ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮಗಳಿಗಾದ ಅನ್ಯಾಯ ಯಾರಿಗೂ ಆಗೋದು ಬೇಡ: ನಿರ್ಭಯಾ ತಾಯಿ

|
Google Oneindia Kannada News

ನವದೆಹಲಿ, ಡಿಸೆಂಬರ್ 2: ಯಾವುದೇ ಕಾರಣಕ್ಕೂ ನನ್ನ ಮಗಳಿಗಾದಂತಹ ಅನ್ಯಾಯ ಇನ್ಯಾರಿಗೂ ಆಗಬಾರದು ಎಂದು ನಿರ್ಭಯಾ ತಾಯಿ ಕಣ್ಣೀರು ಹಾಕಿದ್ದಾರೆ.

ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಭಯಾ ತಾಯಿ ಮಾತನಾಡಿ ನನ್ನ ಮಗಳ ಪ್ರಕರಣಕ್ಕೆ ಆದಂತಹ ಗತಿ ವೈದ್ಯೆಗೆ ಆಗಬಾರದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.

ನನ್ನ ಮಗನನ್ನು ಸುಟ್ಟುಬಿಡಿ: ಅತ್ಯಾಚಾರಿಯ ತಾಯಿಯ ಆಕ್ರೋಶನನ್ನ ಮಗನನ್ನು ಸುಟ್ಟುಬಿಡಿ: ಅತ್ಯಾಚಾರಿಯ ತಾಯಿಯ ಆಕ್ರೋಶ

2012ರ ಬಳಿಕ ಏನೂ ಬದಲಾವಣೆಯಾಗಿಲ್ಲ. ಹೆಣ್ಣುಮಕ್ಕಳಿಗೆ ಭದ್ರತೆಯೂ ಕೂಡ ಇಲ್ಲ, ನನ್ನ ಮಗಳಿಗೂ ನ್ಯಾಯ ಸಿಕ್ಕಿಲ್ಲ. ನನ್ನ ಮಗಳಿಗಾದ ಗತಿ ಅವರ ಕುಟುಂಬಕ್ಕೆ ಆಗಬಾರದು ಎಂದರು.

Nirbhayas Mother Says Nothing Has Changed

ಇಡೀ ಪ್ರಪಂಚದ ಗಮನ ಸೆಳೆದಿದ್ದ ನಿರ್ಭಯಾ ಪ್ರಕರಣದ ತೀರ್ಪುನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ಪ್ರಕರಣದ ನಾಲ್ವರು ಆರೋಪಿಗಳಿಗೆ ಮರಣ ದಂಡನೆ ಕಾಯಂಗೊಳಿಸಿದೆ. 2012ರ ಡಿಸೆಂಬರ್ ನಲ್ಲಿ ನಡೆದಿದ್ದ ಈ ಹೀನ, ಕುಕೃತ್ಯಕ್ಕೆ ಮೇ 5, 2014ರಂದು ಅಂತಿಮ ತೀರ್ಪು ಬಂದಿತ್ತು.

ಡಿ. 16, 2012 - ನಿರ್ಭಯಾ ಅಂದು ತನ್ನ ಭಾವಿ ಪತಿಯೊಂದಿಗೆ ಸಿನಿಮಾಕ್ಕೆ ತೆರಳಿ ಸಂಜೆ ಕತ್ತಲಾಗುವ ಹೊತ್ತಿಗೆ ಮನೆಗೆ ಮರಳುವ ವೇಳೆ ಖಾಸಗಿ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿತ್ತು.

ವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿ

ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾತ್ರವಲ್ಲ, ಮನುಷ್ಯತ್ವಕ್ಕೇ ಅಪಮಾನವಾಗುವಂಥ ರೀತಿಯಲ್ಲಿ ಆ ಯುವತಿಯ ಮೇಲೆ ಅತ್ಯಂತ ಕ್ರೂರವಾಗಿ, ಚಲಿಸುತ್ತಿದ್ದ ಬಸ್ ನಲ್ಲಿ ಅತ್ಯಾಚಾರ ನಡೆದಿತ್ತು.

English summary
It has been seven years and my daughter’s culprits are yet to be punished, said Nirbhaya’s mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X