ಇನ್‌ಸ್ಟಾಗ್ರಾಂನಲ್ಲಿ ತನ್ನ ಅನುಯಾಯಿಗಳಿಗೆ ಸ್ಮೃತಿ ಇರಾನಿ ಒಂದು ಪ್ರಶ್ನೆ

ನವದೆಹಲಿ, ಆಗಸ್ಟ್ 13: ಬೆಳ್ಳಂಬೆಳಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ಸದ್ದುಮಾಡಿದೆ.

ಅವರು ಫೋಟೊ ಒಂದನ್ನು ಹಾಕಿ ಇದು ಯಾವ ಹಾಡು ಎಂದು ಗೆಸ್ ಮಾಡಿ ನೋಡೋಣ ಎಂದು ಪ್ರಶ್ನೆಯೊಂದನ್ನು ಇನ್‌ಸ್ಟಾಗ್ರಾಂ ಅನುಯಾಯಿಗಳ ಮುಂದಿಟಿದ್ದಾರೆ. ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಒಂದು ಗಂಟೆಯೊಳಗೆ 4 ಸಾವಿರಕ್ಕೂ ಹೆಚ್ಚು ಲೈಕ್‌ಗಳು 100ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದವು.

ಅವರು ಮರದ ಬಾಗಿಲೊಂದರ ಹಿಂದೆ ನಿಂತಿರುವ ಫೋಟೊವನ್ನು ಅಪ್‌ಲೋಡ್ ಮಾಡಿದ್ದರು. ಅವರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಉತ್ತರಗಳ ಸುರಿಮಳೆಯೇ ಹರಿದಿದೆ.

One Question For Smriti Irani Followers in Instagram

'ಜರೋಕಾ ಈಸ್ ನಾಟ್ ಅಖಿಯೋ ವಾಲಾ' ಗೆಸ್‌ ದಿ ಸಾಂಗ್ ಎಂದು ಬರೆದುಕೊಂಡಿದ್ದಾರೆ. ತಕ್ಷಣ ಇನ್‌ಸ್ಟಾಗ್ರಾಂ ಬೆಂಬಲಿಗರು ಇದು 1978ರಲ್ಲಿ ಬಿಡುಗಡೆಯಾಗಿರುವ 'ಅಖಿಯೋಂಕೆ ಜರಾಕೋಂಸೆ' ಚಿತ್ರದ ಹಾಡು, ಹಾಗೆಯೇ ಕೆಲವರು 'ಅಖಿಯೋಂಸೆ ಗೋಲಿ ಮಾರೆ' ಎಂದು ಹೇಳಿ ಕಿಚಾಯಿಸಿದ್ದರೆ ಇನ್ನೂ ಕೆಲವರು 'ದಿಲ್‌ ಕೆ ಜರಾಕೋಂಸೆ ತುಜಕೋ ಬಿಠಾಕರ್' ಎಂದು ಬರೆದುಕೊಂಡಿದ್ದಾರೆ.

ಸ್ಮೃತಿ ಇರಾನಿ ಬೆಂಬಲಿಗರು ಇನ್‌ಸ್ಟಾಗ್ರಾಂನಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಅವರಿಗೆಲ್ಲರೂ ಪಾಲ್ಗೊಳ್ಳುವಂತೆ ಮಾಡಲು ಎಲ್ಲರನ್ನೂ ಒಂದುಗೂಡಿಸಲು ಒಂದು ಪ್ರಶ್ನೆ ಇಟ್ಟಿದ್ದಾರೆ. ಹಾಗಾದರೆ ಆ ಹಾಡು ಯಾವುದಿರಬಹುದು ಎಂದು ತಿಳಿಯಬೇಕಾ ಹಾಗಾದರೆ ಸ್ಮೃತಿ ಅವರ ಉತ್ತರಕ್ಕೂ ಕಾಯಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+