ಗೌರವ ನೀಡಿತ್ತಿರುವ ವಿಡಿಯೋವನ್ನು ಇಂಡಿಯಾ ಟುಡೆ ಮಾಧ್ಯಮವು ಪ್ರಸಾರ ಮಾಡಿದ್ದು, ಭಾರತದ ಮೇಲೆ ಮಾಡಿದ ದಾಳಿಗೆ ಎಫ್-16 ಪೈಲೆಟ್‌ಗೆ ಗೌರವ ನೀಡಲಾಗಿದೆ ಎಂದು ಇಂಡಿಯಾ ಟುಡೆ ಹೇಳಿದೆ.

ಎಫ್-16 ಅಮೆರಿಕದ ತಂತ್ರಜ್ಞಾನವಾಗಿದ್ದು, ಅಮೆರಿಕೆಯ ಒಪ್ಪಿಗೆ ಇಲ್ಲದೆ ಯಾವುದೇ ಸೈನಿಕ ಕಾರ್ಯಾಚರಣೆಗೆ ಎಫ್-16 ಅನ್ನು ಬಳಸುವಂತಿಲ್ಲ ಎಂಬ ಒಪ್ಪಂದವಿದೆ. ಎಫ್-16 ಅನ್ನು ಕೇವಲ ರಕ್ಷಣೆಗಾಗಿ ಮಾತ್ರವೇ ಬಳಸಬೇಕು, ದಾಳಿಗಲ್ಲ ಎಂದು ಒಪ್ಪಂದದಲ್ಲಿ ಹೇಳಲಾಗಿದೆ.

Pakistan used F-16 flights against India: Media report

ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನತ್ತಿ ಹೋದ ವಿಂಗ್ ಕಮಾಂಡರ್ ಅಭಿಮನ್ಯು ಅವರ ವಿಮಾನವನ್ನು ಇದೇ ಎಫ್-16 ಹೊಡೆದು ಉರುಳಿಸಿದೆ ಎಂದು ಹೇಳಲಾಗಿತ್ತು.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ವರದಿ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಪಾಕಿಸ್ತಾನದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು. ಎಫ್-16 ಪೈಲೆಟ್ ಒಬ್ಬರು ಬೇರೆ ಮಾದರಿಯ ವಿಮಾನಗಳನ್ನು ಚಲಾಯಿಸಲೇ ಬಾರದು ಎಂಬ ಒಪ್ಪಂದವಿಲ್ಲ, ಆ ಪೈಲೆಟ್ ಎಫ್-16 ವಿಮಾನದ ಬದಲು ಬೇರೆ ಯುದ್ಧ ವಿಮಾನವನ್ನು ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+