ದೆಹಲಿ ಮೆಟ್ರೋ ಟಿವಿ ಪರದೆಯ ಮೇಲೆ ಅಶ್ಲೀಲ ವಿಡಿಯೋ!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 15 : ನೋಡುಗರನ್ನು ಮುಜುಗರಕ್ಕೀಡುವ ಮಾಡುವಂಥ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ನಲ್ಲಿ ಟಿವಿಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿ ವೀಕ್ಷಕರನ್ನು ಬೆಚ್ಚಿಬೀಳಿಸಿದೆ.

ಜಾಹೀರಾತು ಪ್ರಸಾರ ಮಾಡುವ ಟಿವಿ ಪರದೆಯ ಮೇಲೆ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೋ ಪ್ರಸಾರವಾಗಲು ಪ್ರಾರಂಭವಾಗಿದೆ. ಪ್ರಯಾಣಿಕರನೇಕರು ಈ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.[ಆ್ಯಂಡ್ರಾಯ್ಡ್ ಫೋನಿನಲ್ಲಿ ಅಶ್ಲೀಲ ವೆಬ್ ಸೈಟ್ ನೋಡುವವರೇ ಎಚ್ಚರ !!!]

Obscene video played on screen at metro station in Delhi

ಒಂದು ಮೂಲದ ಪ್ರಕಾರ, ಜಾಹೀರಾತು ಪ್ರಸಾರವಾಗುತ್ತಿದ್ದ ಟಿವಿ ಪರದೆಯನ್ನು ಸಂಸ್ಧೆಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು ಮತ್ತು ಅದು ದೆಹಲಿ ಮೆಟ್ರೋ ರೇಲ್ ಕಾರ್ಪೊರೇಷನ್ ಗೆ ಸೇರಿದ್ದಾಗಿರಲಿಲ್ಲ. ಈ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲ.[ತನ್ವೀರ್ ಅರೆನಗ್ನ ಚಿತ್ರ ವೀಕ್ಷಣೆ, ಸಿದ್ದರಾಮಯ್ಯ, ಪರಂ ಗರಂ]

ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದರ ಕುರಿತು ತಮಗೆ ಮಾಹಿತಿ ಇರಲಿಲ್ಲ ಎಂದು ದೆಹಲಿ ಮೆಟ್ರೋ ರೇಲ್ ಕಾರ್ಪೊರೇಷನ್ ಹೇಳಿದ್ದು, ಜಾಹೀರಾತು ಪ್ರಸಾರವಾಗುವ ಬಗ್ಗೆ ಆ ಸಮಯದಲ್ಲಿ ಇನ್ನೂ ಪರೀಕ್ಷೆ ನಡೆಯುತ್ತಿದ್ದೆ ಎಂದು ವಿವರ ನೀಡಿದೆ.

ಈ ಘಟನೆಯನ್ನು ತಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ದೂರು ಸಲ್ಲಿಸಿದ ಪಕ್ಷದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a bizarre incident, an obscene video was played inadvertently at Rajeev Chowk Metro station in Delhi on Saturday.
Please Wait while comments are loading...