ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ ಆದ್ಮಿ ಕೇಜ್ರಿವಾಲಾಗೆ power problem ಜೋರಾಗಿದೆ!

By Srinath
|
Google Oneindia Kannada News

ನವದೆಹಲಿ, ಡಿ. 24: ಅಧಿಕಾರಕ್ಕೇರಲು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಹಾತೊರೆಯುತ್ತಿರುವುದನ್ನು ನೋಡಿದರೆ ಅವರನ್ನು power problem ತೀವ್ರವಾಗಿ ಬಾಧಿಸುವುದು ಖಚಿತವಾಗಿದೆ.

ಚುನಾವಣೆಗೆ ಮುನ್ನ ಅರವಿಂದ್ ಕೇಜ್ರಿವಾಲಾರ ಆಮ್ ಆದ್ಮಿ ಪಕ್ಷವು ನೀಡಿದ್ದ ಭರವಸೆಗಳ ಪೈಕಿ ಒಂದಾದ ದುಬಾರಿಯಲ್ಲದ ವಿದ್ಯುತ್ ಪೂರೈಸುವುದು ನಿಜಕ್ಕೂ ಸಮಸ್ಯೆಯಾಗಿ ಕಾಡಲಿದೆ ಎಂದು ದಿಲ್ಲಿ ಉದ್ಯಮಿಗಳೆ ಹೇಳುತ್ತಿದ್ದಾರೆ. ((ಗುಜರಾತಿನಲ್ಲಿ 10 ವರ್ಷದಿಂದ ವಿದ್ಯುತ್ ದರ ಏರಿಕೆಯಾಗಿಲ್ಲ)

AAP's cheap power politics in New Delhi may not be possible
ಅಗ್ಗದ ವಿದ್ಯುತ್ ಪೂರೈಕೆ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ (ಮೂರು discoms) ಆಡಿಟ್ ನಡೆಸುವುದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾಗೆ ಕಷ್ಟಸಾಧ್ಯವಾಗಲಿದೆ ಎನ್ನುತ್ತಿದ್ದಾರೆ ಪರಿಣತರು. ಮತ್ತೂ ಒಂದು ಗಹನವಾದ ವಿಚಾರವೆಂದರೆ ಈಗಾಗಲೇ discomsಗಳು 11,000 ಕೋಟಿ ರೂ. ನಷ್ಟದ ಬುತ್ತಿಯನ್ನು ಕಂಕುಳಲ್ಲಿಯೇ ಇಟ್ಟುಕೊಂಡಿವೆ. ಇಂತಹ ಸನ್ನಿವೇಶನದಲ್ಲಿ ಅಗ್ಗದ ವಿದ್ಯುತ್ ಪೂರೈಕೆ ಎಂಬುದು ಬಹುತೇಕ ಅಸಾಧ್ಯ ಎನಿಸಲಿದೆ.

ದಿಲ್ಲಿಗೆ ಮುಖ್ಯವಾಗಿ ವಿದ್ಯುತ್ ಪೂರೈಕೆ ಮಾಡುತ್ತಿರುವವರು ಟಾಟಾಗಳು ಮತ್ತು ಅಂಬಾನಿಗಳು. ದಿಲ್ಲಿಯಲ್ಲಿ ಅಗ್ಗದ ವಿದ್ಯುತ್ ಪೂರೈಕೆ ಸಂಬಂಧ ಈ ಕಂಪನಿಗಳೆರಡೂ ನಮ್ಮ ಮಾತನ್ನು ಕೇಳಿದಿದ್ದರೆ ಅವರೊಂದಿಗಿನ ಒಪ್ಪಂದವನ್ನು ಕೊನೆಗಾಣಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲಾ ಚುನಾವಣೆಪೂರ್ವವೇ ಗುಡುಗಿದ್ದರು. ಆದರೆ ಅಂತಹ ಪರಿಸ್ಥಿತಿ ಎದುರಾದರೆ ನ್ಯಾಯಾಧೀಕರಣದಲ್ಲಿ ದಾವೆ ಹೂಡುವುದಾಗಿ ಈ ಕಂಪನಿಗಳೆರಡೂ ಬೆದರಿಕೆಯೊಡ್ಡಿವೆ. ಹಾಗಾದಲ್ಲಿ arbitration ಪ್ರಕಾರ ಸರಕಾರ ದುಪ್ಪಟ್ಟು ದಂಡ ತೆರಬೇಕಾಗುತ್ತದೆ. ಅದು ದಿಲ್ಲಿ ಸರಕಾರದ ಖಜಾನೆಗೆ ಭಾರಿ ಹೊರೆಯಾಗಲಿದೆ.

