ಸ್ನಾಪ್ ಡೀಲ್ ಉದ್ಯೋಗಿ ನಂತರ ಫ್ಯಾಷನ್ ವಿನ್ಯಾಸಕಿ ನಾಪತ್ತೆ

Posted By:
Subscribe to Oneindia Kannada

ನೋಯ್ಡಾ, ಮಾ. 03: ಸ್ನಾಪ್ ಡೀಲ್ ನ ಉದ್ಯೋಗಿ ದೀಪ್ತಿ ನಾಪತ್ತೆ ಪ್ರಕರಣದ ಬಳಿಕ ಅದೇ ರೀತಿಯಲ್ಲಿ ಫ್ಯಾಷನ್ ವಿನ್ಯಾಸಕಿಯೊಬ್ಬರು ಕಣ್ಮರೆಯಾಗಿರುವ ಘಟನೆ ನಡೆದಿದೆ. ನೋಯ್ಡಾದ ಸೆಕ್ಟರ್ 37 ಪ್ರದೇಶದಿಂದ ಸೋಮವಾರದಂದು ನಾಪತ್ತೆಯಾದ ಶಿಪ್ರಾ ಮಲಿಕ್ ಸುಳಿವು ಇನ್ನೂ ಸಿಕ್ಕಿಲ್ಲ.

ಫ್ಯಾಷನ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಪ್ರಾ ಮಲಿಕ್ ಎಂಬ ಉದ್ಯೋಗಿ ನೋಯ್ಡಾದ ಸೆಕ್ಟರ್ 37 ಪ್ರದೇಶದಿಂದ ದೆಹಲಿಯ ಕಡೆಗೆ ಹೊರಟವರು ಇಲ್ಲಿತನಕ ಪತ್ತೆಯಾಗಿಲ್ಲ.[ಸ್ನಾಪ್ ಡೀಲ್ ದೀಪ್ತಿ: ದೆಹಲಿಯಲ್ಲಿ ನಾಪತ್ತೆ ಹರ್ಯಾಣದಲ್ಲಿ ಪತ್ತೆ]

ದಕ್ಷಿಣ ದೆಹಲಿಯಲ್ಲಿ ಸೋಮವಾರ ಮಧ್ಯರಾತ್ರಿ 1.18 ರ ಸುಮಾರಿಗೆ ಸಹಾಯ ಕೋರಿ ಪೊಲೀಸ್ ಕಂಟ್ರೋಲ್ ರೂಮ್ 100 ಗೆ ಕರೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೆಹಲಿಯ ಚಾಂದನಿ ಚೌಕ್ ನಲ್ಲಿ ಬಾಟಿಕ್ ವೊಂದನ್ನು ನಡೆಸುತ್ತಿದ್ದರು ಎಂದು ನೋಯ್ಡಾದ ಎಸ್ಪಿ ದಿನೇಶ್ ಯಾದವ್ ಹೇಳಿದ್ದಾರೆ.

ಪ್ರಮುಖ ಇ ಕಾಮರ್ಸ್ ಸಂಸ್ಥೆ ಸ್ನಾಪ್ ಡೀಲ್ ನ ಮಹಿಳಾ ಉದ್ಯೋಗಿ ನಾಪತ್ತೆ ಪ್ರಕರಣ ಸುಖಾಂತ್ಯ ಬೆನ್ನಲ್ಲೇ ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ ಈ ರೀತಿ ಮತ್ತೊಂದು ಪ್ರಕರಣ ನಡೆದಿರುವುದು ಆತಂಕಕಾರಿಯಾಗಿದೆ. ಫ್ಯಾಷನ್ ವಿನ್ಯಾಸಕಿ ಶಿಪ್ರಾ ನಾಪತ್ತೆ ಪ್ರಕರಣದ ಇನ್ನಷ್ಟು ಮಾಹಿತಿ ಮುಂದಿದೆ...

ನೋಯ್ಡಾದಿಂದ ದೆಹಲಿಗೆ ತೆರಳುವಾಗ ನಾಪತ್ತೆ

ನೋಯ್ಡಾದಿಂದ ದೆಹಲಿಗೆ ತೆರಳುವಾಗ ನಾಪತ್ತೆ

ದೆಹಲಿಯ ಅತ್ಯಂತ ಪುರಾತನ ಪ್ರದೇಶ ಚಾಂದನಿ ಚೌಕ್ ನಲ್ಲಿ ಬಾಟಿಕ್ ವೊಂದನ್ನು ನಡೆಸುತ್ತಿರುವ ಫ್ಯಾಷನ್ ಡಿಸೈನರ್ ಶಿಪ್ರಾ ಮಲಿಕ್ ಅವರು ಸೋಮವಾರ ನೋಯ್ಡಾದ ಸೆಕ್ಟರ್ 37 ಪ್ರದೇಶದಿಂದ ದೆಹಲಿಯ ಕಡೆಗೆ ಹೊರಟವರು ಇಲ್ಲಿತನಕ ಪತ್ತೆಯಾಗಿಲ್ಲ.

