• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೀಪಾವಳಿ; ಬಿರಿಯಾನಿ ಅಂಗಡಿ ತೆರೆದ ಮುಸ್ಲಿಂ ವ್ಯಕ್ತಿಗೆ ಬೆದರಿಕೆ!

|
Google Oneindia Kannada News

ದೆಹಲಿ ನವೆಂಬರ್ 7: ದೀಪಾವಳಿಯ ಸಂದರ್ಭದಲ್ಲಿ ಬಿರಿಯಾನಿ ಅಂಗಡಿಯನ್ನು ತೆರೆದಿದ್ದಕ್ಕಾಗಿ ಮುಸ್ಲಿಂ ಅಂಗಡಿಯವನಿಗೆ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ದೆಹಲಿ ಪೊಲೀಸರು ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿಡಿಯೋವನ್ನು ನೋಡಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೀಡಿಯೊದಲ್ಲಿ ಆರೋಪಿಯು ತನ್ನನ್ನು ಬಲಪಂಥೀಯ ಗುಂಪು ಬಜರಂಗದಳದ ಸದಸ್ಯ ನರೇಶ್ ಕುಮಾರ್ ಸೂರ್ಯವಂಶಿ ಎಂದು ಪರಿಚಯಿಸಿಕೊಳ್ಳುತ್ತಾನೆ. ಜೊತೆಗೆ ಸಂತೆನಗರ ಹಿಂದುಗಳಿರುವ ಪ್ರದೇಶ. ಇಲ್ಲಿ ಯಾವುದೇ ಹಬ್ಬ ಹರಿದಿನಗಳಲ್ಲಿ ಅಂಗಡಿ ತೆರೆಯದಂತೆ ಬೆದರಿಕೆ ಹಾಕುತ್ತಾನೆ.

ಈ ಘಟನೆ ದೀಪಾವಳಿ ರಾತ್ರಿ ದೆಹಲಿಯ ಸಂತ ನಗರದಲ್ಲಿನ ಬಿರಿಯಾನಿ ಜಾಯಿಂಟ್‌ನ ನಡೆದಿದೆ. ವ್ಯಕ್ತಿಯೊಬ್ಬರು ಬಿರಿಯಾನಿ ಅಂಗಡಿಯನ್ನು ತೆರೆದಿದ್ದಕ್ಕಾಗಿ ಮುಸ್ಲಿಂ ಅಂಗಡಿಯವನಿಗೆ ಶ್ಲೀಲವಾಗಿ ನಿಂದಿಸುತ್ತಿರುವ ಮತ್ತು ಅಂಗಡಿಯನ್ನು ಮುಚ್ಚುವಂತೆ ಕಿರುಕುಳ ನೀಡುತ್ತಿದ್ದಾರೆ. ಇಲ್ಲದ್ದಿದ್ದರೆ ಈ ಪ್ರದೇಶದಲ್ಲಿ ಬೆಂಕಿ ಹೊತ್ತುಕೊಳ್ಳುತ್ತದೆ ಎಂದು ವ್ಯಕ್ತಿ ಅಂಗಡಿ ಮಾಲೀಕನಿಗೆ ಎಚ್ಚರಿಸುತ್ತಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಶೇರ್ ಆದ ನಂತರ ದೆಹಲಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದರೆ ಆರೋಪಿಯನ್ನು ಇನ್ನೂ ಗುರುತಿಸಲಾಗಿಲ್ಲ. IPC ಸೆಕ್ಷನ್ 295A ('ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ') ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

"ಈ ಘಟನೆಯ ಬಗ್ಗೆ ಇಲ್ಲಿಯವರೆಗೆ ಬುರಾರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪಿಸಿಆರ್ ಕರೆ ಅಥವಾ ದೂರು ಬಂದಿಲ್ಲ. ಆದಾಗ್ಯೂ, ಸತ್ಯಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕಾನೂನಿನ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ಸುಮಾರು ಮೂರು ನಿಮಿಷಗಳ ದೀರ್ಘಾವಧಿಯ ವೀಡಿಯೊದಲ್ಲಿ, ವ್ಯಕ್ತಿ ಮೊದಲು "ಇದು ಮುಸ್ಲಿಂ ಪ್ರದೇಶವೇ? ಅರೇ... ನಿಮ್ಮ ಅಂಗಡಿಯನ್ನು ಹೇಗೆ ತೆರೆದಿದ್ದೀರಿ? ಯಾರು ನಿಮಗೆ ಅನುಮತಿ ನೀಡಿದರು? ಇದು ಹಿಂದೂ ಪ್ರದೇಶ ಎಂದು ನಿಮಗೆ ತಿಳಿದಿಲ್ಲವೇ? ಇಂದು ದೀಪಾವಳಿ ... ಈಗ ಅದನ್ನು ಮುಚ್ಚಿ. ಇದು ಏನು ... ನೀವು ಯೋಚಿಸುತ್ತೀರಿ. ಇದು ನಿಮ್ಮ ಪ್ರದೇಶನಾ? ಇದು ಜಾಮಾ ಮಸೀದಿಯೇ? ಇದು ಸಂಪೂರ್ಣ ಹಿಂದೂ ಪ್ರದೇಶ" ಎಂದು ಅವರು ಕೂಗುತ್ತಾರೆ.

