ಮೋದಿಯವರು ಶಿಷ್ಟಾಚಾರ ಉಲ್ಲಂಘಿಸುವುದು ಸರಿಯೇ?: ಓಮರ್
ಶ್ರೀನಗರ, ಡಿಸೆಂಬರ್ 12: "ಪ್ರಧಾನಿ ನರೇಂದ್ರ ಮೋದಿಯವರು ಭದ್ರತಾ ಶಿಷ್ಟಾಚಾರಗಳನ್ನು(ಪ್ರೊಟೊಕಾಲ್) ಉಲ್ಲಂಘಿಸುತ್ತಿರುವುದು ಸರಿಯೇ? ಅವರಿಗೆ ಈ ನಿಯಮಗಳೆಲ್ಲ ಅನ್ವಯಿಸುವುದಿಲ್ಲವೇ" ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
"ಇಂದು(ಡಿ.12ಗುಜರಾತಿನ ಅಹ್ಮದಾಬಾದಿನ ಸಾಬರಮತಿ ನದಿಯಲ್ಲಿ ಸಾಗರ ವಿಮಾನ(ಸೀಪ್ಲೇನ್)ದ ಮೂಲಕ ಸಾಗಿದ ನರೇಂದ್ರ ಮೋದಿಯವರ ನಡೆಯನ್ನು ಅವರು ಖಂಡಿಸಿದ್ದಾರೆ. ಮಾತ್ರವಲ್ಲ ಜೀಪಿನ ಒಂದು ಬಾಗಿಲನ್ನು ತೆಗೆದು ಜನರಿಗೆ ಕೈಬೀಸುತ್ತಾ ಹೋದ ಅವರಿಗೆ ಭದ್ರತಾ ಶಿಷ್ಟಾಚಾರಗಳನ್ನುಗಳ ಬಗ್ಗೆ ತಿಳಿದಿಲ್ಲವೇ" ಎಂದು ಕೇಳಿದ್ದಾರೆ.

"ಅಷ್ಟೇ ಅಲ್ಲ, ಈ ವಿಮಾನವನ್ನು ಒಬ್ಬ ವಿದೇಶಿ ಪೈಲೇಟ್ ಮುನ್ನಡೆಸಿದ್ದರ ಬಗ್ಗೆಯೂ ಅವರು ಲೇವಡಿ ಮಾಡಿ, ಭಾರತೀಯ ವಾಯುನೆಲೆಯ ಪೈಲೆಟ್ ಗಳು ಇರಲಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.
ಗುಜರಾತಿನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಡಿ.14 ರಂದು ನಡೆಯಲಿದ್ದು, ತನ್ನಿಮಿತ್ತ ಪ್ರಧಾನಿ ಮೋದಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಸೀಪ್ಲೇನ್ ನಲ್ಲಿ ಪ್ರಯಾಣ ಮಾಡುವ ಮೂಲಕ, ಭಾರತೀಯ ಸೀಪ್ಲೇನ್ ನಲ್ಲಿ ಪ್ರಯಾಣ ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೂ ಅವರು ಪಾತ್ರರಾದರು. ನಂತರ ಇಲ್ಲಿನ ಅಂಬಾಜಿ ದೇವಾಲಯಕ್ಕೂ ತೆರಳಿದ್ದ ಮೋದಿ, ತಾವು ಕುಳಿತಿದ್ದ ವಾಹನದ ಒಂದು ಬಾಗಿಲನ್ನು ತೆರೆದು, ಜನರಿಗೆ ಕೈಬೀಸುತ್ತಾ ಹೋಗಿದ್ದರು.
ಗುಜರಾತಿನಲ್ಲಿ ಡಿ.9 ರಂದು ಮೊದಲ ಹಂತದ ಮತದಾನ ನಡೆದಿದ್ದು, ಡಿ.18 ರಂದು ಮತಎಣಿಕೆ ನಡೆಯಲಿದೆ.












Click it and Unblock the Notifications