ಹಾಗಾದರೆ 11,000 ಕೋಟಿ ರೂ. ನಷ್ಟದ ಬಾಬತ್ತಿನಲ್ಲಿರುವ discomsಗಳಿಗೆ ವಿದ್ಯುತ್ ದರ ಕಡಿಮೆ ಮಾಡಿ ಎಂದು ಸೂಚಿಸುವುದಾದರೂ ಹೇಗೆ? ಕಳೆದ ಒಂದು ದಶಕದಲ್ಲಿ ವಿದ್ಯುತ್ ಉತ್ಪಾದನಾ ವೆಚ್ಚ ಶೇ. 300ರಷ್ಟು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಕಲ್ಲಿದ್ದಲು ಬೆಲೆ ಮತ್ತು ಬಡ್ಡಿ ದರಗಳು ಅಧಿಕ ಪ್ರಮಾಣದಲ್ಲಿರುವುದು. ಆದಾಗ್ಯೂ discomsಗಳು ಶೇ. 70ರಷ್ಟನ್ನು ಮಾತ್ರವೇ ಗ್ರಾಹಕರ ಮೇಲೆ ಹೊರಿಸುತ್ತಿವೆ.

ವಿದ್ಯುತ್ ಉತ್ಪಾದನಾ ವೆಚ್ಚ ಮತ್ತು ವಿದ್ಯುತ್ ದರಗಳ ನಡುವೆ ಭಾರಿ ವ್ಯತ್ಯಾಸವನ್ನು ಪಾಲಿಸಿಕೊಂಡು ಬಂದಿರುವ ಕಂಪನಿಗಳು ಭವಿಷ್ಯದಲ್ಲಿ ಅದನ್ನೆಲ್ಲಾ ಸರಿದೂಗಿಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿವೆ. ಅಂದರೆ ಮೂರೂ discomಗಳು ಸರಕಾರದ ವತಿಯಿಂದ ಅಂದಾಜು 20,000 ಕೋಟಿ ರೂ. ತುಂಬಿಸಿಕೊಳ್ಳುವ ಆಶಯಹೊಂದಿವೆ. ಅಂತಹುದರಲ್ಲಿ ವಿದ್ಯುತ್ ದರ ಕಡಿತಗೊಳಿಸಬೇಕು ಎಂಬುದು ಈ ಕಂಪನಿಗಳಿಗೆ ಮರಣ ಶಾಸನದಂತೆ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಂದಹಾಗೆ, ವಿದ್ಯುತ್ ಸರಬರಾಜನ್ನು 2002ರಲ್ಲಿ ಖಾಸಗೀಕರಣಗೊಳಿಸಲಾಯಿತು. ಅಲ್ಲಿಂದೀಚೆಗೆ Tata Power-run North Delhi Power, Reliance Infrastructure's BSES Yamuna Power ಮತ್ತು BSES Rajdhani Power ಕಂಪನಿಗಳು ರಾಜಧಾನಿಯಲ್ಲಿ ವಿದ್ಯುತ್ ಸರಬರಾಜು ಹೊಣೆಹೊತ್ತಿವೆ.