ವಿಡಿಯೋದಲ್ಲಿ ವ್ಯಕ್ತಿ ಕಿರುಚಾಡುತ್ತಿದ್ದಂತೆ ಅಂಗಡಿ ಸಿಬ್ಬಂದಿ ಆಘಾತಕ್ಕೊಳಗಾಗಿ, ಭಯಭೀತರಾಗಿದ್ದರು. ನಿಂದನೆಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಈ ವೇಳೆ ಶಾಕ್‌ ಆದ ಸಿಬ್ಬಂದಿ ಅಂಗಡಿಯೊಳಗೆ ಕುರ್ಚಿಗಳು, ಟೇಬಲ್‌ಗಳು ಮತ್ತು ಪಾತ್ರೆಗಳನ್ನು ಸ್ಥಳಾಂತರಿಸಲು ಪ್ರಾರಂಭಿಸುತ್ತಾನೆ. ಅದನ್ನು ಮುಚ್ಚಲು ತಯಾರಿ ನಡೆಸುತ್ತಾನೆ.

ನಂತರ ಅವರು ಮುಸ್ಲಿಮರು "ಲವ್ ಜಿಹಾದ್" ನಲ್ಲಿ ತೊಡಗುತ್ತಾರೆ ಮತ್ತು ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸುತ್ತಾರೆ ಎಂದು ಆರೋಪಿಸಿದರು. "ಲವ್ ಜಿಹಾದ್" ಹಿಂದುತ್ವವಾದಿಗಳು ಪ್ರತಿಪಾದಿಸುವ ಪಿತೂರಿ ಸಿದ್ಧಾಂತವಾಗಿದೆ. "ಲವ್ ಜಿಹಾದ್" ಮೂಲಕ ಹಿಂದೂ ಮಹಿಳೆಯರನ್ನು ಮುಸ್ಲಿಮರು ಮದುವೆಯ ಮೂಲಕ ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಅಂತಿಮವಾಗಿ ಅಂಗಡಿಯನ್ನು ಮುಚ್ಚಲು ಪ್ರಾರಂಭಿಸಿದರು.

ಅಂಗಡಿಯನ್ನು ನಿರ್ವಹಿಸುವ ಮಗ್ರೂಬ್ ಅಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಅಲ್ಲಿರುವ ಇತರರು ನಮ್ಮನ್ನು ಬೆಂಬಲಿಸಿದರೂ ಅವರು ತಮ್ಮ ಅಂಗಡಿಯನ್ನು ಮುಚ್ಚಿದರು.ಅವರು ನಮ್ಮನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆಂದು ನಮಗೆ ತಿಳಿದಿಲ್ಲ ಆದರೆ ಅವರು ಜನರನ್ನು ಪ್ರಚೋದಿಸಲು ಮತ್ತು ಭಯವನ್ನು ಹುಟ್ಟುಹಾಕಲು ಬಯಸಿದ್ದರು" ಎಂದು ಅಲಿ ಹೇಳಿದರು. ಅಂಗಡಿ ಮಾಲೀಕರಾದ ಮಗ್ರೂಬ್ ಅಲಿ ಮತ್ತು ಅವರ ಹಿರಿಯ ಸಹೋದರ ಐಜಾಜ್ ಅಲಿ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯವರು. ಘಟನೆಯ ಬಗ್ಗೆ ತಿಳಿದಾಗಿನಿಂದ ಅವರ ಪೋಷಕರು ಆತಂಕಗೊಂಡಿದ್ದಾರೆ ಎಂದು ಐಜಾಜ್ ಅಲಿ ಹೇಳಿದ್ದಾರೆ.

"2014 ರಲ್ಲಿ ನಾನು ಇಲ್ಲಿ ಅಂಗಡಿಯನ್ನು ತೆರೆದಾಗಿನಿಂದ ನಾವು ಯಾವುದೇ ತೊಂದರೆಯನ್ನು ಎದುರಿಸಲಿಲ್ಲ. ಎಲ್ಲಾ ಹಬ್ಬಗಳಲ್ಲಿ ಅಂಗಡಿಯನ್ನು ತೆರೆದಿದ್ದೇವೆ" ಎಂದು ಐಜಾಜ್ ಅಲಿ ತಿಳಿಸಿದರು. "ಇದೇ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದೆ. ಎಲ್ಲರೂ ಭಯಭೀತರಾಗಿದ್ದಾರೆ ಆದರೆ ಕೆಲವು ಹಿಂದೂ ನೆರೆಹೊರೆಯವರು ಮತ್ತು ಅಂಗಡಿಯ ಮಾಲೀಕರು ಮಧ್ಯಪ್ರವೇಶಿಸಿ ನನ್ನ ಸಹೋದರ ಮತ್ತು ಉದ್ಯೋಗಿಗಳನ್ನು ಬೆದರಿಸುತ್ತಿದ್ದ ವ್ಯಕ್ತಿಯನ್ನು ದೂರ ಕರೆದೊಯ್ದರು" ಎಂದಿದ್ದಾರೆ.

English summary
The Delhi Police has filed an FIR after a video went viral on social media in which a man threatening a Muslim shopkeeper for opening his Biryani shop in Sant Nagar area in the time of Deepavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X