ಯುಪಿಎಗೆ ಭಾರಿ ಮುಖಭಂಗ, ಎನ್ಡಿಟಿವಿ ಸಮೀಕ್ಷೆ ಬಹಿರಂಗ
ನವದೆಹಲಿ, ಏ.4: ಈ ಬಾರಿ ಚುನಾವಣೆ ಕಠಿಣ ಪರೀಕ್ಷೆಯಾಗಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿಕೆ ನೀಡಿದ ಬೆನ್ನಲ್ಲೇ ಎನ್ ಡಿಟಿವಿ ಗುರುವಾರ ರಾತ್ರಿ ಹೊರ ಹಾಕಿರುವ ಸಮೀಕ್ಷಾ ವರದಿಯಲ್ಲಿ ಯುಪಿಎಗೆ ಭಾರಿ ಮುಖಭಂಗ ಅನುಭವಿಸಲಿದೆ ಎಂದು ತಿಳಿದು ಬಂದಿದೆ.
ಎನ್ ಡಿಟಿವಿಗಾಗಿ ಹಂಸಾ ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಎನ್ ಡಿಎ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಜಯಭೇರಿ ಬಾರಿಸಲಿದೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಾತ್ರ ಎನ್ ಡಿಎ ಕೊಂಚ ಹಿನ್ನಡೆ ಅನುಭವಿಸಲಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ಬಿಜೆಪಿ 16(2009ರಲ್ಲಿ 19), ಕಾಂಗ್ರೆಸ್ 10(6), ಜೆಡಿಎಸ್ 2(3) ಸ್ಥಾನಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ 25 ಸ್ಥಾನಗಳಿಸಿ ಜಯಘೋಷ ಮೊಳಗಿಸಲಿದೆ ಡಿಎಂಕೆ 11, ಎನ್ ಡಿಎ 3 ಸ್ಥಾನ ಗಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನಷ್ಟು ವಿವರ ಮುಂದಿದೆ.

ತೆಲಂಗಾಣದ 17 ಸ್ಥಾನಗಳು ಯಾರ ಪಾಲು?
ಬಿಜೆಪಿ 2, ಕಾಂಗ್ರೆಸ್ 7, ಇತರೆ 8.. ವಿವರ ಚಿತ್ರದಲ್ಲಿದೆ

ಸೀಮಾಂಧ್ರದ 25 ಸೀಟುಗಳು ಯಾರಿಗೆ?
ಎನ್ ಡಿಎಗೆ 14 ಸೀಟು, ಕಾಂಗ್ರೆಸ್ 1, ಇತರೆ 10

ಛತ್ತೀಸ್ ಗಢದ 11 ಸ್ಥಾನ ಯಾರ ಪಾಲು?
ಬಿಜೆಪಿಗೆ 8, ಕಾಂಗ್ರೆಸ್ 3

ಮಹಾರಾಷ್ಟ್ರದ 48 ಸ್ಥಾನಗಳು
ಬಿಜೆಪಿ+ 36, ಕಾಂಗ್ರೆಸ್+ 10, ಇತರೆ 2

ಬಿಹಾರದ 40 ಸ್ಥಾನಗಳು
ಎನ್ ಡಿಎ 21, ಯುಪಿಎ 11, ಇತರೆ 8

ಮಧ್ಯಪ್ರದೇಶದ 29 ಸ್ಥಾನಗಳು
ಬಿಜೆಪಿ 25, ಕಾಂಗ್ರೆಸ್ 4,

ರಾಜಸ್ಥಾನದ 25 ಸ್ಥಾನಗಳು
ಬಿಜೆಪಿ 21, ಕಾಂಗ್ರೆಸ್ 3, ಇತರೆ 1

ಜಾರ್ಖಂಡ್ 14 ಸ್ಥಾನಗಳು
ಬಿಜೆಪಿ 10, ಕಾಂಗ್ರೆಸ್ 4

ದೆಹಲಿಯ 7 ಸ್ಥಾನಗಳು
ಬಿಜೆಪಿ 4, ಕಾಂಗ್ರೆಸ್ 1, ಇತರೆ 3












Click it and Unblock the Notifications