ಇದೆಲ್ಲರ ಹೊರತಾಗಿಯೂ ಅಗ್ಗದ ದರದಲ್ಲಿ ವಿದ್ಯುತ್ ಪೂರೈಸುತ್ತೇನೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ಹೇಳಿದರೆ ಅದರ ವೆಚ್ಚವನ್ನು ಭರಿಸುವವರು ಯಾರು? ಅಷ್ಟಕ್ಕೂ ಸ್ವತಂತ್ರ ನಿಯಂತ್ರಣ ಸಂಸ್ಥೆ ವಿದ್ಯುತ್ ದರ ನಿಷ್ಕರ್ಶೆಯಲ್ಲಿ ತೊಡಗಿರುವಾಗ ಕೇಜ್ರಿವಾಲಾರ 'ಅಗ್ಗದ ಮಾತನ್ನು' ಕೇಳುವವರು ಯಾರು?

ಇದೆಲ್ಲದರ ಹೊರತಾಗಿಯೂ ಮತದಾರನಿಗೆ ತಾವು ಕೊಟ್ಟಿರುವ ವಾಗ್ದಾನವನ್ನು ಉಳಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದರೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾರು ಸಬ್ಸಿಡಿ ನೀಡಿ ಪಾರಾಗಬಹುದು. ಆದರೆ ಅದಾಗಲೇ ದಿಲ್ಲಿಯ ಆರ್ಥಿಕ ಪರಿಸ್ಥಿತಿ ಅಧೋಗತಿಯಲ್ಲಿದೆ. ಹಾಗಾಗಿ ಖಜಾನೆಯಿಂದ ಸಬ್ಸಿಡಿ ತುಂಬಿಸುವುದು ದೂರದ ಮಾತಾದೀತು.

ಈ ಮೂರೂ discomಗಳು ವಾರ್ಷಿಕ 15,000 ಕೋಟಿ ರೂ ಆದಾಯ ಗಳಿಸುತ್ತಿವೆ. ಒಂದು ವೇಳೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾರು ವಿದ್ಯುತ್ ದರವನ್ನು ಶೇ. 50ರಷ್ಟಾದರೂ ಕಡಿಮೆ ಮಾಡಿದ್ದೇ ಆದಲ್ಲಿ ಖಜಾನೆ ಮೇಲೆ 7,500 ಕೋಟಿ ರೂ ಹೊರೆ ಬೀಳುತ್ತದೆ. ಅಂದಹಾಗೆ ಇದು ಒಂದು ರಾಷ್ಟ್ರ ರಾಜಧಾನಿಯ ಕಥೆಯಲ್ಲ. ದೇಶದ ಎಲ್ಲಾ escomಗಳೂ ಇದೇ ದುರ್ಭರ ಪರಿಸ್ಥಿತಿಯಲ್ಲಿವೆ.

ಕುತೂಹಲದ ಸಂಗತಿಯೆಂದರೆ 2014ನೇ ಸಾಲಿಗೆಂದು ವಿದ್ಯುತ್ ದರವನ್ನು ಶೇ. 7ರಷ್ಟಾದರೂ ಹೆಚ್ಚಿಸಿ ಎಂದು ಈ ಮೂರೂ discomಗಳು ಅಂಧಿನ ಸಿಎಂ ಶೀಲಾ ದೀಕ್ಷಿತರಿಗೇ ದುಂಬಾಲು ಬಿದ್ದಿದ್ದವು! ವಿದ್ಯುತ್ ದರಗಳು ಎಂದೆಂದಿಗೂ ಮೇಲ್ಮುಖವಾಗಿ ಸಾಗುತ್ತವೆ ಎಂಬುದು ಪರಿಣತರ ಅನಿಸಿಕೆ.

English summary
AAP's cheap power politics in New Delhi may not be possible. Aam Aadmi Party ( AAP) leader Kejriwal's victory in Delhi was pegged on promises, with halving electricity rates in the city and conducting an audit of power distribution companies (discoms) being some of the major ones. While Delhiites lapped up the populist promise, discoms in the city said it will be "nearly impossible" to lower the rates, given that the accumulated loss faced by them is as high as Rs 11,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X