ದೆಹಲಿಯಲ್ಲಿ ಓಮಿಕ್ರಾನ್: 'ಹೆದರಬೇಡಿ' ಎಂದ ಕೇಜ್ರಿವಾಲ್

ದೆಹಲಿ ಜನವರಿ 2: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರು ಜವಾಬ್ದಾರಿಯುತವಾಗಿ ವರ್ತಿಸುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಸೋಂಕುಗಳು ಸೌಮ್ಯವಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಏಕದಿನ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಂಡಿದೆ. ದೆಹಲಿಯಲ್ಲಿ 2716 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೇ 21ರಂದು ದಾಖಲಾದ ಅತಿ ಹೆಚ್ಚು ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಇಂದು ಮೀರಿಸಿದೆ. ದೆಹಲಿಯಲ್ಲಿ 351 ಜನರಿಗೆ ಓಮಿಕ್ರಾನ್ ಹರಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ಜಾಗೃತರಾಗಿರಿ'

'ಜಾಗೃತರಾಗಿರಿ'

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಸಾರ್ವಜನಿಕರು ಭಯಪಡಬಾರದು. ಪ್ರಸ್ತುತ ದೆಹಲಿಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 6360ರಷ್ಟಿದೆ. ಆದರೆ 3 ದಿನಗಳ ಹಿಂದೆ ಸಕ್ರಿಯ ಪ್ರಕರಣಗಳ ಸಂಖ್ಯೆ 2291ರಷ್ಟಿತ್ತು. ಕಳೆದ 3 ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಡಿಸೆಂಬರ್ 29 ರಂದು 923 ಪ್ರಕರಣಗಳು, ಡಿಸೆಂಬರ್ 30 ರಂದು 1313 ಪ್ರಕರಣಗಳು, ಡಿಸೆಂಬರ್ 31 ರಂದು 1796 ಪ್ರಕರಣಗಳು, ಜನವರಿ 1 ರಂದು 2796 ಸೋಂಕುಗಳು, ಇಂದು 3100 ಹೊಸ ಪ್ರಕರಣಗಳು ವರದಿಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.ನಗರದಲ್ಲಿನ ಹೆಚ್ಚಿನ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗೆ ಅಗತ್ಯವಿಲ್ಲ ಎಂದು ಡೇಟಾ ತೋರಿಸುತ್ತದೆ ಮತ್ತು ಬಹುತೇಕ ಎಲ್ಲಾ ಪ್ರಕರಣಗಳು ಸೌಮ್ಯ ಅಥವಾ ಲಕ್ಷಣರಹಿತವಾಗಿವೆ ಎಂದು ದೆಹಲಿ ಸಿಎಂ ಹೇಳಿದ್ದಾರೆ. ಹೀಗಿದ್ದರೂ ಸರ್ಕಾರ ಯುದ್ಧದ ಆಧಾರದ ಮೇಲೆ ಮೂರನೇ ಅಲೆಯ ಸಂಭವನೀಯ ಸಿದ್ಧತೆಗಳನ್ನು ನಡೆಸುತ್ತಿದೆ.

ಆಸ್ಪತ್ರೆ ಹಾಸಿಗೆಗಳು ಸಿದ್ಧತೆ

ಆಸ್ಪತ್ರೆ ಹಾಸಿಗೆಗಳು ಸಿದ್ಧತೆ

ಇದುವರೆಗೆ 246 ಮಂದಿಯನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ 82 ಜನರು ಆಮ್ಲಜನಕದೊಂದಿಗೆ ಹಾಸಿಗೆಗಳಿಗೆ ದಾಖಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲೂ ಇದೇ ಪರಿಸ್ಥಿತಿ ಇದೆ. ಆಮ್ಲಜನಕದ ಅಗತ್ಯವಿದ್ದುದರಿಂದ ಕೊರೊನಾ ಸಂತ್ರಸ್ತರು ಯಾರೂ ಆಸ್ಪತ್ರೆಗೆ ಬಂದಿರಲಿಲ್ಲ. ದೆಹಲಿಯಲ್ಲಿ 37,000 ಹಾಸಿಗೆಗಳು ಸಿದ್ಧವಾಗಿವೆ. ಸಾರ್ವಜನಿಕರು ಸಾರ್ವಜನಿಕವಾಗಿ ಮುಖ ಕವಚಗಳನ್ನು ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರವನ್ನು ಅನುಸರಿಸಬೇಕು. ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಆಕ್ಸಿಜನ್ ಬೆಡ್‌ಗಾಗಿ ಹೊಸ ರೋಗಿಗಳು ಕಂಡುಬಂದಿಲ್ಲ

