ಮಣಿಪುರ ಮೂಲದ ಉಗ್ರನನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 02 : ಮಣಿಪುರ ಮೂಲದ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ದೆಹಲಿಯಲ್ಲಿ ಶನಿವಾರ ಬಂಧಿಸಿದ್ದಾರೆ.

'ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷ (ಕೆಸಿಪಿ) ಸಂಘಟನೆಗೆ ಹಣ ಸಂಗ್ರಹ, ಅಕ್ರಮ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಮಣಿಪುರ ಮೂಲದ ಸನಬಮ್ ಇನೋಬಿ ಎಂಬಾತನನ್ನು ನವದೆಹಲಿಯಲ್ಲಿ ಬಂಧಿಸಿರುವುದಾಗಿ ಎನ್‌ಐಎ ತಿಳಿಸಿದೆ.

NIA arrests Manipur-based terrorist from Delhi

ಕಳೆದ ಜನವರಿಯಲ್ಲಿ ಕೆಸಿಪಿ ಮುಖ್ಯಸ್ಥ ಖೋಯಿರಾಮ್ ರಂಜಿತ್ ಸಿಂಗ್‌, ಆತನ ಮಹಿಳಾ ಸಹಾಯಕಿ ಇರುಂಗ್ಬಾಮ್ ಸನಾತೊಂಬಿ ದೇವಿ ಹಾಗೂ ಮತ್ತೊಬ್ಬ ಸಹಾಯಕ ಪಿ.ಪ್ರೇಮ್ ಕುಮಾರ್‌ ಮಣಿಪುರದ ಮಯೂರ್ ವಿಹಾರ್ ಎಂಬಲ್ಲಿ ದೆಹಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದರು. ಮಾರ್ಚ್‌ನಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು.‌

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Investigation Agency (NIA) has arrested a member of a Manipur-based terrorist organisation, Kangleipak Communist Party (KCP), from Delhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