ಶಿಪ್ರಾ ಅವರ ಪತಿ ಚೇತನ್ ಮಲಿಕ್

ಶಿಪ್ರಾ ಅವರ ಪತಿ ಚೇತನ್ ಮಲಿಕ್

ಶಿಪ್ರಾ ಅವರ ಪತಿ ಚೇತನ್ ಮಲಿಕ್ ಅವರು ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಪತಿಯ ರಿಯಲ್ ಎಸ್ಟೇಟ್ ವ್ಯವಹಾರ ಏನಾದರೂ ಶಿಪ್ರಾ ಅವರಿಗೆ ಮುಳುವಾಯಿತೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಇದುವರೆವಿಗೂ ಹಣಕ್ಕಾಗಿ ಒತ್ತಾಯಿಸಿ ಯಾವುದೇ ಫೋನ್ ಕರೆ ಬಂದಿಲ್ಲ

ಪೊಲೀಸರಿಗೆ ಸಿಕ್ಕಿರುವ ಸುಳಿವೇನು?

ಪೊಲೀಸರಿಗೆ ಸಿಕ್ಕಿರುವ ಸುಳಿವೇನು?

ಶಿಪ್ರಾ ಅವರ ಪತಿ ಚೇತನ್ ನೀಡಿರುವ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಿಗೆ ನೋಯ್ಡಾದಲ್ಲಿರುವ ಶಿಪ್ರಾ ಅವರ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಅವರ ಮಾರುತಿ ಸ್ವಿಫ್ಟ್ ಕಾರುಪತ್ತೆಯಾಗಿದೆ. ಶಿಪ್ರಾ ಅವರ ಸೋದರ ಮೊದಲಿಗೆ ಕಾರನ್ನು ಪತ್ತೆ ಹಚ್ಚಿ ತಿಳಿಸಿದ್ದಾರೆ.

ಪೊಲೀಸ್ ಕಂಟ್ರೋಲ್ ರೂಮ್ ಕರೆ

ಪೊಲೀಸ್ ಕಂಟ್ರೋಲ್ ರೂಮ್ ಕರೆ

ದಕ್ಷಿಣ ದೆಹಲಿ ವ್ಯಾಪ್ತಿ ಪ್ರದೇಶದಿಂದ ಸೋಮವಾರ ಮಧ್ಯರಾತ್ರಿ 1.18 ರ ಸುಮಾರಿಗೆ ಸಹಾಯ ಕೋರಿ ಪೊಲೀಸ್ ಕಂಟ್ರೋಲ್ ರೂಮ್ 100 ಗೆ ಕರೆ ಬಂದಿದೆ. ನೋಯ್ಡಾದಿಂದ ಚಾಂದಿನಿ ಚೌಕ್ ಗೆ ತೆರಳುವ ಮುನ್ನ ನನಗೆ ಕರೆ ಮಾಡಿದ್ದಳು ಎಂದು ಚೇತನ್ ಹೇಳಿದ್ದಾರೆ. ಶಿಪ್ರಾ ಕಾರಿನಲ್ಲಿ ಆಕೆಯ ಬ್ಯಾಗ್ ಇನ್ನಿತರ ವಸ್ತುಗಳಿದ್ದು, ಕಾರಿನ ಕೀ ಕೂಡಾ ಅಲ್ಲೇ ಇದೆ.

ಸ್ನಾಪ್ ಡೀಲ್ ನ ಮಹಿಳಾ ಉದ್ಯೋಗಿ ನಾಪತ್ತೆ ಪ್ರಕರಣ

ಸ್ನಾಪ್ ಡೀಲ್ ನ ಮಹಿಳಾ ಉದ್ಯೋಗಿ ನಾಪತ್ತೆ ಪ್ರಕರಣ

ಪ್ರಮುಖ ಇ ಕಾಮರ್ಸ್ ಸಂಸ್ಥೆ ಸ್ನಾಪ್ ಡೀಲ್ ನ ಮಹಿಳಾ ಉದ್ಯೋಗಿ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.ಗಾಜಿಯಾಬಾದಿನ ಕಚೇರಿಯಿಂದ ಮನೆಗೆ ತೆರಳುವಾಗ ಕಣ್ಮರೆಯಾಗಿದ್ದ ದೀಪ್ತಿ ಅವರು ಶುಕ್ರವಾರ ಬೆಳಗ್ಗೆ ತಮ್ಮ ಮನೆ ಸೇರಿದ್ದರು. ಶಾರುಖ್ ಖಾನ್ ಅಭಿನಯದ 'ಡರ್' ಚಿತ್ರದ ಮಾದರಿಯಲ್ಲಿ ಯೋಜನೆ ಹಾಕಿಕೊಂಡ ಒನ್ ಸೈಡ್ ಲವರ್ ಒಬ್ಬ ಈ ಕೃತ್ಯ ಎಸಗಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 29-year-old Noida-based woman fashion designer Shipra Malik has gone missing from Delhi under mysterious circumstances shortly after she called the police helpine.
Please Wait while comments are loading...