ನಿತೀಶ್ ಅವರು ಅಮಿತ್ ಶಾ ಅವರ ಸೇವಕ: ಕಾಂಗ್ರೆಸ್

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 19: "ಒಂದು ಕಾಲದಲ್ಲಿ ಗೌರವಅನ್ವಿತ ನಾಯಕರಾಗಿದ್ದ ನಿತೀಶ್ ಕುಮಾರ್ ಅವರು ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಸಂದೀಪ್ ದಿಕ್ಷಿತ್, "ನಿತೀಶ್ ಕುಮಾರ್ ಅವರ ವರ್ತನೆಯಿಂದ ಅವರದೇ ಪಕ್ಷದ ಹಲವು ನಾಯಕರಿಗೆ ಅಚ್ಚರಿ, ನೋವೂ ಆಗಿದೆ. ಇದುವರೆಗೂ ಇಂಥ ಪ್ರಮಾದವನ್ನು ಯಾರೂ ಮಾಡಿರಲಿಲ್ಲ. ಅವರು ತಮ್ಮ ನೈತಿಕತೆಯನ್ನು ಮರೆತಿದ್ದಾರೆ. ಅವರೊಬ್ಬ ದುರ್ಬಲ ಮುಖ್ಯಮಂತ್ರಿ. ಇನ್ನು ಕೆಲವೇ ದಿನಗಳಲ್ಲಿ ಅವರ ಪಕ್ಷದ ಗೌರವಾನ್ವಿತ ನಾಯಕರೆಲ್ಲ ಪಕ್ಷ ತೊರೆದರೂ ಅಚ್ಚರಿಯಿಲ್ಲ" ಎಂದರು.

Nitish Kumar working as servant of BJP president Amit Shah: Congress

ಯುಪಿಎ ಬಣದೊಂದಿಗಿನ ಮಹಾಮೈತ್ರಿಯನ್ನು ಮುರಿದುಕೊಂಡು, ಎನ್ ಡಿಎ ಯೊಂದಿಗೆ ಕೈಜೋಡಿಸಿದ್ದ ನಿತೀಶ್ ಕುಮಾರ್ ನಡೆ ತೀವ್ರ ಟೀಕೆಗೆ ಗುರಿಯಾಗಿತ್ತು. ಕಳೆದ ತಿಂಗಳು ಬಿಜೆಪಿಯೊಂದಿಗೆ ಕೈಜೋಡಿಸಿ, ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bihar Chief Minister Nitish Kumar who was once a respected leader is now working as BJP president Amit Shah's servant, Congress told on Aug 19th. Nitish recently walked away from the grand alliance with Rashtriya Janata Dal (RJD) and the Congress to join hands with the BJP last month to form government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