ಈಶಾನ್ಯ ಮಹಿಳೆಯನ್ನು ಮನೆಕೆಲಸದವಳಂತೆ ಕಂಡಿದ್ದು ನಾಚಿಕೆಗೇಡು!

ನವದೆಹಲಿ, ಜೂನ್ 27: ದೆಹಲಿಯ ಗಾಲ್ಫ್ ಕ್ಲಬ್ ವೊಂದರಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಈಶಾನ್ಯ ರಾಜ್ಯದ ಮಹಿಳೆಯೊಬ್ಬರನ್ನು ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ, ಮಹಿಳಾ ಪರ ಹೋರಾಟಗಾರ್ತಿಯರು ಧ್ವನಿ ಎತ್ತಿದ್ದಾರೆ. ಇಂಥ ಅಮಾನವೀಯ ಘಟನೆ ಖಂಡನಾರ್ಹ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಜೂನ್ 25 ರಂದು ದೆಹಲಿಯ ಗಾಲ್ಫ್ ಕ್ಲಬ್ಬಿಗೆ ಬಂದಿದ್ದ ತೈಲಿನ್ ಲಿಂಗ್ಡೋಹ್ ಎಂಬ ಮೇಘಾಲಯದ ಮಹಿಳೆ, ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಕಾರಣಕ್ಕಾಗಿ, ಆಕೆ ತೊಟ್ಟಿದ್ದ ಉಡುಗೆಯನ್ನು ಕಂಡು 'ಮನೆಕೆಲಸದವಳು' ಎಂದು ಬಿಂಬಿಸಿ ಆಕೆಗೆ ಅವಮಾನ ಮಾಡಿ, ಕ್ಲಬ್ಬಿನಿಂದ ಆಚೆಹಾಕಲಾಗಿತ್ತು. ಈ ಘಟನೆ ದೇಶದಾದ್ಯಂತ ಖಂಡನೆಗೆ ಒಳಗಾಗಿತ್ತು. ನಮ್ಮದೇ ದೇಶದ ಮಹಿಳೆಯನ್ನು ವಿದೇಶಿಯರೆಂಬಂತೆ ನಡೆಸಿಕೊಂಡ ಕ್ಲಬ್ಬಿನ ಕ್ರಮವನ್ನು ಟೀಕಿಸಲಾಗಿತ್ತು.

North east People are treated as Foriegners

ಈ ಕುರಿತು ಪ್ರತಿಕ್ರಿಯೆ ನೀಡಿದ, ಮಹಿಳಾ ಪರ ಹೋರಾಟಗಾರ್ತಿಯರಾದ ಸುಭಾಷಿಣಿ ಅಲಿ, ನಿರ್ಮಲಾ ಸಮಂತ್ ಮುಂತಾದವರು, 'ಈಶಾನ್ಯ ರಾಜ್ಯದವರನ್ನು ವಿದೇಶಿಯರೆಂಬಂತೆ ಕಾಣಲಾಗುತ್ತಿದೆ. ಇಂಥ ಅಮಾನ ವೀಯ ಪದ್ಧತಿ ಬ್ರಿಟಿಷರ ಕಾಲದಲ್ಲಿತ್ತು, ಆ ಸಮಯದಲ್ಲಿ ಭಾರತೀಯರನ್ನು ನಾಯಿಯಂತೆ ಕಾಣಲಾಗುತ್ತಿತ್ತು. ಆದರೆ ಆ ಪರಿಸ್ಥಿತಿ ಇಂದಿಗೂ ಮುಂದುವರೆದಿರುವುದು ನಿಜಕ್ಕೂ ನಾಚಿಕೆ ಗೇಡು' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+