ನೆಹರು ಪರಂಪರೆಯನ್ನು ಬಿಜೆಪಿ ಹಾಳುಗೆಡವುತ್ತಿದೆ: ಸೋನಿಯಾ ಗಾಂಧಿ
Recommended Video

ನವದೆಹಲಿ, ನವೆಂಬರ್ 14: 'ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೌಲ್ಯಯುತ ಪರಂಪರೆಯನ್ನು ಬಿಜೆಪಿ ಹಾಳುಗೆಡವುತ್ತಿದೆ' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದರು.
ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಮುನ್ನಾದಿನ ಅಂದರೆ ಮಂಗಳವಾರ, ನೆಹರು ಕುರಿತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಬರೆದ ಪುಸ್ತಕವನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
'Nehru: The Invention of India' ಪುಸ್ತಕ ಬಿಡುಗಡೆಗೊಳಿಸಿದ ಅವರು, 'ಇಂದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವವರ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ಉಳಿಸುವ ಮೂಲಕ ನಾವು ನೆಹರು ಅವರಿಗೆ ಗೌರವ ನೀಡಬೇಕಿದೆ' ಎಂದು ಸೋನಿಯಾ ಗಾಂಧಿ ಹೇಳಿದರು.

'1947 ರಲ್ಲಿ ಭಾರತದ ವಿಭಜನೆಯಾದರೂ, ಕಿತ್ತು ತಿನ್ನುವ ಬಡತನವಿದ್ದರೂ ಪ್ರಜಾಪ್ರಭುತ್ವ ದುರ್ಬಲಗೊಂಡಿರಲಿಲ್ಲ. ಪ್ರಜಾಪ್ರಭುತ್ವವನ್ನು ಯಾರೂ ಸದರದಲ್ಲಿ ನೋಡಿರಲಿಲ್ಲ. ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿ, ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ನೆಹರು ಅವರಿಗೆ ಸಲ್ಲಬೇಕು' ಎಂದು ಅವರು ನೆಹರು ಗುಣಗಾನ ಮಾಡಿದರು.
ಜವಾಹರಲಾಲ್ ನೆಹರು ಅವರ 129 ನೇ ಜನ್ಮದಿನವನ್ನು ಇಂದು(ನ.14) ಮಕ್ಕಳ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ.












Click it and Unblock the Notifications