ಹೊಸ ಕೊರೊನಾ 'ಸೂಪರ್ ಸ್ಪ್ರೆಡರ್': ಭಾರತದಲ್ಲಿ ಸದ್ಯ ಕಂಡುಬಂದಿಲ್ಲ!
ನವದೆಹಲಿ, ಡಿಸೆಂಬರ್ 23: ಭಾರತದಲ್ಲಿ ಸದ್ಯ ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕಮ್ಮಿಯಾಗುತ್ತಿದ್ದು, ಇದರ ನಡುವೆ ಇಂಗ್ಲೆಂಡ್‌ನಲ್ಲಿ ಹೊಸ ಕೊರೊನಾ ರೂಪಾಂತರವು ಆತಂಕ ಮೂಡಿಸಿರುವುದು ಸುಳ್ಳಲ್ಲ. ಆದರೆ ಸದ್ಯಕ್ಕಂತೂ ಆ ವೈರಸ್ ಭಾರತದಲ್ಲಿ ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಬ್ರಿಟನ್‌ನಲ್ಲಿರುವ ಕೋವಿಡ್-19 ವೈರಸ್ ಹೊಸ ರೂಪಾಂತರವು "ಸೂಪರ್-ಸ್ಪ್ರೆಡರ್" ಆಗಿ ಮಾರ್ಪಟ್ಟಿದೆ. ಆದಾಗ್ಯೂ ವೇಗವಾಗಿ ಹರಡಬಲ್ಲ ಈ ಆಕ್ರಮಣಕಾರಿ ಕೊರೊನಾವೈರಸ್ ಭಾರತದಲ್ಲಿ ಇದುವರೆಗೆ ಕಂಡುಬಂದಿಲ್ಲ ಎಂದು ಎನ್ಐಟಿಐ ಆಯೋಗ್ ಸದಸ್ಯ ಡಾ. ವಿ.ಕೆ.ಪಾಲ್ ಮಂಗಳವಾರ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಮಂಗಳವಾರದ ವೇಳೆಗೆ 3 ಲಕ್ಷ (2,92,518) ಗಿಂತ ಕಡಿಮೆಯಾಗಿದೆ, ಇದು 163 ದಿನಗಳಲ್ಲಿ ಅತ್ಯಂತ ಕಡಿಮೆ.
''ನಾವು ಉತ್ತಮ ಸ್ಥಾನದಲ್ಲಿದ್ದೇವೆ ಮತ್ತು ನಾವು ಈ ಆ ವೇಗವನ್ನು ಉಳಿಸಿಕೊಳ್ಳಬೇಕು. ಜಾಗರೂಕರಾಗಿ ಉಳಿಯುವ ಮೂಲಕ ವೈರಸ್ ಅನ್ನು ನಿಗ್ರಹಿಸಲು ಇದು ಸಹಾಯ ಮಾಡುತ್ತದೆ. ಬ್ರಿಟನ್‌ನಲ್ಲಿ ವೈರಸ್‌ನ ಹೊಸ ರೂಪಾಂತರವನ್ನು ನೋಡಲಾಗಿದೆ'' ಎಂದು ಡಾ. ವಿ.ಕೆ.ಪಾಲ್ ಹೇಳಿದ್ದಾರೆ.

"ನಾವು ಬ್ರಿಟನ್‌ನ ಸಂಶೋಧನಾ ಕೇಂದ್ರದೊಂದಿಗೆ ಮಾತನಾಡಿದ್ದೇವೆ ಮತ್ತು ರೂಪಾಂತರಗೊಂಡ ವೈರಸ್‌ನ ಹರಡುವಿಕೆಯ ಪ್ರಮಾಣವು ಹೆಚ್ಚಿದೆ ಎಂದು ನಮಗೆ ತಿಳಿದಿತ್ತು. ಇದರಿಂದ ಶೇಕಡಾ 70 ರಷ್ಟು ಹರಡುವಿಕೆಯ ಪ್ರಮಾಣ ಹೆಚ್ಚಾಗಿದೆ, ವೈರಸ್ 'ಸೂಪರ್-ಸ್ಪ್ರೆಡರ್' ಆಗಿ ಮಾರ್ಪಟ್ಟಿದೆ ಎಂದು ನಾವು ಹೇಳಬಹುದು" ಎಂದು ಡಾ. ಪಾಲ್ ಹೇಳಿದರು.
ಇದರ ಜೊತೆಗೆ ''ಈ ವೈರಸ್ ರೂಪಾಂತರವು ರೋಗದ ತೀವ್ರತೆಯ ಮೇಲೆ ಪರಿಣಾಮ ಬೀರುವುದಿಲ್ಲ, ಸಾವು ಪ್ರಕರಣಗಳು ಅಥವಾ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಇಲ್ಲ. ಬ್ರಿಟನ್‌ನಲ್ಲಿ ಕಂಡುಬರುವ ಹೊಸ ವೈರಸ್ ಭಾರತದಲ್ಲಿ ಇಲ್ಲಿಯವರೆಗೆ ಕಂಡುಬಂದಿಲ್ಲ, ಭಯಪಡುವ ಅಗತ್ಯವಿಲ್ಲ ಆದರೆ ಸದ್ಯಕ್ಕೆ ನಾವು ಜಾಗರೂಕರಾಗಿರಬೇಕು "ಎಂದು ಅವರು ಹೇಳಿದರು.












Click it and Unblock the Notifications