ಆಕ್ಸಿಜನ್ ಬೆಡ್‌ಗಾಗಿ ಹೊಸ ರೋಗಿಗಳು ಕಂಡುಬಂದಿಲ್ಲ

"ನಿನ್ನೆ 246 ಆಸ್ಪತ್ರೆಯ ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಆಸ್ಪತ್ರೆಗಳಲ್ಲಿ ಕೇವಲ 82 ಆಕ್ಸಿಜನ್ ಬೆಡ್‌ಗಳು ಭರ್ತಿಯಾಗಿವೆ. ಈ ಅಂಕಿ ಅಂಶವು ಕಳೆದ ಹಲವಾರು ದಿನಗಳಿಂದ ಒಂದೇ ಆಗಿದ್ದು, ಆಮ್ಲಜನಕದ ಅಗತ್ಯವಿರುವ ಯಾವುದೇ ಹೊಸ ರೋಗಿ ದಾಖಲಾಗಿಲ್ಲ. ಹೀಗಾಗಿ ಓಮಿಕ್ರಾನ್ ಬಗ್ಗೆ ಭಯ ಬೇಡ. ಜಾಗರೂಕತೆಯಿಂದಿರಿ. ದೆಹಲಿ ಸರ್ಕಾರ 37,000 ಹಾಸಿಗೆಗಳೊಂದಿಗೆ ಸಿದ್ಧವಾಗಿದೆ" ಕೇಜ್ರಿವಾಲ್ ಹೇಳಿದರು.

ಮುಂದುವರೆದ ನೈಟ್ ಕರ್ಫ್ಯೂ

ಮುಂದುವರೆದ ನೈಟ್ ಕರ್ಫ್ಯೂ

ಕೊರೊನಾ ಮತ್ತು ಓಮಿಕ್ರಾನ್ ಹೆಚ್ಚಳದಿಂದ ಹೆಚ್ಚಿನ ನಿರ್ಬಂಧಗಳನ್ನು ಶೀಘ್ರದಲ್ಲೇ ಪರಿಶೀಲಿಸಲಾಗುವುದು ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ದೆಹಲಿ, ಹರಿಯಾಣ ಮತ್ತು ಇತರ ಹಲವು ರಾಜ್ಯಗಳು ರಾತ್ರಿ ಕರ್ಫ್ಯೂ ಆರಂಭಿಸಿವೆ. ಇಪ್ಪತ್ಮೂರು ರಾಜ್ಯಗಳು ಇಲ್ಲಿಯವರೆಗೆ ಓಮಿಕ್ರಾನ್ ರೂಪಾಂತರವನ್ನು ವರದಿ ಮಾಡಿದೆ. ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿರುವ ಮಹಾರಾಷ್ಟ್ರದಲ್ಲಿ 460 ಓಮಿಕ್ರಾನ್ ಪ್ರಕರಣಗಳಿದ್ದು, ದೆಹಲಿಯಲ್ಲಿ 351 ಸೋಂಕುಗಳಿವೆ. ರಾಷ್ಟ್ರೀಯ ರಾಜಧಾನಿ ನವದೆಹಲಿ, ಹಣಕಾಸು ಕೇಂದ್ರ ಮುಂಬೈ ಮತ್ತು ಕೋಲ್ಕತ್ತಾದಂತಹ ದಟ್ಟವಾದ ಜನಸಂಖ್ಯೆಯ ಮೆಟ್ರೋಗಳಲ್ಲಿ ಜನ ಸಂಚಾರದಿಂದ ಕೊರೊನಾ ಓಮಿಕ್ರಾನ್ ಏರಿಕೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ಸಚಿವಾಲಯದ ಡೇಟಾ ಸೂಚಿಸುತ್ತದೆ.

Recommended Video

      ಹೊಸ ವರ್ಷಕ್ಕೆ ಟೀಂ‌ ಇಂಡಿಯಾ ಆಟಗಾರರ ಮೋಜು ಮಸ್ತಿ ಫುಲ್ ವೈರಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+